ತುಮಕೂರು ಬಿಟ್ಟುಕೊಟ್ಟಿದ್ದು ದೊಡ್ಡ ಅನ್ಯಾಯ: ಪರಮೇಶ್ವರ್

ಬೆಂಗಳೂರು 29:ಲೋಕಸಭಾ ಚುನಾವಣೆಯ ಕಾವು ಬಿಸಿಯಾಗುತ್ತಿರುವಾಗಲೇ ಕಾಂಗ್ರೆಸ್ -ಹ್ಪÙಳ್ತವ್ಠ್ಲಿ  ಮೈತ್ರಿ ಪಕ್ಷಗಳ ನಡುವೆ ಅಪಸ್ವರ, ಗೊಂದಲ ಬಹಿರಂಗವಾಗುತ್ತಿದೆ.   ತುಮಕೂರು ಬಿಟ್ಟುಕೊಟ್ಟಿದ್ದು ನಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ , ಉಪ ಮುಖ್ಯಮಂತ್ರಿ ಪರಮೇಶ್ವರ್ ನೋವು ತೋಡಿಕೊಂಡಿದ್ದಾರೆ . ಹಾಲಿ ಸಂಸದ ಮುದ್ದ ಹನುಮೇಗೌಡ ಅವರು ಮೋದಿ ಅಲೆಯಲ್ಲೂ ಗೆದ್ದು ಬಂದಿದ್ದರು. ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆದರೆ ತುಮಕೂರು ಜೆಡಿಎಸ್ ಗೆ ಬಿಟ್ಟಿದ್ದರಿಂದ ಆಘಾತಕ್ಕೊಳಗಾಗಿ ಅವರು ಬಂಡಾಯ ಅಭ್ಯಥರ್ಿಯಾಗಿ ಕಣ್ಕಕೆ ಇಳಿದಿದ್ದಾರೆ. ಆದರೆ ವರಿಷ್ಠರ ಮನವಿ ಮೆರೆಗೆ ಅವರು ಇಂದು ನಾಮಪತ್ರ ವಾಪಸ್ ಪಡೆದು ಮಿತ್ರಪಕ್ಷದ ಅಭ್ಯಥರ್ಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಗೆಲುವಿಗೆ ಸಹಕರಿಸಲಿದ್ದಾರೆ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ. ಮುದ್ದ ಹನುಮೇಗೌಡರು ಅವರ ಬೆಂಬಲಿಗರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ಬಿಟ್ಟುಕೊಡಬೇಕಾದಾಗ ನಮಗೆ ಆತಂಕ ಆಗಿತ್ತು. ಸ್ವಾಭಾವಿಕವಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಮಪತ್ರ ಹಾಕಿದ್ದಾರೆ. ಎಐಸಿಸಿ ಉಸ್ತುವಾರಿ ವೇಣುಗೋಪಾಲ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರು ಮನವೊಲಿಸಲು ಸೂಚನೆ ಕೊಟ್ಟಿದ್ದಾರೆ. ಅಂತಿಮವಾಗಿ ಮುದ್ದಹನುಮೇಗೌಡರು ಉಮೇದುವಾರಿಕೆ  ವಾಪಸ್ ಪಡೆದು ಸಹಕರಿಸಲಿದ್ದಾರೆ ಎಂದರು. 

ಈ ನಡುವೆ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ಅವರನ್ಜು ಗೌರವಯುತವಾಗಿ ನೋಡಿಕೊಳ್ಳುತ್ತೇವೆ ಪಕ್ಷದ ಪರವಾಗಿ ವಿನಂತಿ ಮಾಡಿದ್ದೇವೆ ನಾಮಪತ್ರ ವಾಪಸ್ ಪಡೆಯುವಂತೆ ಕೇಳಿಕೊಂಡಿದ್ದೇನೆ ಅವರ ಸ್ಪಧರ್ೆಯಿಂದ ಅಕ್ಕಪಕ್ಕದ ಕ್ಷೇತ್ರಗಳಿಗೂ ತಪ್ಪು ಸಂದೇಶ ರವಾನೆಯಾಗುತ್ತದೆ ಒಳ್ಳೆಯ ತೀಮರ್ಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದರು . ಮುದ್ದಹನುಮೇಗೌಡ ಹೇಳಿಕೆ ನೀಡಿ, ಮುಖಂಡರ ಜೊತೆ ಚಚರ್ೆ ಮಾಡಿದ್ದೇನೆ. ಕಳೆದ ಏಳೆಂಟು ದಿನಗಳಿಂದ ಸಾವಿರಾರು ಮಂದಿ ನೋವು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಅನೇಕ ಘಟನೆ ಎದುರಿಸಿದ್ದೇನೆ ಆದರೆ ಈಗಿನ ಪರಿಸ್ಥಿತಿಯೇ ಬೇರೆ ತುಮಕೂರಿನಲ್ಲಿ ಕಾರ್ಯಕರ್ತರು, ಮುಖಂಡರ  ಜೊತೆ ಅವರೊಂದಿಗೆ ಚಚರ್ೆ ಮಾಡಿ ಮುಂದಿನ ತೀಮರ್ಾನ ತೆಗೆದುಕೊಳ್ಳುವುದಾಗಿ ಹೇಳಿದರು.  ಏಪ್ರಿಲ್ 18 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಪಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದೆ. ಸಂಜೆಯ ನಂತರ ಕಣದಲ್ಲಿ ಉಳಿಯುವ ಅಭ್ಯಥರ್ಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ .