ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಡಂಬಳಗೆ ಸನ್ಮಾನ
ಕೊಪ್ಪಳ 25: ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಗೆ ಉಳಿದಿರುವ ಅಲ್ಪ ಅವಧಿಗೆ ಅಧ್ಯಕ್ಷರಾಗಿ ಜಯ ಸಾಧಿಸಿದ ಶ್ವೇತಾ ರಾಘವೇಂದ್ರ ಡಂಬಳ ರವರುಗಳಿಗೆ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಯವರ ನಿವಾಸ ದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರ ಪತಿ ರಾಘವೇಂದ್ರ ಡಂಬಳ, ಯುವ ನಾಯಕರಾದ ಕಾಶೀನಾಥ್ ಡಂಬರ್, ಮಂಜುನಾಥ್ ಡಂಬರ್. ಅತಿಕ್ ಅಹಮದ್, ಎಂಡಿ ಇಸ್ಮಾಯಿಲ್ ಜಬಿ ಸಂಡೂರು, ಹಾಗೂ ಅಜೀಮಾ ಬೇಗಂ ಸಾದಿಕ ಅಲಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.