ಪಿಕೆಪಿಎಸ್ ಅಧ್ಯಕ್ಷರ ಉಪಾಧ್ಯಕ್ಷರ ಅವಿರೋಧ ಆಯ್ಕೆ
ದೇವರಹಿಪ್ಪರಗಿ, 22 : ಸಾತಿಹಾಳ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಾಹೇಬಗೌಡ ಮದ್ದರಕಿ ಉಪಾಧ್ಯಕ್ಷರಾಗಿ ಈರ್ಪ ಪಡಗಾನೂರ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿಗಳಾದ ಎಸ್.ಎಸ್. ಇನಾಮದಾರ ತಿಳಿಸಿದರು.ತಾಲ್ಲೂಕಿನ ಸಾತಿಹಾಳ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಆವರಣದಲ್ಲಿ ಸೋಮವಾರ ಜರುಗಿದ ಸಾತಿಹಾಳ, ಮಾರ್ಕಬ್ಬಿನಳ್ಳಿ, ಹಾಗೂ ಬೊಮ್ಮನಳ್ಳಿ ಗ್ರಾಮಗಳ ವ್ಯಾಪ್ತಿಯ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ನಿರ್ದೇಶಕರಾದ ಅಶ್ವಿನಿ ವಾಲೀಕಾರ, ರೇಖಾ ಬಾವೂರ, ಶಿವಪ್ಪ ಮದಭಾವಿ, ಮಕ್ತುಮಸಾಬ ಕೂಡಗಿ, ಗುರುಪಾದ ಗಣಿಯಾರ, ವಿರುಪಾಕ್ಷಿ ವಾಲಿ, ಸದಾಶಿವ ಸಜ್ಜನ, ಸೋಮಶೇಖರ ಬಡಿಗೇರ, ದೇವೆಂದ್ರ ಹಾದಿಮನಿ, ರಾಮು ಪವಾರ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.ಚುನಾವಣಾಧಿಕಾರಿಗಳಾದ ಎಸ್.ಎಸ್. ಇನಾಮದಾರ ಕಾರ್ಯನಿರ್ವಹಿಸಿದರು, ಕಾರ್ಯನಿರ್ವಹಣಾಧಿಕಾರಿ ಎನ್.ಬಿ.ಬಜಂತ್ರಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕೋನಪ್ಪಗೌಡ ಪಾಟೀಲ, ಎಂ.ಆರ್.ಪಾಟೀಲ, ರಾಮಚಂದ್ರ ವಾಲೀಕಾರ, ಮಹಿಬೂಬಸಾಬ್ ಬೀಳಗಿ, ಚಿದಾನಂದ ಡೋಣೂರ, ಸಂತೋಷ ಪಾಟೀಲ, ನಜೀರಸಾಬ್ ನಾಯ್ಕೋಡಿ, ಬಾಲಪ್ಪ ಹಾದಿಮನಿ, ಸುನೀಲ ಮಾಗಿ, ಈರಣ್ಣ ಅವಟಿ, ಸಂಗನಗೌಡ ಬಿರಾದಾರ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು