ಅಪರಿಚಿತ ಶವ ಪತ್ತೆ
ಕಾಗವಾಡ 11: ತಾಲೂಕಿನ ಶಿರಗುಪ್ಪಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ದಿ. 9ರಂದು ರಾತ್ರಿ ಸುಮಾರು 8.30 ರ ಸುಮಾರಿಗೆ ಅಪರಿಚಿತ ಶವ ಪತ್ತೆಯಾಗಿದ್ದು, ಅಂದಾಜು ವಯಸ್ಸು 55 ರಿಂದ 60, ಎತ್ತರ 5.5 ಇಂಚ್, ಸದಾ ಕಪ್ಪು ಬಣ್ಣ, ತೆಳ್ಳಗಿನ ಮೈಕಟ್ಟು, ಲೇವಿಜ್ ಕಂಪನಿಯ ಜಾಕೆಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕರಿಬಿಳಿ ಮಿಶ್ರಿತ ಕೂದಲು, ಬಲಗೆನ್ನಯ ಮೇಲೆ ನರೋಲಿ ಇರುತ್ತದೆ.
ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಸಿಕ್ಕರೆ ಕಾಗವಾಡ ಪೊಲೀಸ್ ಠಾಣೆಯ ಮೊಬೈಲ್ ನಂ. 9480804063 ಗೆ ಸಂಪರ್ಕಿಸಲು ಕೋರಲಾಗಿದೆ.