ಕೊಲಂಬೊ, ನ 20 (ಯುಎನ್‌ಐ) ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ ಇನ್ನೂ ಎರಡು ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.ಮುಂದಿನ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಬಳಿಕ ಕ್ರಿಕೆಟ್ ವೃತ್ತಿ ಜೀವನಕ್ಕೆೆ ವಿದಾಯ ಹೇಳುವುದಾಗಿ ಲಸಿತ್ ಮಲಿಂಗಾ ಕಳೆದ ಮಾರ್ಚ್‌ನಲ್ಲಿ ಹೇಳಿದ್ದರು. ಆದರೆ, ಇದೀಗ 36ರ ಪ್ರಾಯದ ವೇಗಿ ಯೂ ಟರ್ನ್ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಬಳಿಕವೂ ಆಡುವುದಾಗಿ ತಿಳಿಸಿದ್ದಾರೆ.‘ ಟಿ-20 ಪಂದ್ಯದಲ್ಲಿ ಬೌಲರ್‌ಗೆ ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಲು ಅವಕಾಶವಿರುತ್ತದೆ. ಚುಟುಕು ಮಾದರಿ ಬೌಲರ್ ಆಗಿ ನಾನು ನಿಭಾಯಿಸಬಹುದು. ಟಿ-20 ಕ್ರಿಕೆಟ್ ನಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಆಡಿದ್ದೇನೆ. ಮುಂದಿನ ಇನ್ನೂ ಎರಡು ವರ್ಷಗಳ ಕಾಲ ಟಿ-20 ಕ್ರಿಕೆಟ್‌ನಲ್ಲಿ ಮುಂದುವರಿಯಲು ಶಕ್ತನಿದ್ದೇನೆ.’’ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.‘‘ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸುವ ಇರಾದೆ ಹೊಂದಿದ್ದೇನೆ. ಆದರೆ, ಶ್ರೀಲಂಕಾದಲ್ಲಿ ಇದು ಏನಾಗಲಿದೆ ಎಂಬುದು ಕಾದು ನೋಡಬೇಕು.’’ ಎಂದು ಹೇಳಿದ್ದಾಾರೆ.
ಶ್ರೀಲಂಕಾ ದಲ್ಲಿ ಕೌಶಲಭರಿತ ಬೌಲರ್‌ಗಳು ಇದ್ದಾಾರೆ. ಆದರೆ, ಸ್ಥಿರ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಒಂದು ಅಥವಾ ಒಂದೂವರೆ ವರ್ಷದಲ್ಲಿ ಬೌಲಿಂಗ್‌ನಲ್ಲಿ ಪ್ರಭುತ್ವ ಸಾಧಿಸಲು ಸಾಧ್ಯವಿಲ್ಲ. ಎರಡು ಅಥವಾ ಮೂರು ವರ್ಷಗಳು ಇದಕ್ಕೆೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಗಳಿಸಿರುವ ಮಲಿಂಗಾ ಅವರ ನಾಯಕತ್ವದಲ್ಲಿ ಶ್ರೀಲಂಕಾ 10 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಒಂದು ಗೆಲುವು, ಮತ್ತೊೊಂದು ಟೈ ಆಗಿತ್ತು. ಇನ್ನುಳಿದ ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.