ಲೋಕದರ್ಶನ ವರದಿ
ಶಿಗ್ಗಾವಿ28 : ಇಡೀ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವು ಭಾರತವಾಗಿದೆ, ನಾವೆಲ್ಲರೂ ಒಗ್ಗಟ್ಟಿನಿಂದ ತಾಲೂಕಿನ ಪ್ರಗತಿಗೆ ಹಾಗೂ ಜನರ ನೋವಿಗೆ ಸ್ಪಂದಿಸಿ ಕಾರ್ಯ ಮಾಡೋಣ ಎಂದು ತಾ.ಪಂ ಅಧ್ಯಕ್ಷೆ ಪಾರವ್ವ ಆರೇರ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ್ ಆವರಣದಲ್ಲಿ ದ್ವಜಾರೋಹಣ ನೇರೆವೆರಿಸಿ ಮಾತನಾಡಿದ ಅವರು, ಇಂದು ನಮ್ಮ ಎಲ್ಲ ಸದಸ್ಯರು ಅಧಿಕಾರಿ ವರ್ಗದವರು ಒಗ್ಗಟ್ಟಿನಿಂದ ಗ್ರಾಮೀಣ ಪ್ರದೇಶಗಳ ಅಭೀವೃದ್ದಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡೋಣ ಎಂದರು.
ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಆರ್.ವಾಯ್ ಹೊಸಮನಿ ಮಾತನಾಡಿ ತಾ.ಪಂ ಸಿಬ್ಬಂದಿಗಳಿಗೆ ತಾಲೂಕಿನ ಅಭಿವೃದ್ಧಿಯಲ್ಲಿ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಿಷ್ಟೆಯಿಂದ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರುಗಳಾದ ಈಶ್ವರ ಹರವಿ, ಯಲ್ಲಪ್ಪ ನರಗುಂದ, ರಾಜಕುಮಾರ ವೇಣರ್ೆಕರ, ಸಾತಪ್ಪ ದೇಸಾಯಿ, ವಿಜಯಲಕ್ಷ್ಮೀ ಮುಂದಿನಮನಿ, ತಾರಾಮತಿ ಧರಣೆಪ್ಪನವರ, ಸೋಮವ್ವ ರಾಠೋಡ, ತಾ.ಪಂ ಎ.ಡಿ ಚಂದ್ರು ಪೂಜಾರ, ಎ.ಡಿ ಅಶೋಕ ಕುಂಭಾರ ಸಿಬ್ಬಂದಿಗಳಾದ ಶಂಕರ ಭೋವಿ, ರಾಯಪ್ಪ ನಾಗಪ್ಪನವರ, ಮಂಜುಳಾ ಕಟ್ಟಿಮನಿ, ಚಂದ್ರಕಲಾ ಸೋಮನಗೌಡ, ಅಶೋಕ ಇಂದೂರ, ರಮೇಶ ನೇಲೋಗಲ್, ಸುನಿತಾ ಹರವಿ, ಸಾಕ್ಷರತಾ ಸಂಯೋಕಜಕ ಸಿ.ಎಮ್ ಕಲಕೋಟಿ, ಮಹಾದೇವ ಹೂಗಾರ ಮಾರೂತಿ ಕುಂದರಗಿ, ಮೌಲಾಲಿ ನೆಲ್ಲೂರ, ಗಂಗಮ್ಮ ಕನವಳ್ಳಿ, ಹುಸೇನಸಾಬ ಜಿಗಳೂರ, ಅಶ್ವಿನಿ ಸಿ.ಎಚ್, ಚಂದ್ರಾಭಾಯಿ ಉಡುಪಿ ಮತ್ತು ವಸತಿ ಶಾಲಾ ಶಿಕ್ಷರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.