ಅಪ್ಪು ಟ್ರೋಫಿ ಗೆದ್ದು ಬಿಗಿದ ತುಳಜಾಪುರ ತಂಡ ಕ್ರೀಡೆ ಮನುಷ್ಯನನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠ ಮಾಡುತ್ತದೆ : ಸಿದ್ದು ಕೊಣ್ಣೂರ
ಮಹಾಲಿಂಗಪುರ 30 : ಇಂದಿನ ದಿನಮಾನದಲ್ಲಿ ಮನುಷ್ಯ ಅರೋಗ್ಯದ ಕಡೆ ಗಮನ ಕೊಡುವುದು ಅತೀ ಮುಖ್ಯವಾಗಿದೆ.ವೇಗದ ಜೀವನಕ್ಕೆ ಮಾರುಹೋಗಿ ತನ್ನ ಅರೋಗ್ಯವನ್ನು ನಿರ್ಲಕ್ಷ ಮಾಡುತ್ತಿರುವುದು ವಿಪರ್ಯಾಸ ತಾನು ಇಡೀ ಜೀವಮಾನ ದುಡಿದು ಕೊನೆಗೆ ಎಲ್ಲವನ್ನು ತನ್ನ ಆರೋಗ್ಯಕ್ಕೆ ವೆಚ್ಚ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ನಿತ್ಯವು ಅರ್ಧ ಗಂಟೆ ವಾಕಿಂಗ್ ನಿಯಮಿತ ಯೋಗ ಮಾಡಿದರೆ ಜೀವನ ಪೂರ್ತಿ ನಿರೋಗಿಯಾಗಿ ಬದುಕಬಹುದು. ಆಟ ಆಡುವುದರಿಂದ ಮನುಷ್ಯ ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠನಾಗುತ್ತಾನೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕರಾದ ಸಿದ್ದು ಕೊಣ್ಣೂರ ಹೇಳಿದರು.ಅವರು ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸ್ಥಳೀಯ ಮಹಾಲಿಂಗಪುರ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಅಂತರರಾಜ್ಯ ಅಪ್ಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಪ್ಪು ಟ್ರೋಫಿ ವಿತರಿಸಿ ಮಾತನಾಡಿ ನಾವು ಇಂದು ಮೊಬೈಲ್ ಯುಗದಲ್ಲಿ ಇದ್ದೇವೆ ಅದು ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ದುರ್ಬಲರನ್ನಾಗಿ ಮಾಡುತ್ತಿದೆ. ಮೊಬೈಲ್ ಇಲ್ಲದೆ ಬದುಕುವುದು ಕಷ್ಟ್ ಆದರೆ ಮೊಬೈಲೇ ಎಲ್ಲಾ ಅಲ್ಲಾ ಅದು ಎಷ್ಟು ಬೇಕು ಅಷ್ಟು ಬಳಸಿ ಅದರೊಂದು ಜೀವನ ಕೂಡಾ ವೇಗ ಪಡೆದುಕೊಂಡಿದೆ ಅದರ ಮಧ್ಯೆ ಬದುಕು ಅದರೊಂದಿಗೆ ಆಟವೂ ಇರಲಿ ಏನೇ ಹೆಣ್ಣು ಇರಲಿ ಗಂಡು ಇರಲಿ ಮನೆಗೊಬ್ಬ ಕ್ರೀಡಾಪಟು ಇರಲಿ ಎಂದು ಹೇಳಿದರು.ಬಸ್ ನಿಲ್ದಾಣ ಹತ್ತಿರ ಗೋಕಾಕ ರೋಡ್ ಮಾರ್ಗದ ಸರ್ಕಾರಿ ಪಿ ಯು ಕಾಲೇಜಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಟೂರ್ನಿಯ ಅಂತಿಮ ಪಂದ್ಯ ರಬಕವಿ ಮತ್ತು ತುಳಜಾಪುರ ಮಧ್ಯ ಜರುಗಿತು. ರಬಕವಿ ಟಾಸ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ತುಳಜಾಪುರ ತಂಡ 8 ಓವರಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 122 ರನಗಳ ಬ್ರಹತ್ ಮೊತ್ತವನ್ನೇ ಕಲೆ ಹಾಕಿತು ಇದರಲ್ಲಿ ಭಾರತ ಟೆನ್ನಿಸ ಬಾಲ ಕ್ರಿಕೆಟ್ ತಂಡದ ಆಟಗಾರ ಸೌರಭ್ 41 ರನ್ ಕೃಷ್ಣಾ 16 ರನ್ನ ಪ್ರಣವ್ 38 ರನ್ನ ಅತೀಶ್ 23 ರನ್ನಗಳು ಕೊಡುಗೆ ನೀಡಿದರು ಇದಕ್ಕೆ ಉತ್ತರವಾಗಿ ಬ್ಯಾಟ ಮಾಡಿದ ರಬಕವಿ ಐದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ 24 ರನ್ನಗಳಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಂತಿಮ ಪಂದ್ಯ ಗೆದ್ದು ಪ್ರಥಮ ಸ್ಥಾನ ಪಡೆದ ತುಳಜಾಪುರ ತಂಡ ನಗದು 1 ಲಕ್ಷ , ಹಾಗೂ ಟ್ರೊಪಿಯನ್ನು ತನ್ನದಾಗಿಸಿಕೊಂಡು ಅಪ್ಪು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು, ದ್ವಿತೀಯ ಸ್ಥಾನ ಪಡೆದ ರಬಕವಿ ತಂಡ 50 ಸಾವಿರ ಹಾಗೂ ಅಪ್ಪು ಟ್ರೊಪಿಯನ್ನು ತನ್ನದಾಗಿಸಿಕೊಂಡಿತು,ತೃತೀಯ ಸ್ಥಾನವನ್ನು ಹರಳವಾಡಿ ತಂಡ 20 ಸಾವಿರ ನಗದು ಹಾಗೂ ಆಕರ್ಷಕ ಅಪ್ಪು ಟ್ರೋಫಿಯನ್ನು ಪಡೆದುಕೊಂಡವು.ಪಂದ್ಯಾವಳಿಯಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ ಟೂರ್ನಿ ಉದ್ದಕ್ಕೂ ಉತ್ತಮವಾಗಿ ಬ್ಯಾಟ ಮಾಡಿದ ತುಳಜಾಪುರದ ಸೌರಭ್ ಸರಣಿ ಪುರುಷ ಪ್ರಶಸ್ತಿ ಪಡೆದುಕೊಂಡರು. ರಬಕವಿಯ ಸಿರಾಜ ಉತ್ತಮ ಬೌಲರ ಪ್ರಶಸ್ತಿ ಪಡೆದುಕೊಂಡರು. ರಬಕವಿ ತಂಡದ ಅಜೇಯ ಆಲರೌಂಡರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಂದರ್ಭದಲ್ಲಿ ಬಸವರಾಜ ರಾಯರ ಪ್ರಾಸ್ತವಿಕವಾಗಿ ಮಾತನಾಡಿದರು.ಡಾ ಎ ಆರ್ ಬೆಳಗಲಿ, ಮಹಾಲಿಂಗ ಸನದಿ, ಬಸವರಾಜ ಹಿಟ್ಟಿನಮಠ,ಮಲ್ಲಪ್ಪ ಸಿಂಗಾಡಿ, ಯಮನೂ ಉಪ್ಪಾರ, ರಾಜು ನದಾಫ, ಬಸವರಾಜ್ ಘಟ್ನಟ್ಟಿ, ಚನ್ನಬಸು ಹುರಕಡ್ಲಿ, ಅಶೋಕ ಜ ಅಂಗಡಿ, ಎಸ್ ಎಸ್ ಈಶ್ವರ್ಪಗೋಳ, ಮಹೇಶ ಆರಿ, ಹಣಮಂತ ಬಂದಿವಡ್ಡರ,ಪ್ರಕಾಶ ಕರ್ಲಟ್ಟಿ, ಚನ್ನಪ್ಪ ಬಾಯಪ್ಪಗೋಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶ್ರೀಕಾಂತ ಮಾಗಿ, ಶಿವಶಂಕರ್ ಗುಜ್ಜರ್, ಮಹಾಲಿಂಗ ಗುಜ್ಜರ, ಚಂದ್ರು ಸಂಶಿ,ಮಹಾಲಿಂಗಪ್ಪ ಮಾಳಿ, ಯಾಸೀನ್ ಪಾಂಡು, ರಾಜು ಶೆಟ್ಟರ್, ಅವನೇಶ ಜಾಧವ, ಸಿರಾಜ ಪೆಂಡಾರಿ,ಪರಶುರಾಮ ಪಾತ್ರೋಟ . ಮಹಾದೇವ ಕಡಬಲ್ಲವರ, ಅಬೂಬಕರ, ಬಸವರಾಜ ಮುಗಳಖೋಡ, ರಮೇಶ ಗೋಲಬಾವಿ, ಸದಾಶಿವ ಗೊಬ್ಬರದ, ಹಣಮಂತ ವಗ್ಗರ,ಮಲ್ಲಿಕ ಬಾರಿಗಡ್ಡಿ ಸೇರಿ ಹಲವರು ಇದ್ದರು ರಾಜು ಜಕ್ಕಣ್ಣವರ, ಸಯದ ಶೇಖ ಟುರ್ನಿ ಯುದ್ದಕ್ಕೂ ಸ್ಕೋರರ ಆಗಿ ಕಾರ್ಯ ನಿರ್ವಹಿಸಿದರು,ಮೀರಾ ತಟಗಾರ, ಮಹಾಂತೇಶ ಫನಸಲ್ಕರ ಜಾವೇದ ಪರೀಟ ವೀಕ್ಷಕ ವಿವರಣೆ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಚಂದ್ರು ಮೊರೆ ಸ್ವಾಗತಿಸಿದರು ಪತ್ರಕರ್ತ ಲಕ್ಷ್ಮಣ ಕಿಶೋರ ಪ್ರಶಸ್ತಿ ವಿತರಣೆ ನಡೆಸಿ ಕೊನೆಯಲ್ಲಿ ವಂದಿಸಿದರು.