ಉಗಾರ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಸಕ್ಕರೆ ಕಾಖರ್ಾನೆ ಪ್ರಾರಂಭಿಸಿ 77 ವರ್ಷ ಗತಿಸಿದೆ. ಈ ವರೆಗೆ ಕಬ್ಬು ನುರಿಸುವ ಹಂಗಾಮಿನಲ್ಲಿ ಕ್ಯಾರಿಯರ್ ಪೂಜೆ ವೇಳೆ ಕಬ್ಬು ತುಂಬಿಕೊಂಡು ನೂರಾರು ವಾಹನಗಳು ಆಗಮಿಸಿದಾಗ ಪೂಜೆ ಸಲ್ಲಿಸಿ, ಅದೆ ವೇಳೆ ಪ್ರತ್ಯಕ್ಷ ಕಬ್ಬು ನುರಿಸುವ ಹಂಗಾಮಕ್ಕೆ ಚಾಲನೆ ನೀಡುತ್ತಾ ಬಂದಿದ್ದಾರೆ. ಆದರೆ, ಈ ವರ್ಷ ಯಾವುದೇ ವಾಹನಗಳು ಬಾರದೆ ಕೇವಲ ಕ್ಯಾರಿಯರ್ಗೆ ಪೂಜೆ ಸಲ್ಲಿಸಲಾಯಿತು. ಈ ಬಗ್ಗೆ ಅಲ್ಲಿಯ ಕಾಮರ್ಿಕರು, ಹಿರಿಯ ರೈತರು ಮಾತನಾಡುತ್ತಿದ್ದರು.

ಕಬ್ಬಿನ ದರದ ಬಗ್ಗೆ ಯಾವುದೇ ಚಚರ್ೆಯಿಲ್ಲಾ:

ಕಳೇದ ವರ್ಷದ ಕಬ್ಬಿಗೆ ಪ್ರತಿಟನ 2900 ರೂ. ನೀಡಬೇಕಾಗಿತ್ತು. ಆದರೆ, ಈ ವರೆಗೆ 2300, 2500 ನೀಡಿದ್ದಾರೆ. ವ್ಯತ್ಯಾಸದ ಹಣ ನೀಡುವ ಬಗ್ಗೆ ಮತ್ತು ಪ್ರಸಕ್ತ ಕಬ್ಬು ನುರಿಸುವ ಹಂಗಾಮದ ದರ ಘೋಷಣೆ ಮಾಡೆಯಿಲ್ಲಾ. ಕಬ್ಬು ಬೆಳೆಗಾರರ ರೈತ ಸಂಘಟನೆ ಆಧ್ಯಕ್ಷ ಮೋಹನರಾವ ಶಹಾ ಇವರು 2900 ಹಾಗೂ ಪ್ರಸಕ್ತ ಹಂಗಾಮಿನ ಮೊದಲನೇ ಕಂತು 2500 ನೀಡುವ ಘೋಷಣೆ ಮಾಡಿದ ಬಳಿಕ ಹಂಗಾಮ ಪ್ರಾರಂಭಿಸಿರಿ ಎಂದು ಹೇಳಿದ್ದಾರೆ. ಆದರೆ, ಇಲ್ಲಿಗೆ ಯಾವುದೇ ಚಚರ್ೆಯಾಗಲಿಲ್ಲಾ.

ಕ್ಯಾರಿಯರ್ ಪೂಜೆ ಸಮಾರಂಭದಲ್ಲಿ ರೈತ ಮುಖಂಡ ಶಿವಗೌಡಾ ಕಾಗೆ, ಪ್ರಫೂಲ್ ಥೋರುಶೆ, ಸುರೇಶ ಥೋರುಶೆ, ವಿಜಯ ಶೆಟ್ಟಿ ಮಾಜಿ ಗ್ರಾಪಂ ಆಧ್ಯಕ್ಷರಾದ ಸಂಜಯ ಪಾಟೀಲ, ದೀಪಕ ಪಾಟೀಲ, ಸಕ್ಕರೆ ಕಾಖರ್ಾನೆ ನಿದರ್ೇಶಕ ದೀಪಚಂದ ಶಹಾ, ವಿಜಯ ಶೆಟ್ಟಿ, ಅಧಿಕಾರಿಗಳಾದ ಎನ್.ಆರ್.ಸಿದ್ಧಾಂತಿ, ಎಂ.ಜಿ.ಕುಲಕಣರ್ಿ, ಜಗದೀಶ ಕುಲಕಣರ್ಿ, ಜಗದೀಶ ಪಟವರ್ಧನ, ಜಿ.ಎನ್.ಬಳ್ಳಾರಿ ಸೇರಿದಂತೆ ಉಗಾರ, ಕುಸನಾಳ, ಮೋಳವಾಡ ಗ್ರಾಮಗಳಿಂದ ರೈತರು ಆಗಮಿಸಿದರು.