ತಿಂಡಿಗೆ ಬಂದ ತುಂಡೇರಾಯ - ನಾಟಕ ಪ್ರದರ್ಶನ

Tunderaya who came to breakfast - drama performance


ತಿಂಡಿಗೆ ಬಂದ ತುಂಡೇರಾಯ - ನಾಟಕ ಪ್ರದರ್ಶನ 

ಹಂಪಿ 14: ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗ ದತ್ತಿನಿಧಿ ಮತ್ತು ನಾಟಕ ವಿಭಾಗದ ಆಶ್ರಯದಲ್ಲಿ ಡಿಸೆಂಬರ್ 13, 2024ರ ಶುಕ್ರವಾರ ಭುವನ ವಿಜಯ ಸಭಾಂಗಣದಲ್ಲಿ ಏರಿ​‍್ಡಸಿದ್ದ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನಕ್ಕೆ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿದರು.  

ನಾಟಕ ವಿಭಾಗದ ಮುಖ್ಯಸ್ಥರು ಹಾಗೂ ಶ್ರೀರಂಗ ದತ್ತಿನಿಧಿಯ ಸಂಚಾಲಕರಾದ ಡಾ.ವೀರೇಶ ಬಡಿಗೇರ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ತಿಂಡಿಗೆ ಬಂದ ತುಂಡೇರಾಯ ಜರ್ಮನ್ ನಾಟಕಕಾರ ಬರ್ಟೋಲ್ಟ್‌ ಬ್ರೆಕ್ಟ್‌ ಅವರ ‘ಖಿಜ ಡಿಣಛಟಜ ಡಿಜ ಠ ಂಡಿಣಣಡಿಠ ಗ’ ನಾಟಕವನ್ನು ಆಧರಿಸಿದೆ. ಅದು ಎರಡನೇ ಪ್ರಪಂಚ ಯುದ್ದಕ್ಕು ಮೊದಲು ಜರ್ಮನಿಯಲ್ಲಿ ಅಡಾಲ್ಟ್‌ ಹಿಟ್ಲರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಆ ನಾಟಕದ ಎಲ್ಲ ಪಾತ್ರಗಳು ಹಾಗೂ ಘಟನೆಗಳು ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿವೆ ಎಂದು ತಿಳಿಸಿದರು. 

ಬೆಂಗಳೂರಿನ ನಿರ್ದಿಗಂತ ನಾಟಕ ತಂಡದ ಪ್ರದರ್ಶನದಲ್ಲಿ ಶಕೀರ್ ಅಹ್ಮದ್ ಅವರು - ನಾಟಕದ ನಿರ್ದೇಶನ, ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿದ್ದರು. ಶ್ವೇತಾರಾಣಿ ಹೆಚ್‌.ಕೆ. ಅವರು - ರಂಗಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸ, ಅನುಷ್ ಶೆಟ್ಟಿ, ಮುನ್ನಾ ಮೈಸೂರು ಇವರು - ಸಂಗೀತ, ಖಾಜುಗುತ್ತಲ - ಕಲೆ, ಮಂಜುನಾಥ ಹೆಚ್‌.ಸಿ. - ಬೆಳಕು ನಿರ್ವಹಿಸಿದ್ದರು. ಅಜಯ ಭಂಡಾರಿ - ತಾಂತ್ರಿಕ ಸಹಾಯಕರಾಗಿ, ಗಣೇಶ ಭೀಮನಕೋಣೆ - ನಿರ್ವಹಣೆ ಹೊತ್ತಿದ್ದರು. ರಂಗದಲ್ಲಿ ಸಿದ್ದಪ್ಪ ಮಾದರ, ಮಂಜುನಾಥ ವನಕೇರಿ, ಪಂಪನಗೌಡ ಸಿಂಧನೂರು, ಹನುಮಂತ ನಾಯ್ಕರ್, ಸಂಭ್ರಮ ಸೊನ್ನದ, ರೇಣುಕಾ ವೈಕೆ., ಗಣಪತಿಗೌಡ ಹೊನ್ನಾವರ, ಹನುಮಂತ ಜಿ.ಟಿ., ಯಲ್ಲಪ್ಪ ಹೆಳವರ, ಮುರಳಿಕೃಷ್ಣ ಭಜಂತ್ರಿ ಇವರು ಪಾತ್ರದಲ್ಲಿ ಹೊಕ್ಕು ಎಲ್ಲರನ್ನು ಸೂರೆಗೊಂಡರು. 

ಲಲಿತಕಲಾ ನಿಕಾಯದ ಡೀನರಾದ ಡಾ. ಶಿವಾನಂದ ಎಸ್‌. ವಿರಕ್ತಮಠ, ಭಾಷಾ ನಿಕಾಯದ ಡೀನರಾದ ಡಾ.ಎಫ್‌.ಟಿ.ಹಳ್ಳಿಕೇರಿ ಹಾಗೂ ವಿಜ್ಞಾನ ನಿಕಾಯದ ಡೀನರಾದ ಡಾ.ಶೈಲಜಾ ಇಂ. ಹಿರೇಮಠ ಅವರು ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಆಸಕ್ತಿಯಿಂದ ನಾಟಕವನ್ನು ವೀಕ್ಷಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿ ಹರೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಾಟಕ ಪ್ರದರ್ಶನದ ನಂತರ ನಾಟಕ ತಂಡದ ಕಲಾವಿದರನ್ನು ಮಾನ್ಯ ಕುಲಪತಿಯವರು ಗೌರವಿಸಿದರು.