ಧಾರವಾಡದಲ್ಲಿ ಸಮೇತಿ (ಉತ್ತರ) ವತಿಯಿಂದ ಎರಡು ದಿನಗಳ “ವಾರ್ಷಿಕ ತರಬೇತಿ ಯೋಜನಾ ಕಾರ್ಯಾಗಾರ”
Two-day “Annual Training Plan Workshop” organized by Sameti (North) in Dharwad
ಧಾರವಾಡ 22: ಕೃಷಿ ವಿಶ್ವವಿದ್ಯಾಲಯ, ಧಾರವಾಡ, ವಿಸ್ತರಣಾ ನಿರ್ದೇಶನಾಲಯ, ಸಮೇತಿ (ಉತ್ತರ) ವತಿಯಿಂದ ಕೃಷೋನ್ನತಿ-ಕೃಷಿ ವಿಸ್ತರಣೆ ಉಪ ಅಭಿಯಾನ (ಅತ್ಮ) ಯೋಜನೆಯಡಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಅತ್ಮ ಸಿಬ್ಬಂದಿಗಳಿಗೆ 2026 ಜನೇವರಿ 20 ರಿಂದ 21 ರವರೆಗೆ ಸಿಬ್ಬಂದಿ ತರಬೇತಿ ಘಟಕಢದಲ್ಲಿ ಆಯೋಜಿಸಲಾದ ಎರಡು ದಿನಗಳ “ವಾರ್ಷಿಕ ತರಬೇತಿ ಯೋಜನಾ ಕಾರ್ಯಾಗಾರ”ವನ್ನು ಕೃ.ವಿ.ವಿ., ಧಾರವಾಡದ ವಿಸ್ತರಣಾ ನಿರ್ದೇಶಕರಾದ ಡಾ. ಎಂ. ವಿ. ಮಂಜುನಾಥರವರು ಉದ್ಘಾಟನೆ ಮಾಡಿ, ಇತ್ತೀಚೆಗೆ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದು, ಹೊಸ ಹೊಸ ತಂತ್ರಜ್ಞಾನಗಳ ಬಳಕೆ ಕುರಿತು ಮಾಹಿತಿಯನ್ನು ರೈತರಿಗೆ ನೀಡಬೇಕಾಗಿದೆ. ಆದ್ದರಿಂದ, ಹೊಸ ಹೊಸ ವಿಷಯಗಳ ಕುರಿತು ತರಬೇತಿ ಪಡೆದು ರೈತರಿಗೆ ಮಾಹಿತಿ ಹಂಚುವುದು ಅವಶ್ಯವಾಗಿದೆ ಎಂದು ಹೇಳಿದರು.
ಡಾ. ಎಸ್. ಎನ್. ಜಾಧವ, ಪ್ರಾಧ್ಯಾಪಕರು ಹಾಗೂ ತರಬೇತಿ ಸಂಯೋಜಕರು ಸಮೇತಿ (ಉತ್ತರ), ಕೃ.ವಿ.ವಿ.,ಧಾರವಾಡ ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡು ದಿನದ ಕಾರ್ಯಾಗಾರದಲ್ಲಿ ಡಾ. ಗೀತಾ ತಮಗಾಳೆ, ಡಾ. ಎಸ್. ಎಸ್. ಡೊಳ್ಳಿ, ಡಾ. ಎಸ್. ಎನ್. ಜಾಧವ ಹಾಗೂ ಶ್ರೀಮತಿ ಗೀತಾ ಲೋಳಸೂರಮಠ ಇವರಿಂದ ನಾಲ್ಕು ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಒಟ್ಟು 34 ಜನ ಅತ್ಮ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಎರಡು ದಿನಗಳ “ವಾರ್ಷಿಕ ತರಬೇತಿ ಯೋಜನಾ ಕಾರ್ಯಾಗಾರ”ವನ್ನು ಕೃ.ವಿ.ವಿ., ಧಾರವಾಡದ ವಿಸ್ತರಣಾ ನಿರ್ದೇಶಕರಾದ ಡಾ. ಎಂ. ವಿ. ಮಂಜುನಾಥರವರು ಉದ್ಘಾಟನೆ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 