ನಿಜಗುಣ ಶಿವಯೋಗಿಗಳು ಮನುಕುಲದ ಮಹಾದಾರ್ಶಣಿಕ: ಶಿವಶಂಕರ ಸ್ವಾಮೀಜಿ
True Shivayogis are the great philosophers of mankind: Shiva Shankara Swamiji
ಮಹಾಲಿಂಗಪುರ 14: ಕನ್ನಡ ನಾಡು ಅನೇಕ ಋಷಿ ಮುನಿಗಳು, ಜ್ಞಾನಿಗಳು, ಯೋಗಿಗಳು, ತಪಸ್ವಿಗಳು, ಅವದೂತರು, ಸಿದ್ದರು ಮುಮುಕ್ಷಿಗಳು, ಇನೂ ಅನೇಕ ಸಾಧಕರ ತಪೋ ಭೂಮಿ ಅದರಲ್ಲಿ ನಿಜಗುಣಿ ಶಿವಯೋಗಿಗಳು ಎಲ್ಲರಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ.ಅವರು ಅಧ್ಯಾತ್ಮ ಜಗತ್ತಿಗೆ ವಿಶಿಷ್ಟ ಕೊಡುಗೆ ಕೊಟ್ಟು ಮನುಕುಲಕ್ಕೆ ಮಾದರಿಯಾಗಿ ನಿಂತವರು ಎಂದು ಹಳೇಹುಬ್ಬಳ್ಳಿ ವಿರಭಿಕ್ಷಾವರ್ತಿ ನೀಲಕಂಠಮಠದ ಶ್ರೀ ಮದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು
ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶ್ವ ಶಾಂತಿಗಾಗಿ ವೇದಾಂತ ಪರಿಷತ್ ಹಾಗೂ ಶ್ರೀಮನ ನಿಜಗುಣ ಶಿವಯೋಗಿಗಳ ಜಯಂತೋತ್ಸವದ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಿಜಗುಣ ಶಿವಯೋಗಿಗಳು ಚಾಮರಾಜನಗರ ಜಿಲ್ಲೆಯ ಚಿಲುಕವಾಡಿಯ ಸುತ್ತಲಿರುವ ಪ್ರದೇಶಕ್ಕೆ ಪಾಳೆಯಗಾರರಾಗಿದ್ದರು. ಆಧ್ಯಾತ್ಮಕ್ಕೆ ಒಲಿದ ನಿಜಗುಣ ಶಿವಯೊಗಿಗಳು ತಮ್ಮ ಪಟ್ಟವನ್ನು ತ್ಯಜಿಸಿ, ಚಿಲುಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಹಲವು ವರ್ಷ ತಪಸ್ಸುಗೈದು. ಷಟ್ ಶಾಸ್ತ್ರ ರಚನೆ ಮಾಡಿ ಕನ್ನಡದ ಮೊಟ್ಟ ಮೊದಲ ವಿಶ್ವಕೋಶ ವಿವೇಕ ಚಿಂತಾಮಣಿಯನ್ನು ನಾಡಿಗೆ ಕೊಟ್ಟ ಧೀಮಂತ.ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು ಎಂದರು.
ನಂತರ ಮಾತನಾಡಿದ ಕೋಲೂರಿನ ಶಂಭುಲಿಂಗ ಆಶ್ರಮದ ಪ ಪೂ ಶ್ರೀ ಕೃಷ್ಣಗೌಡ ಪಾಟೀಲ “ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ ಎಂದರು.
ನಂತರ ಮಾತನಾಡಿದ ಕೋಲೂರಿನ ಶರಣರಾದ ದುಂಡಪ್ಪ ಮೆಟಗುಡ್ಡ ಮೃಡನ ದೃಷ್ಟಿಯಲ್ಲಿ ರುಜೆಯಡರಿತೆಂದತಿ ಭೀತಿ ವಿಡಿದು ನಿಜಲೋಚನವಿತ್ತ ಕನ್ನಪ್ಪ ನಡಿಗಳಂ ಪೊತ್ತು ಬಿಡದಿರ್ೆ, ಇಲ್ಲಿ ಮೃಡ ಎಂದರೆ ಶಿವ, ರುಜೆ ಎಂದರೆ ರೋಗ, ನಿಜಲೋಚನ ಎಂದರೆ ತನ್ನ ಕಣ್ಣುಗಳು ಎನ್ನುವುದು ಅರ್ಥವಾದರೆ ಸಾಕು. ಅಂತ ಕನ್ನಪ್ಪನ (ಕಣ್ಣಪ್ಪ) ಅಡಿಗಳನ್ನು ಹಿಡಿದು ನಿಜಗುಣರು ಕೊಂಡಾಡಿದ್ದಾರೆ ಎಂದರು. ತೊಟ್ಟಿಲೋತ್ಸವ : ನಿಜಗುಣರ ತೊಟ್ಟಿಲು ಕಾರ್ಯಕ್ರಮ ಜರುಗಿತು ಮುತೈದೆಯರೆಲ್ಲ ಸೇರಿ ತೊಟ್ಟಿಲು ತೂಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಬಸವರಾಜ ದೇವರು ಕನ್ನೇರಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಈರ್ಪ ಚುನಮರಿ, ಸುರೇಶ ಗೋಲಭಾವಿ, ಮಹಾದೇವ ಬರಗಿ, ಶಿವಪ್ಪ ಹಳ್ಳಿ, ಈರ್ಪ ಹುಣಶ್ಯಾಳ, ಶಿವಪ್ಪ ಮೂಡಲಗಿ, ಮಲ್ಲಪ್ಪ ಚಿಂಚಖಂಡಿ, ಹೊಳೆಪ್ಪಾ ಬಾಡಗಿ, ಮಹಾದೇವ ಹೊಸಕೋಟಿ, ಸುಧೀರ್ ಸುನದೊಳಿ, ಮಹಾಲಿಂಗ ಯಾದವಾಡ, ಈರ್ಪ ಬೆಟಗೇರಿ, ರವಿ ಮುಂಡಗನೂರ,ಮಹೇಶ ಜಿಡ್ಡಿಮನಿ, ಶ್ರೀಶೈಲ್ ಬಿಸನಕೊಪ್ಪ, ಪ್ರಕಾಶ್ ಗೋಲಭಾವಿ, ಆನಂದ ಮುರಗೋಡ, ಪ್ರಕಾಶ ಬಿಲಕುಂದಿ, ಅಡಿವೆಪ್ಪ ಹುಣಶ್ಯಾಳ, ಚನ್ನಪ್ಪ ಹುಣಶ್ಯಾಳ, ಕುಬೇರ ಹಟ್ಟಿ ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಶಂಕರ ಯಾದವಾಡ ನಿರೂಪಿಸಿ ವಂದಿಸಿದರು. ಮಧ್ಯಾಹ್ನ ಮಹಾಪ್ರಸಾದ ಜರುಗಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 