ಉ.ಕ.ದ ರಾಹುಲ್ ಯು.ಪಿ.ಎಸ್.ಸಿ. ಯಲ್ಲಿ ರಾಜ್ಯಕ್ಕೆ ಟಾಪರ್ ದೃಢ ಸಂಕಲ್ಪ, ತಂದೆ ತಾಯಿ ಆಶರ್ೀವಾದ ಯಶಸ್ಸಿಗೆ ಕಾರಣ

ಲೋಕದರ್ಶನವರದಿ

ಹುಬ್ಬಳ್ಳಿ 07:   ಸತತ ಅಧ್ಯಯನ, ತಾಳ್ಮೆ, ಸಂಯಮ, ದೃಡ ಸಂಕಲ್ಪ, ಆತ್ಮ ವಿಶ್ವಾಸ, ತಂದೆ-ತಾಯಿ ಆಶೀವರ್ಾದವೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಕಾರಣ ಎಂದು ಕೇಂದ್ರ ಲೋಕಸೇವಾ ಆಯೋಗವು 2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಗಳಿಸಿದ ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ ಅವರು ಮನದ ಮಾತುಗಳನ್ನು ಹೇಳಿದರು.   

   ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.  ಖಾನಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹೈಸ್ಕೂಲ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ಪಡೆದಿದ್ದೆನೆ. 2012ರಲ್ಲಿ ಆರ್ ವಿ ಇಂಜಿನಿಯರಿಂಗ ಕಾಲೇಜಿನಿಂದ ಬಿಇ ಪದವಿ ಪಡೆದು, ಎರಡು ವರ್ಷ ಕಂಪನಿಯಲ್ಲಿ ಕೆಲಸ ಮಾಡಿದೆ. ನಂತರ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದೆ. ದೆಹಲಿಯ ವಾಜಿರಾಮ ಶಿಕ್ಷಣ ಸಂಸ್ಥೆಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದೆನೆ. ಮುಂದೆ ಸ್ವತಂತ್ರವಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದೆ. ಪ್ರಥಮ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ, ಎರಡನೇ, ಮೂರನೇ ಪ್ರಯತ್ನದಲ್ಲಿ ಪರೀಕ್ಷೆಯನ್ನು ತೆರ್ಗಡೆಯಾದೆ, ಆದರೆ ನೇರ ಸಂದರ್ಶನದಲ್ಲಿ ಯಶಸ್ಸು ಸಿಗಲಿಲ್ಲ ಆದರೂ ದೃತಿಗೆಡದೆ ಪ್ರಯತ್ನ ಮುಂದುವರಿಸಿದೆ ಈ ಸಲ ನನಗೆ ರಾಜ್ಯಕ್ಕೆ ಪ್ರಥಮ ಸ್ಥಾನ, ರಾಷ್ಟ್ರಕ್ಕೆ 17ನೇ ಸ್ಥಾನಕ್ಕೆ ಬರುವಷ್ಟು ಅಭೂತಪೂರ್ವ ಯಶಸ್ಸು ಸಿಕ್ಕಿತು ಎಂದು ಸಂತಸದಿಂದ ಹಂಚಿಕೊಂಡರು.   


ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಸುರೇಶ ಡಿ. ಹೊರಕೇರಿ, ಐ.ಎಂ.ಎ ಮಾಜಿ ಅಧ್ಯಕ್ಷ ಡಾ.ವಿ.ಬಿ.ನಿಟಾಲಿ ಅವರು ಮಾತನಾಡಿ ರಾಹುಲ್ಗೆ ಅಭಿನಂದಿಸಿ, ಶುಭಕೋರಿದರು. ರಾಹುಲ್ ಸಾಧನೆಯನ್ನು ಶ್ಲಾಘಿಸಿದರು. 

      ಶಿವರುದ್ರ ಟ್ರಸ್ಟನ ಡಾ. ಬಸವಕುಮಾರ ತಲವಾಯಿ, ರಾಹುಲ್ ತಂದೆ, ಶರಣಪ್ಪ ಸಂಕನೂರ,  ತಾಯಿ ಸವಿತಾ ಸಂಕನೂರ, ಸಹೋದರ ದೀಪಕ ಸಂಕನೂರ, ಉಮಾ ಬಸವಕುಮಾರ ತಲವಾಯಿ, ಆನಂದ ಘಟಪನದಿ, ಮುಂತಾದವರು ಇದ್ದರು. 

   2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 303ನೇ ಸ್ಥಾನ ಗಳಿಸಿದ ನಿವೇದಿತಾ ಶ್ರೀಕಾಂತರೆಡ್ಡಿ ಬಾಲರೆಡ್ಡಿಯವರ ಧಾರವಾಡದವಳು, ಪ್ರಸೆಂಟೆಶನ್ ಸ್ಕೂಲನಲ್ಲಿ  ಶಿಕ್ಷಣ ಪಡೆದಿದ್ದಾಳೆ. ಕೆಸಿಡಿಯಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ ಕಾಲೇಜಿನಿಂದ ಬಿಇ ಪದವಿ ಪಡೆದಿದ್ದಾಳೆ. 

       ಸುರೇಶ ಹೊರಕೇರಿ ಅವರು ನಿವೇದಿತಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ನಿವೇದಿತಾ ಬಹಳ ಸಂತೋಷದಿಂದ ನಾನು ಧಾರವಾಡದವಳೆ, ತಂದೆ ಬಿಎಸ್ಎನ್ಎಲ್ ನಲ್ಲಿ ಸೇವೆ ಮಾಡುತ್ತಿರುವುದರಿಂದ ನಾವೂ ಬೆಂಗಳೂರಿನಲ್ಲಿದ್ದೇನೆ ಎಂದು ಹೇಳಿದರು. ಮಹಾನಗರಕ್ಕೆ ಕೀತರ್ಿ ತಂದು ಕೊಟ್ಟ ರಾಹುಲ್ ಸಂಕನೂರ ಹಾಗೂ ನಿವೇದಿತಾ ಬಾಲರೆಡ್ಡಿಯವರ ಅವರ ಸಾಧನೆಗೆ ರಾಜ್ಯದ ಜನ  ಹರ್ಷ ವ್ಯಕ್ತಪಡಿಸಿದ್ದಾರೆ.