ತುಂಗಭದ್ರಾ ಗೃಹ ನಿರ್ಮಾಣ ಸಹಕಾರಿ ಸಂಘ :ಅಧ್ಯಕ್ಷ ಸಿ.ಸಿ. ಪಾಟೀಲ - ಉಪಾಧ್ಯಕ್ಷೆ ಪಾರವ್ವ ಉಮೇಶ ಅರಳಿ

Tungabhadra Home Building Co-operative Society: President C.C. Patil - Vice President Paravva Umesh

ತುಂಗಭದ್ರಾ ಗೃಹ ನಿರ್ಮಾಣ ಸಹಕಾರಿ ಸಂಘ :ಅಧ್ಯಕ್ಷ ಸಿ.ಸಿ. ಪಾಟೀಲ - ಉಪಾಧ್ಯಕ್ಷೆ    ಪಾರವ್ವ ಉಮೇಶ  ಅರಳಿ.  

  ರಾಣೇಬೆನ್ನೂರು  03:  ಇಲ್ಲಿನ ತುಂಗಭದ್ರಾ ಗ್ರಹ ನಿರ್ಮಾಣ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು.   ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿ. ಸಿ. ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಪಾರವ್ವ ಉಮೇಶ ಅರಳಿ ಅವರು ಅವಿರೋಧವಾಗಿ ಆಯ್ಕೆಗೊಂಡರು.   

     2024-25 ರಿಂದ  ಐದು ವರ್ಷಗಳ ಕಾಲದ ಅವಧಿಯ ಈ ಚುನಾವಣೆಯು ಇತ್ತೀಚೆಗೆ ನಡೆಯಿತು.  ಇನ್ನುಳಿದಂತೆ ಆಡಳಿತ ಮಂಡಳಿಯ ನಿರ್ದೇಶಕರಾಗಿ,     ಶಾಂತಾ ಷಣ್ಮುಖಪ್ಪ ಡೊಂಬರ, ಸೋಮಶೇಖರ ಪು. ಸಣ್ಣಮನಿ, ಪ್ರಕಾಶ್ ರಾ. ಲಕ್ಷ್ಮೇಶ್ವರ, ಕೊಟ್ರೇಶಪ್ಪ ಚ. ಎಮ್ಮಿ,   ಮೀನಾಕ್ಷಮ್ಮ  ಶಿ. ಉಜ್ಜಣ್ಣನವರ,  ಟಿ.ಕೆ.ಎಮ್‌.ಬಸವರಾಜಯ್ಯ, ರಾಮನಗೌಡ  ಭ. ಸೊರಟೂರ, ಮಹೇಶ್ ಮ. ಅಡಿವೆಪ್ಪನವರ ಮತ್ತು ಮುರುಗೇಶಪ್ಪ ಹೇ. ಬೆನ್ನೂರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ, ಮತ್ತು ಚುನಾವಣಾಧಿಕಾರಿ   ಸುಧಾ ವಿಕ್ರಂ. ಕುಲ್ಕರ್ಣಿ ಅವರು ತಿಳಿಸಿದರು.