ಲೋಕದರ್ಶನ ವರದಿ
ಕಾಗವಾಡ: ಮನದಲ್ಲಿ ಶ್ರದ್ಧೆ ಭಕ್ತಿ ಇಟ್ಟುಕೊಂಡು ದೇವರು ಇದ್ದಾನೆ ಎಂದು ಮನಗಂಡು ಇನ್ನೊಬ್ಬರಿಗೆ ಕೆಟ್ಟುಬಯಿಸದೆ ಪರೋಪಕಾರ ಮಾಡುತ್ತಾ, ಜೀವನ ಸಾಗಿಸುತ್ತಾ ನೀನು ಬದುಕು, ಇನ್ನೊಬ್ಬರನ್ನು ಬದುಕಲು ಬಿಡು. ಈ ಗಾದೆ ಮಾತಿನಂತೆ ಎಲ್ಲರ ಜೀವನ ಸುಖಮಯವಾಗಲಿದೆ ಎಂದು ಹಿರಿಯ 99 ವಯಸ್ಸಿನ ಹಿರಿಯ ವಿಠ್ಠಲನ ಭಕ್ತನಾದ ಯಶವಂತ ಹರಿತುವಾರ ಹೇಳಿದರು.
ಸೋಮವಾರರಂದು ಉಗಾರಖುರ್ದ ಪಟ್ಟಣದ ಮಾಉಲಿ ಭಕ್ತಿ ಮಂಡಳ ಮತ್ತು ವಿಠ್ಠಲ ಭಜನಾ ಮಂಡಳದವತಿಯಿಂದ ಕಳೆದ 17 ವರ್ಷಗಳಿಂದ ಉಗಾರ, ಕುಸನಾಳ, ಮೋಳವಾಡ, ಕೃಷ್ಣಾ ಕಿತ್ತುರ, ಐನಾಪುರ, ಸೇರಿದಂತೆ ಅನೇಕ ಗ್ರಾಮಗಳಿಂದ ಸುಮಾರು 300 ಭಕ್ತರು 200 ಕೀಮಿ ಅಂತರದಲ್ಲಿರುವ ಶ್ರೀಕ್ಷೇತ್ರ ಪಂಢರಪುರದ ವಿಠ್ಠಲನ ದರ್ಶನಕ್ಕೆಕಾಲುನಡುಗೆ ಮುಖಾಂತರ ತರಳಿದರು.
ಉಗಾರದ ಉದ್ಯೇಮಿ ಕರ್ಮಯೋಗಿ ದಿ. ಬಾಬುಕಾಕಾ ಶಿರಗಾಂವಕರ ಇವರ ಧರ್ಮಪತ್ನಿ ದಿ.ತಾರಾಕಾಕಿ ಶಿರಗಾಂವಕರ ಇವರು ಸ್ಥಾಪಿಸಿದ ಮಾಉಲಿ ಭಕ್ತಿ ಮಂಡಳ ಮುಖಾಂತರ 'ವಾರ್ಕರಿದಿಂಡಿ' ಪ್ರಾರಂಭಿಸಿದ್ದಾರೆ. ಇದರ ಮುಖಾಂತರ ಅನೇಕರು ತಮ್ಮ ದುಷ್ಟ ಚಟಗಳನ್ನು ಬಿಟ್ಟು, ದೇವರ ಭಕ್ತಿಗೆ ಶರಣರಾಗಿದ್ದಾರೆ. ಇದೊಂದು ವಿಶೇಷ ಸಮಾಜ ಸೇವೆವಾಗಿದೆ ಎಂದು ದಿಂಡಿ ಮುಖ್ಯಸ್ಥ ಬಾಬುರಾವ ಕುಲಕಣರ್ಿ ಹೇಳಿದರು.
ದಿಂಡಿಯಾತ್ರೆಯಲ್ಲಿ 65 ರಿಂದ70 ವಯಸ್ಸಿನ ತಾನಾಬಾಯಿ ಕಾಂಬಳೆ, ಸಖುಬಾಯಿ ಟೋನ್ಪೆ, ಧನಪಾಲ ಕಾಂಬಳೆ, ನೇಮಣ್ಣಾ ಶೆಟ್ಟಿ, ಮಹಾವೀರ ಕಾಂಬಳೆ, ಲಕ್ಷ್ಮಣ ಮೀರಜೆ, ಶಾಂತಿನಾಥ ಮಾಲಗತ್ತೆ, ಅಪ್ಪಾಸಾಹೇಬ ಬೇರಡ, ಸುರೇಶಕಂದಾರೆ, ಶಂಕರ ವಾಘಮೋಡೆ, ಸೇರಿದಂತೆ ಸುಮಾರು 300 ಭಕ್ತರು 9 ದಿನ ಕಾಲುನಡುಗೆಯಿಂದಯಾತ್ರೆಗೆ ಪ್ರಯಾಣಿಸಿದರು.
ಬೆಳಿಗ್ಗೆ ವಿಠ್ಠಲ ಮಂದಿರ ಸಭಾ ಭವನದಲ್ಲಿಉಗಾರ ಮಹಿಳಾ ಮಂಡಳ ಆಧ್ಯಕ್ಷೆ ಸ್ಮೀತಾತಾಯಿ ಶಿರಗಾಂವಕರ, ಮಾಜಿಗ್ರಾಪಂಆಧ್ಯಕ್ಷ ಕಾಶಿನಾಥ ಥೋರುಶೆ, ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಜಿ.ಎಸ್.ಕೋಳಕಾರ ವಿಠ್ಠಲನ ಪ್ರತಿಮೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.