ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಸನ್ಮಾನ

Tributes to Chief Minister Devendra Fadnavis

ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಸನ್ಮಾನ

ಅಥಣಿ 16: ಮಹಾರಾಷ್ಟ್ರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ದೇವೇಂದ್ರ ಫಡ್ನವಿಸ್ ಅವರನ್ನು ನಾಗಪುರದ ಅವರ ನಿವಾಸದಲ್ಲಿ ಮಾಜಿ ಸಚಿವ ಹಾಗೂ ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವ ಹಾಗೂ ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ ಭೇಟಿಯಾಗಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ  ಸನ್ಮಾನಿಸಿ ಅಭಿನಂದಿಸಿದರು.      

ಬಿಜೆಪಿ ಧುರೀಣರಾದ ಎನ್ ಆರ್ ಸಂತೋಷ, ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಶಾಂತ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಮಾಜಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಮತ್ತು  ಭರತ್ ಮಗದೂರ್ ಅವರು ಉಪಸ್ಥಿತರಿದ್ದರು.