ನಾಮ ನಿರ್ದೇಶಿತ ಸದಸ್ಯರಿಂದ ಪಠಾಣಗೆ ಗೌರವ ಸನ್ಮಾನ
ಶಿಗ್ಗಾವಿ 5 : ಪುರಸಭೆಗೆ ಪ್ರಥಮಬಾರಿ ಆಕಸ್ಮಿಕ ಭೇಟಿ ನೀಡಿದ ಶಾಸಕ ಯಾಶೀರಖಾನ್ ಪಠಾಣ ಅವರಿಗೆ ತ್ರಿವರ್ಣ ಪೇಟ ಹಾಕಿ ಅಶೋಕ ಸ್ತಂಭ ನೀಡಿ ವಿಶಿಷ್ಟ ರೀತಿಯಲ್ಲಿ ನಾಮ ನಿರ್ದೇಶಿತ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮಣ್ಣಣ್ಣವರ, ಪರವೀಜ ಮುಲ್ಲಾ,ಮಾರುದ್ರ್ಪ ಕೊಡ್ಲಿವಾಡ, ಸಾಧಿಕ್ ಮೊಘಲಲ್ಲಿ, ಮುನ್ನ ಮಾಲ್ದಾರ ಜೊತೆಗೆ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ್ ಪಾಟೀಲ, ಉಪಾಧ್ಯಕ್ಷ ಶಾಂತವ್ವ ಸುಭೇದಾರ, ಸ್ಥಾಯಿ ಸಮಿತಿ ಅದ್ಯಕ್ಷೆ ಅನುರಾಧ ಮಾಳವಾದೆ, ಸದಸ್ಯರುಗಳಾದ ಗೌಸಖಾನ ಮುನಸಿ, ವಸಂತ ಬಾಗೂರ, ಮುಸ್ತಾಕಮ್ಮದ ತಹಶೀಲ್ದಾರ, ಸುಲೇಮಾನ್ ತರಲಘಟ್ಟ ಜಾಫರಖಾನ ಪಠಾಣ, ಶ್ರೀಕಾಂತ ಬುಳ್ಳಕನವರ, ಸುಭಾಷ ಚೌಹಾಣ, ಮಂಜುನಾಥ ಬ್ಯಾಹಟ್ಟಿ, ಮುಖ್ಯಾಧಿಕಾರಿ ಮಲ್ಲೇಶಪ್ಪ, ಇಂಜಿನಿಯರ ರಾಜಣ್ಣ ಮಿರ್ಜಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.