ಲೋಕದರ್ಶನ ವರದಿ
ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯದ ರೆಡ್ ಕ್ರಾಸ ಮತ್ತು ಎನ್ ಎಸ್ ಎಸ್ ಘಟಕ, ಮಕ್ಕಳ ಸಹಾಯವಾಣಿ 1098 ಬೆಳಗಾವಿ, ಪೋಲಿಸ ಇಲಾಖ,ೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಣ ಸಮಿತಿ, ಬಿ.ಎಸ್ ಡಬ್ಲು ಕಾಲೇಜು ಇವರುಗಳ ಆಶ್ರಯದಲ್ಲಿ ಚೈಲ್ಡಲೈನ್ ಸೇ ದೇಸಿ ಸಪ್ತಾಹ ಕಾರ್ಯಕ್ರಮ ನಿಮಿತ್ಯ ಅಂತರಜಾಲ ಸುರಕ್ಷತೆ ಹಾಗೂ ಮಾದಕ ದ್ರವ್ಯ ದುಷ್ಪರಿಣಾಮದ ಕುರಿತು ಜಾಗೃತಿ ಜಾಥಾವನ್ನು ಮಕ್ಕಳ ದಿನಾವರಣೆ ನಿಮಿತ್ಯ ಆಯೋಜಿಸಲಾಗಿತ್ತು.
ಬಿ ಆರ್ ಗಡ್ಡೆಕರ ಆರಕ್ಷಕ ನಿರೀಕ್ಷಕರು ಮಾಳಮಾರುತಿ ಪೋಲಿಸ ಠಾಣೆ ಬೆಳಗಾವಿ ಇವರು ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು ಮುಖ್ಯ ಅತಿಥಿಗಳಾಗಿ ಸಿಸ್ಟರ ಲೂರ್ದ ಅದ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಎನ್ ಜಿ ಬಟ್ಟಲ ಜಾಥಾನಲ್ಲಿ ಉಪಸ್ಥಿತರಿದ್ದರು.
ಜಾಥಾದಲ್ಲಿ ಮಹಾವಿದ್ಯಾಲಯದ ರೆಡ್ ಕ್ರಾಸ ಮತ್ತು ಎನ್ ಎಸ್ ಎಸ್ ಘಟಕ ಪ್ರಶಿಕ್ಷಣಾಥರ್ಿಗಳು ಭಾಗವಹಿಸಿದ್ದರು. ಜಾಥಾವು ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯದಿಂದ ಪ್ರಾರಂಭವಾಗಿ ರುಕ್ಮೀಣಿ ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೊನೆಗೊಂಡಿತು ಮಹಾವಿದ್ಯಾಲಯದ ಎಸ್ ವಿ ವಾಲಿಶೆಟ್ಟಿ, ಬಿ ಆಯ್ ಮಿಡಕನಟ್ಟಿ, ಎಸ್ ಜಿ ಚಿನಿವಾಲ ಉಪನ್ಯಾಸಕ ಬಳಗ ಉಪಸ್ಥಿತರಿದ್ದರು.