ಅರಣ್ಯ ಸಂರಕ್ಷಣೆಯಲ್ಲಿ ಬುಡಕಟ್ಟು ಜನರ ಒಳಗೊಳ್ಳುವಿಕೆ ಮುಖ್ಯ: ರಾಷ್ಟ್ರಪತಿ ರಾಮನಾಥ ಕೋವಿಂದ

ನವದೆಹಲಿ 23: ಅರಣ್ಯ ಸಂರಕ್ಷಣೆಯಲ್ಲಿ  ಸುಸ್ಥಿರ ಯಶಸ್ಸು ಸಾಧಿಸಲು ಬುಡಕಟ್ಟು ಜನಾಂಗದ ಪಾಲ್ಗೊಳ್ಳುವಿಕೆ ಬಹಳ  ಮುಖ್ಯ ಎಂದು ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್  ಒತ್ತಿ ಹೇಳಿದ್ದಾರೆ.   

   ಭಾರತೀಯ ಅರಣ್ಯ ಸೇವೆಯ 2018-20 ತಂಡದ  ಪ್ರೊಬೆಷನರಿ  ಅಧಿಕಾರಿಗಳ  ತಂಡವನ್ನು ಮಂಗಳವಾರ ಭೇಟಿಯಾದ ನಂತರ  ಅವರು  ಈ ವಿಷಯ  ತಿಳಿಸಿದರು.  

  ಪ್ರೊಬೆಷನರಿ ಅಧಿಕಾರಿಗಳನ್ನೂ  ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಅರಣ್ಯ ಸಂಪತ್ತು  ರಕ್ಷಿಸಲು ಮತ್ತು ಹಸಿರು ಪ್ರದೇಶದ ವ್ಯಾಪ್ತಿ  ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆಯಾದರೂ ಅರಣ್ಯ ಸಂರಕ್ಷಣೆಯಲ್ಲಿ  ಸುಸ್ಥಿರ  ಯಶಸ್ಸು ಸಾಧಿಸಲು ಬುಡಕಟ್ಟು ಜನಾಂಗದವರ ಒಳಗೊಳ್ಳುವಿಕೆ ಬಹಳ ಮುಖ್ಯ ಎಂದು ಒತ್ತಿ ಹೇಳಿದರು. ಹೆಚ್ಚಿನ ಸಂಖ್ಯೆಯ ಬಡ ಜನರು ದೇಶದ ಕಾಡುಗಳ  ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಕಾಡುಗಳ ಮೂಲಕವೇ ಅವರು ಆಹಾರ ಮತ್ತು ಮೇವಿನ ಮೂಲಭೂತ ಅಗತ್ಯ ಪೂರೈಸುತ್ತಾರೆ. ಈ ಜನರು ಸರಳ ಮತ್ತು ಕಠಿಣ ಕೆಲಸ ಮಾಡುತ್ತಿದ್ದರೂ ಬುದ್ಧಿವಂತರಾಗಿದ್ದಾರೆ  ಎಂದು ಹೇಳಿದರು. 

   ಈ ಜನರು ಸಂಪ್ರದಾಯ ಮತ್ತು ನಂಬಿಕೆಗಳ ಭಾಗವಾಗಿ ಕಾಡುಗಳನ್ನು ಗೌರವಿಸುತ್ತಾರೆ  ಕಾಡುಗಳನ್ನು ರಕ್ಷಿಸುವ ಯಾವುದೇ ಕ್ರಮಗಳು ಈ ಜನರ ಮೂಲಭೂತ ಅಗತ್ಯಗಳಿಗೆ ಸೂಕ್ಷ್ಮವಾಗಿರಬೇಕು ಮತ್ತು ಅವರನ್ನು ಪಾಲುದಾರರನ್ನಾಗಿ ಒಳಗೊಂಡಿರಬೇಕು ಎಂದರು.  ದೇಶದ   ಅರಣ್ಯ ನಿರ್ವಹಣಾ ಮಾದರಿ ಸ್ಥಳೀಯ ಮತ್ತು ಸಮುದಾಯಗಳೊಂದಿಗೆ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದೂ  ರಾಷ್ಟ್ರಪತಿ ಹೇಳಿದರು.