ಪುಣ್ಯಕೋಟಿ ಮಠದ ನದಿ ದಡದಲ್ಲಿ ತುಂಗಭದ್ರಾ ಆರತಿ
ರಾಣೇಬೆನ್ನೂರ 13: ಸುಕ್ಷೇತ್ರವೆಂದೇ ಹೆಸರಾದ ತಾಲೂಕಿನ ಕೋಡಿಯಾಲ ಹೊಸಪೇಟೆಯ ಅವಿಮುಕ್ತ ತಪೋ ಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ಶ್ರೀ ಶೈಲ ಜಗದ್ಗುರುಗಳ ಸಾನಿಧ್ಯದಲ್ಲಿ ಉತ್ತರ ಭಾರತದ ಗಂಗಾ ನದಿ ತೀರದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿ ಶ್ರೀ ಮಠದ ಬಲಭಾಗದಲ್ಲಿ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿ ತೀರದಲ್ಲಿ 6ನೇ ವರ್ಷದ ಐತಿಹಾಸಿಕ ತುಂಗಾರತಿಯು ಫೆ. 15 ರಂದು ಸಂಜೆ 5 ಘಂಟೆಗೆ ಜರಗಲಿದೆ ಎಂದು ಬಾಲಯೋಗಿ ಜಗದೀಶ್ವರ ಸ್ವಾಮೀಜಿಗಳು ಹೇಳಿದರು. ಮಂಗಳವಾರ ತಾಲೂಕಿನ ಅವಿಮಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಂದು ತುಂಗಾರತಿ ಧಾರ್ಮಿಕ ಸಭೆಯಲ್ಲಿ ಆಂಧ್ರ ಪ್ರದೇಶ ಶ್ರೀಶೈಲ ಮಹಾ ಪೀಠ ಜಗದ್ಗುರು ಡಾ: ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸುವರು ಎಂದರು. ಸಾನಿಧ್ಯವನ್ನು ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮಿಗಳು, ಅಕ್ಕಿ ಆಲೂರು ಮುತ್ತಿನಕಂತಿಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು.
ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಪುಣ್ಯಶ್ರಮದ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು. ನಾಗವಂದ ಧರ್ಮ ಕ್ಷೇತ್ರ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು. ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಸ್ವಾಮಿಗಳು ವಹಿಸುವರು. ಶಾಸಕ ಪ್ರಕಾಶ್ ಕೋಳಿವಾಡ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಬಸವರಾಜ್ ಬೊಮ್ಮಾಯಿ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ. ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ. ಮಾಜಿ ಶಾಸಕ ಅರುಣಕುಮಾರ ಪೂಜಾರ. ದಾವಣಗೆರೆ ಪೂರ್ವ ವಲಯ ಐಜಿಪಿ ಡಾ ಜಿ.ಆರ್. ರವಿಕಾಂತಗೌಡ. ಹಾವೇರಿ ಜಿಲ್ಲಾಧಿಕಾರಿ ವಿಜಯ ಮಾಂತೇಶ ದಾನಮ್ಮನವರ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವವರು ಎಂದು ಶ್ರೀಗಳು ತಿಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ. ರೈತ ಮುಖಂಡ ರವೀಂದ್ರಗೌಡ ಪಾಟೀಲ್. ಶಿವಕುಮಾರ್ ಜಾದವ್. ಕರಿಯಪ್ಪ ಮಾಳಿಗೇರ, ಕೊಟ್ರೇಶಪ್ಪ ಎಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ ಸೇರಿದಂತೆ ಮತ್ತಿತರರು ಇದ್ದರು.