ಸಾಧಕರಾದ ವಿ.ಎಂ. ಗುರುಮಠ ಅವರಿಗೆ ಸನ್ಮಾನ
ಗದಗ 07 : ನಗರದಲ್ಲಿ ಜರುಗಿದ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ ಹಾಗೂ ‘ಪಂಚಾಕ್ಷರಿ ಘರಾನಾ' ಸಮ್ಮೇಳನವು ಬಹು ವಿಜೃಂಬಣೆಯಿಂದ ಜರುಗಿತು. ಸಮಾರಂಭದ ದಿವ್ಯಸಾನಿಧ್ಯವನ್ನು ಪೂಜ್ಯಶ್ರೀ ನಾಡೋಜ ಜ. ಅನ್ನದಾನೀಶ್ವರ ಮಹಾಸ್ವಾಮಿಗಳವರು ವಹಿಸಿದ್ದರು. ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಗಳವರು ಹುಕ್ಕೇರಿಮಠ ಹಾವೇರಿ ಇವರ ನೇತೃತ್ವದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ.ರಾಜಗುರು ಗುರುಸ್ವಾಮಿ ಕಲಕೇರಿಯವರು ವಹಿಸಿದ್ದರು. ಮಹೇಶ್ವರಯ್ಯ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘರಾನಾ ನುಡಿ ಕುರಿತು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿದ್ದರಾಮಯ್ಯ ಮಠಪತಿಯವರು ಉಪನ್ಯಾಸವನ್ನು ನೀಡಿದರು. ಸಮಾರಂಭದ ಕೇಂದ್ರ ಬಿಂದುವಾದ ಧಾರವಾಡದ ಪದ್ಮಶ್ರೀ. ಎಂ.ವೆಂಕಟೇಶಕುಮಾರ ಅವರಿಗೆ “ಗುರುಕುಮಾರ ಪಂಚಾಕ್ಷರಿ ಸಮ್ಮಾನ 2025'' ನೀಡಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿರುವ ಗದುಗಿನ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾದ ವಿ.ಎಂ.ಗುರುಮಠರವರ ಬಹು ಮುಖಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಶ್ರೀಯುತರು ಕರ್ನಾಟಕ ವಿಶ್ವವಿದ್ಯಾಲಯದ ಬೋರ್ಡ ಆಫ್ ಎಕ್ಸಾಮಿನೇಸನ್‌ದ ಸದಸ್ಯರಾಗಿ ಕವಿವಿಯ ಬೋರ್ಡ ಆಫ್ ಸ್ಟಡಿ ಸದಸ್ಯರಾಗಿ ಕವಿವಿಯ ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾಗಿ ಪೂಜ್ಯ ಲಿಂ.ಡಾ:ಪುಟ್ಟರಾಜ ಗವಾಯಿಗಳವರ ಶತಮಾನೋತ್ಸವ ತುಂಬುತ್ತಿರುವ ಸಂಧರ್ಭದಲ್ಲಿ ಶತಮಾನೋತ್ಸವ ಸಮಿತಿಯಿಂದ ಹೊರ ತಂದಿರುವ “ಪುಟ್ಟರಾಜ ಶತನಮನ ಕೃತಿಯ ಸಂಪಾದಕರಾಗಿ”, ಜನೇವರಿ-28-2025 ರಂದು ಹಾವೇರಿ ಜಿಲ್ಲೆಯ ಸವಣೂರ ತಾಲೂಕಾ 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಡಾ:ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪದವಿ ತರಗತಿಗಳ ಅಧ್ಯಯನದ 4 ಪಠ್ಯ ಪುಸ್ತಕಗಳ ಸಂಪಾದಕರಾಗಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಕಳೆದ 1991 ರಿಂದ ಈವರೆಗೂ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಪಂಚಾಕ್ಷರ ಸೇವಾ ಸಮಿತಿಯಿಂದ ಪ್ರತಿ ವರ್ಷದಂತೆ ಪದ್ದತಿಯಂತೆ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವದಲ್ಲಿ ಪಂಚಾಕ್ಷರ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಎಂ.ಎಂ.ಶಿರೋಳಮಠ ಹಾಗೂ ಸಮಿತಿಯ ಎಲ್ಲ ಪದಾದಿಕಾರಿಗಳು ಹಾಜರಿದ್ದು ಗೌರವಿಸಿ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.