6ರಂದು ವೈಚಾರಿಕ ಜಾಗೃತಿಗಾಗಿ ಪರಿವರ್ತನಾ ದಿನ

ಲೋಕದರ್ಶನ ವರದಿ

ಕೊಪ್ಪಳ 03: ಮಾನವ ಬಂಧುತ್ವ ವೇದಿಕೆಯಿಂದ ಡಿಸೆಂಬರ್ 6ನೇಯ ತಾರೀಖಿನಂದು ವೈಚಾರಿಕಯ ಜಾಗೃತಿಗಾಗಿ ಪರಿವರ್ತನಾ ದಿನವನ್ನು ಆಚರಿಸಲು ತೀಮರ್ಾನಿಸಲಾಗಿದೆ.

ಈ ನಿಮಿತ್ತ ಬೆಳಗಾವಿಯ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮ (ಸ್ಮಶಾನ) ಸದಾಶಿವ ನಗರದಲ್ಲಿ ಬೆ 10.30 ಕ್ಕೆ ಆಯೋಜಿಸಿಲಾಗಿರುವ ಕಾರ್ಯಕ್ರಮ ದಲ್ಲಿ ನಾಡಿನ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ.

ಇದರಲ್ಲಿ ಬೀದಿ ನಾಟಕ ಮೌಡ್ಯ ವಿರೋಧತೆಯ ಕ್ರಾಂತಿ ಕಾರಿ ಗೀತೆಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಲಾಗಿದೆ ಸತತ 24 ಗಂಟೆ ಈ ಕಾರ್ಯಕ್ರಮ ನಡೆಯಲಿದೆ. ಡಾ. ಬಿ.ಆರ್ ಅಂಬೇಡ್ಕರ್ ರವರ ಪರಿನಿಮರ್ಾಣದ ದಿನವನ್ನು ಆಚರಿಸಲು ಈ ದಿನದಂದೆ ಬಾಬರಿ ಮಸೀದಿ ನಾಶಗೊಳಿಸಿ ಅದರ ನೆನಪನ್ನು ಮರೆ ಮಾಚಬಹುದೆಂಬುದನ್ನು ಹುಸಿಗೊಳಿಸಿ ಬಿ.ಆರ್ ಅಂಬೇಡ್ಕರ್ ರವರ ಸರ್ವ ಸಮಾನತೆ ಸ್ವಾಭಿಮಾನಿ ಸಮಾಜದ ನಿಮರ್ಾಣಕ್ಕಾಗಿ ಮುಂಖಡರಾದ ಸತೀಶ ಜಾರಕಿಹೊಳಿಯವರು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ದಿ.2 ರಂದು ಕೊಪ್ಪಳ ತಾಲೂಕ ಸಂಚಾಲಕರಾದ ಕಾಶಪ್ಪ ಚಲವಾದಿ ಕಾರ್ಯಕ್ರಮವನ್ನು ಆಯೋಜಿಸಿ ಇದೇ ಡಿಸೆಂಬರ್ 6 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಮೇಣದ ಬತ್ತಿ ಹಚ್ಚಿ ಅಂಬೇಡ್ಕರ್ ರವರಿಗೆ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ನಾವೆಲ್ಲರೂ ಬಾಗವಹಿಸೊಣ ಎಂದು ಬಸವರಾಜ್ ಅಳ್ಳಳ್ಳಿಯವರು ಮಾತನಾಡಿದರು. ಅದೆ ರೀತಿ ಮಾಂತೇಶ್ ಕೊತಬಾಳ ರವರು ಸತೀಶ್ ಜಾರಕೀಹೊಳಿ ಯವರ ನೇತೃತ್ವದಲ್ಲಿ ನೆಡೆಯುವ ಮೌಡ್ಯ ವಿರೊದಿ ಕಾರ್ಯಕ್ರಮ ಮಾಡುವುದರಿಂದ ಜನಗಳಿಗೆ ಜಾಗೃತಿ ಮೂಡಿಸುವ ಕೆಲಸ ನಿಜಕ್ಕೂ ಶ್ಲಾಘನೀಯ ಇಂತಹ ಕಾರ್ಯಕ್ರಮದಲ್ಲಿ ನಾವು ಕೈ ಜೋಡಿಸುತ್ತವೆ ಎಂದರು ಅದೆ ರೀತಿ ಇನ್ನೊರ್ವ ಮುಂಖಡರಾದ ಯಲ್ಲಪ್ಪ ಬಳಗಾನೂರ ರವರು ವೈಚಾರಿಕ ಜಾಗೃತಿಗಾಗಿ ನಾವು ಕೂಡ ಸಂಪೂರ್ಣ ಬೆಂಬಲ ನೀಡುವುದರ ಮೂಲಕ ಮೌಢ್ಯ ವಿರೋಧಿ ಕಾರ್ಯಕ್ರಮದಲ್ಲಿ ಕೈ ಜೋಡಿಸುತ್ತೆವೆ ಎಂದರು. ಈ ಸಂದರ್ಭದಲ್ಲಿ ಗುರು ಬಸವೇಶ್ವರ ಟ್ರಸ್ಟಿನ ರಾಜೇಶ್ ಹಿರೇಮಠ, ಹನುಮೇಶ ಕಲ್ಮಂಗಿ, ನಾಗರಾಜ ಬೆಲ್ಲದ, ಮಾರ್ಕಂಡೇಯ ಬೆಲ್ಲದ, ರಾಘು ಚಾಕ್ರಿ, ಹನುಮೇಶ ಮ್ಯಾಗಲ್ಮನಿ, ಮನೋಜ, ಗೌತಮ್, ರಾಘು, ಮಂಜುನಾಥ್, ಇನ್ನೂ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸದರು.