ಮಹಿಳೆಯರು ಸ್ವಾವಲಂಬಿಗಳಾಗಬೇಕಾದರೆ ತರಬೇತಿಗಳು ಅವಶ್ಯಕ: ಮುಖಂಡ ಪೋತರಾಜ

ಲೋಕದರ್ಶನವರದಿ

ಶಿರಹಟ್ಟಿ 03: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಉನ್ನತ ಶಿಕ್ಷಣ ಪಡೆದಾಗಲೂ ಸ್ಫದರ್ಾತ್ಮಕ ಯುಗದಲ್ಲಿ ತಮ್ಮದೇ ಆದ ಗುರಿ ಮುಟ್ಟಬೇಕಾದರೆ ಸಾಕಷ್ಟು ಪರಿಶ್ರಮಗಳನ್ನು ಎದುರಿಸಬೇಕಾಗುತ್ತದೆ. ಕನಿಷ್ಠ ವಿದ್ಯಾಭ್ಯಾಸವನ್ನು ಮುಗಿಸಿದ ನಿರುದ್ಯೋಗಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕಾದರೆ ಅವರಿಗೆ ಸೂಕ್ತ ತರಬೇತಿಗಳು ಅವಶ್ಯಕರವಾಗಿವೆ ಎಂದು ಮುಖಂಡ ನಾಗರಾಜ ಪೋತರಾಜ ಕರೆ ನೀಡಿದರು.

ಅವರು ಸ್ಥಳೀಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿ ನಡೆಸಲಾಗುತ್ತಿರುವ ಕನರ್ಾಟಕ ಸಕರ್ಾರದ ಕೈಮಗ್ಗ ಮತ್ತು ಜವಳಿ ಇಲಾಖೆಯ ಎಸ್ಎಸ್ಎಂಓ ತರಬೇತಿಯ 2019/20 ನೇ ಸಾಲಿನ ಪ್ರಥಮ ತಂಡದ ಶಿಬಿರಾಥರ್ಿಗಳ ಬೀಳ್ಕೊಡುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಮಟ್ಟದಲ್ಲಿನ ಮಹಿಳೆಯರು ಹಾಗೂ ನಿರುದ್ಯೋಗಿ ಯುವಕ ಯುವತಿಯರು ಉನ್ನತ ಶಿಕ್ಷಣ ಪಡೆಯದೇ ತಮ್ಮ ಅತ್ಯಮೂಲ್ಯ ಜೀವನವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳದೇ ಇಂಥಹ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳ ಮೂಲಕ ಜೀವನ ನಡೆಸಲು ಬೇಕಾದ ಅವಶ್ಯಕ ಕೌಶಲ್ಯಗಳ ತರಬೇತಿಗಳನ್ನು ಪಡೆದು ಸೂಕ್ತ ಜೀವನ ನಡೆಸುವಂತೆ ತಿಳಿಸಿದರು.

ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ, ಮೊದಲು ನಮ್ಮ ಸಂಸ್ಥೆಯು ಪತ್ರಕರ್ತ ಹಾಗೂ ಸಾಹಿತಿಗಳಾದ ಎಂ. ಮಂಜುನಾಥ ಬಮ್ಮನಕಟ್ಟಿ ಅವರ ಮಾರ್ಗದರ್ಶನದ ಮೇರೆಗೆ 2000 ನೇ ಇಸವಿಯಲ್ಲಿ ಅಂಗವಿಕಲರಿಗಾಗುವ ಅನ್ಯಾಯಗಳ ಬಗ್ಗೆ ಹೋರಾಟ ಮಾಡುತ್ತಾ, ಬರುವ ದಿನಗಳಲ್ಲಿ ನಮ್ಮ ಸಂಸ್ಥೆಯು ಸಮಾಜದಲ್ಲಿನ ಕಾರ್ಯ ಹಾಗೂ ಬೆಳವಣಿಗೆಯನ್ನು ಅರಿತು ಅಂದಿನ ಕನರ್ಾಟಕ ಮೈತ್ರಿ ಸಕರ್ಾರದ ಜವಳಿ ಖಾತೆಯ ಸಚಿವರಾದ ಆರ್ ವತರ್ೂರ ಪ್ರಕಾಶ ಅವರು ನಮ್ಮ ಸಂಸ್ಥೆಯು ವಿಕಲಚೇತನರಿಗಾಗಿ ಕೆಲಸ ಮಾಡುವುದರ ಜೊತೆಗೆ ಸಮಾಜದಲ್ಲಿನ ಕಟ್ಟಕಡೆಯ ನಿರುದ್ಯೋಗಿಗಳಿಗೂ ಸಹ ಕೆಲಸ ನಿರ್ವಹಿಸಲಿ ಎಂದು ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಯೊಂದನ್ನು ಶಿರಹಟ್ಟಿಯಲ್ಲಿ ಸ್ಥಾಪಿಸಲು ಅನುಮೋದಿಸಿದ ನಂತರ ನಮ್ಮ ಶಿರಹಟ್ಟಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುತ್ತಾ ಕಳೆದ 6 ವರ್ಷಗಳಿಂದ ಈವರೆಗೆ ನಿರುದ್ಯೋಗಿ ಮಹಿಳೆ ಹಾಗೂ ಪುರುಷರನ್ನು ಸ್ವಾವಲಂಬಿ ಜೀವನ ನಡೆಸಲು ಅವಶ್ಯಕವಿರುವ ತರಬೇತಿಗಳನ್ನು ನೀಡಿ ಅವರನ್ನು ಆಥರ್ಿಕವಾಗಿ ಮುನ್ನಡೆಸಲು ಶ್ರಮಿಸುತ್ತಿದೆ ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ಶಶಿಧರ ಶಿರಸಂಗಿ, ಶಿಕ್ಷಕರಾದ ಹಸನಸಾಬ ಕಿಲ್ಲೇದಾರ, ಸುಜಾತಾ ದೊಡ್ಡೂರ, ಯುವ ಮುಖಂಡ ಮುತ್ತರಾಜ ಬಾವಿಮನಿ. ಪ್ರಕಾಶ ಶಿರಗೂರ, ದೇವಪ್ಪ ಬಾಳೋಜಿ, ಪ್ರದೀಪ ಗೊಡಚಪ್ಪನವರ, ಶಿದ್ದಪ್ಪ ಹುಗಾರ, ಮಂಜುಳಾ ಜಟ್ಟೆಪ್ಪನವರ, ಶಿವಾನಂದ ಕುಳಗೇರಿ, ಯಶೋಧಾ ಬಾಳೋಜಿ ಹಾಗೂ 45 ಶಿಬಿರಾಥರ್ಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಚನ್ನಮ್ಮ ಹಾಲಪ್ಪಗೌಡರ, ಸ್ವಾಗತವನ್ನು ಭೂಮಿಕಾ ಕೆಲೂರ, ವಂದನೆಗಳನ್ನು ಶೋಭಾ ಶೆಟ್ಟೆಣ್ಣವರ ನಡೆಸಿಕೊಟ್ಟರು.