ಛಲಗಾರ ದಿ. ಶ್ರೀ ಮಹಾಂತೇಶ ಗು. ಬೀಳಗಿಯವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ

ಛಲಗಾರ ದಿ. ಶ್ರೀ ಮಹಾಂತೇಶ ಗು. ಬೀಳಗಿಯವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ Tributes and words of gratitude to the great sage, the late Shri Mahantesh Gu. Bilagi

ಗದಗ  02:  ಬಸವೇಶ್ವರ ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ವಾಹನ ಅಪಘಾತದಲ್ಲಿ ನಿಧನರಾದ ಹಿರಿಯ ಐ.ಎ.ಎಸ್‌. ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮಾಜಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಾಗೂ ವಿವಿಧ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಗಾಗಿ ಸೇವೆ ಸಲ್ಲಿಸಿದ್ದ ಹಾಗೂ ತಾವು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸನ್ನು ನನಸಾಗಿಸಿಕೊಂಡ ಛಲಗಾರ  

 ದಿ. ಶ್ರೀ ಮಹಾಂತೇಶ ಗು. ಬೀಳಗಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ  ಮೌನಾಚರಣೆ ಮೂಲಕ ಗದಗ ಜಿಲ್ಲಾ ಬಣಗಾರ ಸಮಾಜ ಹಾಗೂ ಬಸವೇಶ್ವರ ನಗರ ವಿವಿಧ ಟ್ರಸ್ಟ ಹಾಗೂ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳಿಂದ  ಶ್ರದ್ಧಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು. ಮಹಾಂತೇಶ ಬೀಳಗಿಯವರು ವಿದ್ಯಾರ್ಥಿಯಾಗಿ ಇತರರಿಗಿಂತ ಭಿನ್ನವಾಗಿದ್ದರು. ಬಡತನ, ಕಷ್ಟಗಳನ್ನು ಎದುರಿಸಿ ಸ್ವಾಭಿಮಾನದಿಂದ ಜೀವನ ರೂಪಿಸಿಕೊಂಡವರು. ಅವರ ಸಾಧನೆ ಎಲ್ಲಾ ಯುವಕರಿಗೆ ಪ್ರೇರಣೆಯಾಗಿದೆ” 

ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸತತ ಪ್ರಯತ್ನ ಪರಿಶ್ರಮದಿಂದ ಐ.ಎ.ಎಸ್ ಪಾಸಾಗಿದ್ದ ಶ್ರೀಯುತರು ಸರಳ ಸೌಜನ್ಯತೆಯ ವ್ಯಕ್ತಿತ್ವದವರಾಗಿ ಜನರ ಮೆಚ್ಚುಗೆಗೆ ಪಾತ್ರರಾದರು,  ಡಾವಣಗೇರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ  ಕೊರೋನಾ ಸಂದರ್ಭದಲ್ಲಿ ಇವರು ಮಾಡಿದ ಸೇವೆ ಅಪಾರವಾದದ್ದು ಎಂದು ಸ್ಮರಿಸಿ ನಗರಸಭಾ ಸದಸ್ಯರಾದ  ಚಂದ್ರಶೇಖರ ತಡಸದ ಮಾತನಾಡಿ ತಮ್ಮ ನುಡಿ ನಮನ ಸಲ್ಲಿಸಿದರು. 

ಜೊತೆಗೆ ಇದೇ ಸಂದರ್ಭದಲ್ಲಿ ಮಾತನಾಡಿದ ಇತರರು ಇವರ ನಿಧನ ಕರ್ನಾಟಕಕ್ಕೆ ತುಂಬಲಾರದ ನಷ್ಟ, ಅವರ ಸೇವೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಬೇಕಿತ್ತು ಅವರು ಅಕಾಲಿಕ ಮರಣ ಎಲ್ಲರಿಗೂ ನೋವು ಉಂಟು ಮಾಡಿದೆ. ಅವರ ಕುಟುಂಬ ವರ್ಗಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾಗೂ ತಮ್ಮ ಸೇವೆಯ ಇತರರಿಗೆ ದಾರಿ ದೀಪವಾಗಿ ಹೊರಹೊಮ್ಮಿದರು, ಹಾಗೂ ಇವರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಇವರ ಜೀವನ ಸರ್ವರಿಗೂ ಮಾದರಿ ಎಂದು  ತಮ್ಮ ನುಡಿ ನಮನ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಬಣಗಾರ ಸಮಾಜ ಅಧ್ಯಕ್ಷರಾದ ವೀರೇಶ ಮುನವಳ್ಳಿ, ಧರ್ಮದರ್ಶಿಗಳಾದ ಶಿವಪುತ್ರ​‍್ಪ ಬೇವಿನಮರದ, ರಾಚಪ್ಪ ಮಿಣಜಿಗಿ, ಶಂಭು ಕಾರಕಟ್ಟಿ, ಮಹೇಶ ಗಡಾದ, ಶಿವಬಸಪ್ಪ ಯಂಡಿಗೇರಿ, ಗುರುಬಸವಲಿಂಗ ತಡಸದ ಹಾಗೂ ಚನ್ನಬಸವೇಶ್ವರ ಟೋಪಗಿ, ಸಿದ್ಧಲಿಂಗೇಶ ಕಾರದಕಟ್ಟಿ, ವಿಶ್ವನಾಥ ಹುಣಸೀಮರದ, ರಾಜು ಹೊಂಗಲ, ಬಸವರಾಜ ಕಾಡಪ್ಪನವರ, ವಿಶ್ವನಾಥ ಶೀರಿ, ಅಶೋಕ ಇಟಗಿ, ವಿಜಯಕುಮಾರ ಬಡಿಗಣ್ಣನವರ, ರಾಚೋಟೇಶ್ವರ ಕಾಡಪ್ಪನವರ, ಶಂಕರ ಕಾರದಕಟ್ಟಿ, ಮಹಾಂತೇಶ ಕಾತರಕಿ, ವಿಶ್ವನಾಥ ಶಿರಗಣ್ಣನವರ, ಅನಿಲ ಗದುಗಿನ, ರಮೇಶ ಹಳ್ಳಿಕೇರಿ, ಚೇತನ ಜಂಗಮನಿ, ಪಂಚಾಕ್ಷರಿ ಗೋಕಾವಿ, ತಿಪ್ಪವ್ವ ಖಾನಾಪುರ, ಶೈಲಾ ಕೊಡೆಕಲ್ಲ್‌, 

 ಶೋಭಾ ಬೆಂಗಳೂರು, ಸುಜಾತಾ ಕಾಡಪ್ಪನವರ, ರತ್ನಾ ಮೂರಶಿಳ್ಳಿನ, ಗಂಗಮ್ಮ ದಾಮೋದರ, ಅನ್ನಪೂರ್ಣ ಕಾರದಕಟ್ಟಿ, ಕಮಲಾ ಕಾರದಕಟ್ಪಿ, ಶೋಭಾ ಕಾಡಪ್ಪನವರ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರೆ​‍್ಣಯನ್ನು ಜ್ಯೋತಿ ಹೇರಲಗಿ ಮಾಡಿದರು.