ಪುಣೆ, ಡಿ.7 - ಬಿಜೆಪಿಯೊಂದಿಗಿನ ದೀರ್ಘ ಕಾಲದ ನಂಟು ಮುರಿದು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಳೆಸಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಇಲ್ಲಿನ ಲೋಹೆಗಾಂವ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಉಭಯ ಗಣ್ಯರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸ್ವಲ್ಪಕಾಲ ಮಾತುಕತೆ ನಡೆಸಿದರು. ಪೊಲೀಸ್ ಮಹಾನಿರ್ದೇಶಕರ ಹಾಗೂ ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಭಾಗವಹಿಸುವ ಮೋದಿ ಆಗಮಿಸಿದ್ದರು. ಬಳಿಕ ಮೋದಿ ತಮ್ಮ ರಾತ್ರಿ ವಾಸ್ತವ್ಯಕ್ಕಾಗಿ ರಾಜಭವನಕ್ಕೆ ತೆರಳಿದರೆ, ಠಾಕ್ರೆ ಮುಂಬೈಗೆ ಮರಳಿದರು.
ಈ ವೇಳೆ ಪ್ರಧಾನಿಯನ್ನು ಸ್ವಾಗತಿಸಲು ಆಗಮಿಸಿದ್ದ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯಪಾಲ ಭಗತ್ ಸಿಇಂಗ್ ಕೋಶಿಯಾರಿ ಕೂಡ ಇದ್ದರು.