ಹ್ಯಾಟಿ ಮತ್ತು ಹಲಗೇರಿ ಅವರಿಗೆ ಸನ್ಮಾನ

Tribute to Hattie and Halageri

ಹ್ಯಾಟಿ ಮತ್ತು ಹಲಗೇರಿ ಅವರಿಗೆ ಸನ್ಮಾನ

ಕೊಪ್ಪಳ 09: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಇದರ ಉಪಸಭಾಪತಿಯಾಗಿ ಕೊಪ್ಪಳದ ಡಾ. ಶ್ರೀನಿವಾಸ್ ಹ್ಯಾಟಿ ಇವರು ಆಯ್ಕೆಯಾಗಿದ್ದಕ್ಕೆ ಮತ್ತು ಕೊಪ್ಪಳ ಪಿ.ಎಲ್‌.ಡಿ. ಬ್ಯಾಂಕ್ ನಾಮ ನಿರ್ದೇಶಕ ಸದಸ್ಯರಾಗಿ ಸರಕಾರದಿಂದ ನೇಮಕವಾಗಿರುವ ಮಾರುತೇಶ ಅಂಗಡಿ ಹಲಗೇರಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾಘಟಕದಅಧ್ಯಕ್ಷರಾದರಾಮಚಂದ್ರಗೌಡ ಬಿ ಗೊಂಡಬಾಳ, ಕಾರ್ಯದರ್ಶಿ ಬಸವರಾಜ ಶಿರಗುಂಪಿ ಶೆಟ್ಟರ್, ಜಿಲ್ಲಾ ಕಸಾಪ ಘಟಕದ ಕಾರ್ಯದರ್ಶಿ ಶೇಖರಗೌಡ ಪಾಟೀಲ್, ಸಂಘಟನಾ ಕಾರ್ಯದರ್ಶಿ ರಮೇಶ್‌ತುಪ್ಪದ, ಕಸಾಪ ಹಿರಿಯ ಸದಸ್ಯರಾದ ಮಂಜುನಾಥಅಂಗಡಿ, ಶರಣು ಡೊಳ್ಳಿನ,  ವಿನೋದ್ ಡೊಳ್ಳಿನ, ಸುಧಾಕರ ಮುಜಗುಂಡ ಹಾಗೂ ಇತರರು ಹಾಜರಿದ್ದರು.