ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ ಹಾಗೂ ರೈತರಿಗೆ ಕೈಗೊಂಡ ತರಬೇತಿ ಕಾರ್ಯಕ್ರಮ
Training program conducted for the office bearers, members and farmers of the Achukattu Area Author
ಧಾರವಾಡ 22: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ನೀರಾವರಿ ಯೋಜನೆಗಳ ವಲಯ (ಐ.ಪಿ.ಝಡ್.) ಅಚ್ಚುಕಟ್ಟು ಪ್ರದೇಶದ ಬೀದರ ಜಿಲ್ಲೆಯ, ಬಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ, ಸದಸ್ಯರಿಗೆ ಹಾಗೂ ರೈತರಿಗೆ ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಗ್ರಾಮ ಮಟ್ಟದ ತರಬೇತಿಯನ್ನು ದಿನಾಂಕ:22-01-2026 ರಂದು ಹಮ್ಮಿಕೊಳ್ಳಲಾಗಿತ್ತು.
ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ನೆರವೇರಿಸಿದ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ ಎನ್. ಮರಡ್ಡಿಯವರು ಜಲಾಶಯದ ನೀರಿನ ಸಮರ್ಕ ಬಳಕೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರ ಅತೀ ಮುಖ್ಯವಾದದ್ದು ಎಂದು ತಿಳಿಸಿದರು. ಅಲ್ಲದೇ ಅಚ್ಚುಕಟ್ಟು ಪ್ರದೇಶದಲ್ಲಿ ಪಶು ಆಧಾರಿತ ಕೃಷಿ, ಕೃಷಿ ತಾಂತ್ರಿಕತೆಗಳು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ನೀರು ಬಳಕೆಯಿಂದ ಅಧಿಕ ಇಳುವರಿ ಪಡೆಯುವ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ವಿಧಾನ ಕುರಿತು ಮಾಹಿತಿ ನೀಡುವುದಲ್ಲದೆ, ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ, ನೀರಿನ ಕರ ಆಕರಣೆ / ಸಂಗ್ರಹಣೆ ಕುರಿತು ಮಾಹಿತಿ ನೀಡಿದರು. ವಾಲ್ಮಿ, ಧಾರವಾಡ ಸಂಸ್ಥೆಯಿಂದ ಈ ಎಲ್ಲ ವಿಷಯ ಕುರಿತು ತರಬೇತಿಗಳನ್ನು ನೀಡುತ್ತಿದ್ದು ಅದರ ಪ್ರಯೋಜನವನ್ನು ಪ್ರತಿಯೊಂದು ನೀ.ಬ.ಸ.ಸಂಘದ ಪದಾಧಿಕಾರಿಗಳು, ಸದಸ್ಯರು ್ಘ ರೈತರು ಪಡೆದುಕೊಳ್ಳುವಂತೆ, ಹೆಚ್ಚು ಹೆಚ್ಚು ಸದಸ್ಯರು ತರಬೇತಿಗೆ ಹಾಜರಾಗುವಂತೆ ಕರೆ ನೀಡಿದರು.
ಡಾ. ಚಂದ್ರಕಾಂತ, ವಿಜ್ಞಾನಿಗಳು (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಬೀದರ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಸುರೇಶ ಕುಲಕರ್ಣಿ, ಸಮಾಲೋಚಕರು, ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹಾಗೂ ಸಂಘಗಳ ರಚನೆ, ಕಾರ್ಯ, ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಉಮೇಶ ಬಾರಿಕರ, ಹಿರಿಯ ವಿಜ್ಞಾನಿ ್ಘ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬೀದರ ರವರು ಮಾತನಾಡುತ್ತಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕೆವಿಕೆಯಿಂದ ದೊರಕುವ ಸೌಲಭ್ಯಗಳನ್ನು ತಿಳಿಸಿದರು ಹಾಗೂ ರೈತರ ಪ್ರಶ್ನೆಗಳಿಗೆ ವಿವರಣೆ ನೀಡಿದರು. ಇನ್ನೋರ್ವ ಅತಿಥಿಗಳಾದ ಡಾ. ಶಿವಕುಮಾರ, ವಿಜ್ಞಾನಿ (ಸಸ್ಯ ಸಂರಕ್ಷಣೆ), ಕೃಷಿ ವಿಜ್ಞಾನ ಕೇಂದ್ರ, ಬೀದರ ರವರು ಕೀಟರೋಗ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಶ್ರೀ ಕಾಶಿನಾಥ ಚಿಲಶೆಟ್ಟಿ, ಅಧ್ಯಕ್ಷರು, ಎಫ್.ಪಿ.ಓ. ಖಟಕ ಚಿಚೋಳಿ ಮತ್ತು ಶ್ರೀ ಹನುಮಂತರಾವ ಬಿರಾದಾರ, ಅಧ್ಯಕ್ಷರು, ಚುಳುಕಿನಾಲಾ ನೀರು ಬಳಕೆದಾರರ ಸಹಕಾರ ಸಂಘ, ಶ್ರೀ ಪ್ರಭುರಾವ ಕಡಗಂಚಿ, ಪ್ರಗತಿಪರ ರೈತರು, ಶ್ರೀ ರಾಜಶೇಖರ ರೆಡ್ಡಿ, ಆಡಳಿತಾಧಿಕಾರಿಗಳು, ಆರ್.ಎಸ್.ಕೆ. ಖಟಕ ಚಿಂಚೋಳಿ, ರವರು ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಫಕ್ಕಿರೇಶ ಅಗಡಿ, ವಾಲ್ಮಿ, ಧಾರವಾಡ ಇವರು ಎಲ್ಲರಿಗೂ ವಂದಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಖಟಕ ಚಿಂಚೋಳಿ ಗ್ರಾಮದ ನೀ.ಬ.ಸ.ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 