ಮೂರನೇ ಕಣ್ಣು ಚಿತ್ರದ ಟ್ರೈಲರ್ ಬಿಡುಗಡೆ

ಲೋಕದರ್ಶನ ವರದಿ

ಕೊಪ್ಪಳ 29: ಕೊಪ್ಪಳ ನಗರ ಮತ್ತು ಜಿಲ್ಲೆಯ ಸುತ್ತಮುತ್ತಿಲಿನ ಪ್ರದೇಶದಲ್ಲಿ ಚಿತ್ರಿಕರಣಗೊಂಡ ಮಂಗಳಮುಖಿಯೊಬ್ಬಳು ಚಿತ್ರದ ಪ್ರಧಾನ ನಾಯಕಿಯಾಗಿ ನಟಿಸಿದ ಮೊಟ್ಟ ಮೊದಲೆನೆಯ ಸಿನಿಮಾ ಮೂರನೇ ಕಣ್ಣು ಕನ್ನಡ ಚಲನಚಿತ್ರದ ಟ್ರೈಲರನ್ನು ಸೋಮವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಸಾದಿಕ್ ಅಲಿ ಹಾಗೂ ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ರವರು ಜಂಟಿಯಾಗಿ ಲ್ಯಾಪ್ ಟ್ಯಾಪ್ನಲ್ಲಿ ಬಟನ್ ಕ್ಲಿಕ್ ಮಾಡುವ ಮೂಲಕ ಟ್ರೈಲರ್ ಬಿಡುಗಡೆಗೊಳಿಸಿದರು. ನಂತರ ಚಿತ್ರದ ನಿದರ್ೇಶಕ ನಜೀರ್ ಕೆ. ಮಾತನಾಡಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕನರ್ಾಟಕ ಭಾಗದಲ್ಲಿ ಚಿತ್ರಿಕರಣಗೊಂಡ ಚಿತ್ರ ಸುಮಾರ 90ಲಕ್ಷ ರೂಗಳ ವೆಚ್ಚದಲ್ಲಿ ಪೂರ್ಣಗೊಂಡಿದೆ. ಶೀಘ್ರ ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಿದೆ ಎಂದ ಅವರು ಮಂಗಳಮುಖಿಯರವ ನೈಜ ಜೀವನ ಮತ್ತು ಅವರ ಮೇಲೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಚಿತ್ರದಲ್ಲಿ ಬಹಳಷ್ಟು ಸನ್ನಿವೇಶಗಳು ಪ್ರಕ್ಷೇಕರ ಮುಂದೆ ಬರಲಿದೆ. ಎಂದರು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ನಿವಾಸಿ ಶ್ರೇಯಾ ಎಂಬ ಮಂಗಳಮುಖಿ ನಾಯಕಿ ಹಾಗೂ ರೋಹಿಣಿ ಅಂಜಲಿ, ಸ್ನೇಹ ಮುಖ್ಯ ಪತ್ರಾಧಾರಿಗಳು ಮಂಗಳಮುಖಿಯಾಗಿದ್ದು ಶಿವು, ಮಂಜು, ಪ್ರಕಾಶರವರು ಖಳನಾಯಕನ ಪಾತ್ರದಲ್ಲಿ ಇದ್ದಾರೆ. ಸಚಿನ್ ಚಿತ್ರದ ನಾಯಕ ನಟನಾಗಿ ಅಭಿನಯಸಿದ್ದಾರೆ. ಕೊಪ್ಪಳದ ಅಬ್ದುಲ್ ಮತ್ತು ರಿಜವಾನ್ ಬೇಪಾರಿ ಅವರು ನಿಮರ್ಾಣದ ಜವಾಬ್ದಾರಿ ಹೊತ್ತಿದ್ದಾರೆ. ಸುಮಾರು 60 ಜನ ಮಂಗಳಮುಖಿಯರು ಅಭಿನಯಸಿದ ಈ ಚಿತ್ರದಲ್ಲಿ ಮಂಗಳಮುಖಿಯವರ ಏಳು ಬೀಳು ಮತ್ತು ಯಾತನೆಗಳನ್ನು ಚಿತ್ರಿಕರಿಸಲಾಗಿದೆ. ಡಿ.ಜೆ.ಪ್ರಕಾಶ್ ಅವರ ಸಂಕಲಣ, ಶರಣು ವಿ. ಸುಗನ್ನಹಳ್ಳಿ ಮತ್ತು ಜಿ.ವಿ.ನಾಗರಾಜ್ ಛಾಯಗ್ರಹಣ, ರಾಧಕೃಷ್ಣ ಬಸ್ರೂರ್ ಅವರ ಸಂಗೀತ ಸಂಗೀತ ಸಂಯೋಜನೆ, ಸಂಜು ಬ್ರೂಲಿ ಬಾಬು ಅವರ ನೃತ್ಯ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿದರ್ೇಶಕ ನಜೀರ್ ನಿಭಾಯಿಸಿದ್ದಾರೆ.

ಕೊಪ್ಪಳದ ಸುತ್ತ ಮುತ್ತ ಪ್ರದೇಶಗಳಲ್ಲಿ ಚಿತ್ರಕರಣಗೊಂಡ ಮೂರನೇ ಕಣ್ಣು ಚತ್ರ ಎಲ್ಲಾ ಹಂತಗಳಲ್ಲಿ ಪೂರ್ಣಗೊಂಡಿದೆ, ಟ್ರೈರಲ್ ಬಿಡುಗಡೆಯಾಗಿದೆ. ದೊಡ್ಡ ದೊಡ್ಡ ಕಲಾವಿದರಿಗೆ ಪ್ರೋತ್ಸಾಹ ಬೆನ್ನು ತಟ್ಟುವ ಕೆಲಸವನ್ನು ನಮ್ಮ ಹೊಸ ಪ್ರತಿಭೆಗಳು ಪ್ರಯತ್ನಿಸಿವೆ. ಪ್ರೇಕ್ಷಕ ಪ್ರಭುಗಳು ಪ್ರೋತ್ಸಾಯಿಸಬೇಕೆಂದು ನಿರ್ದೇಶಕ ನಜೀರ್ ನೇತೃತ್ವದ ಸಿನಿಮಾ ತಂಡದ ಕಲಾವಿದರು ಮನವಿ ಮಾಡಿಕೊಂಡರು.