ನಿವೃತ್ತ ಶಿಕ್ಷಕ ನದಾಫ್ ಮತ್ತು ಪತ್ರಕರ್ತ ಸಾಧಿಕಅಲಿಗೆ ಸನ್ಮಾನ

Tribute to retired teacher Nadaf and journalist Sadhika Ali

ನಿವೃತ್ತ ಶಿಕ್ಷಕ ನದಾಫ್ ಮತ್ತು ಪತ್ರಕರ್ತ ಸಾಧಿಕಅಲಿಗೆ ಸನ್ಮಾನ

ಕೊಪ್ಪಳ 22: ಭಾಗ್ಯನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಸ್ನೇಹ ಸಂಸ್ಥೆ ವತಿಯಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಯ ಆಯದ ಕಿಶೋರಿಯರ ಒಂದು ದಿನದ ಕ್ರೀಡಾಕೂಟ ಮುಕ್ತಾಯ ಸಮಾರಂಭ ಶನಿವಾರ ದಂದು ಸಂಜೆ ವೇಳೆಯಲ್ಲಿ ಕೊಪ್ಪಳ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಶಸ್ತಿ ಪುರಸ್ಕೃತ ನಿವೃತ್ತ ವೃತ್ತಿ ಶಿಕ್ಷಕ ಶಿಕ್ಷಕರಾದ ಅಮೀರ್ ಹಮ್ಜಾ ನದಾಫ್ ಮತ್ತು ಹಿರಿಯ ಪತ್ರಕರ್ತರಾದ ಎಂ ಸಾಧಿಕ್ ಅಲಿ ಅವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು,  

ಈ ಸಂದರ್ಭದಲ್ಲಿ ಸ್ನೇಹ ನಿರ್ದೇಶಕರಾದ ಟಿ ರಾಮಾಂಜನೇಯ, ವ್ಯವಸ್ಥಾಪಕ ನಿರ್ದೇಶಕಿ  ಕೆ ಪೀ ಜಯ ,ಶಿಕ್ಷಣ ಇಲಾಖೆಯ ಅಧಿಕಾರಿ ವೀರನಗೌಡ ಸೈಯದ್ ಮಹಿಬೂಬ್ ಹುಸೇನ್ ದೈಹಿಕ ಶಿಕ್ಷಣ ಶಿಕ್ಷಕರು ಶರಣಬಸವ ಸ್ವಾಮಿ ,ವಿರುಪಾಕ್ಷಿ ಗೌಡ, ವೀರಭದ್ರ​‍್ಪ ,ಮುಖ್ಯ ಶಿಕ್ಷಕ ಲಕ್ಷ್ಮಣ, ಶರಣಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.