ಟ್ರ್ಯಾಕ್ಟರ್ ಪಲ್ಟಿ ತಪ್ಪಿದ ದುರಂತ


ಲೋಕದರ್ಶನ ವರದಿ

ಮುಂಡಗೋಡ: ತಾಲೂಕಿನ ಓರಲಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ರಾತ್ರಿ ಕೆರೆಯ ಮಣ್ಣನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆೆ.

ಹಾನಗಲ್ ತಾಲೂಕಿನ ನೊಂದಣಿ ಟ್ರ್ಯಾಕ್ಟರ ಇದಾಗಿದ್ದು ಅಪಘಾತವಾದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಓರಲಗಿ ಗ್ರಾ.ಪಂ ವ್ಯಾಪ್ತಿಯ ಸರ್ವೆ ನಂ 10 ರ ಹೊಸ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜೆ ಸಿ.ಬಿ ಯಂತ್ರದಿಂದ ಕೆರೆ ಹೂಳೆತ್ತಿದ್ದರು ಎನ್ನಲಾಗಿದೆ. ಹೂಳೆತ್ತಿದ್ದ ಮಣ್ಣನ್ನು  ಟ್ರ್ಯಾಕ್ಟರ ಮುಖಾಂತರ ಹೊತ್ತೊಯ್ಯುತ್ತಿದ್ದ  ವೇಳೆ ಕೆರೆಯ ಹತ್ತಿರವೇ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ ಪಲ್ಟಿಯಾಗಿದೆ. ಅದೃಷ್ಟವಶಾತ ಚಾಲಕ ಪಾರಾಗಿದ್ದಾನೆ. ಪಲ್ಟಿಯಾದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದಬಂದಿದೆ. ಇನ್ನು ಕುತೂಹಲವೆನೆಂದರೆ ಚಾಲಕ ಅಪಘಾತವಾದ ತಕ್ಷಣವೇ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಟ್ರ್ಯಾಕ್ಟರ ಅಪಘಾತವು ಸಂಶಯಕ್ಕೆೆ ಎಡೆಮಾಡಿಕೊಟ್ಟಿದೆ. ಅಪಘಾತವಾದ ತಕ್ಷಣವೇ ಆ ಸ್ಥಳದಿಂದ ಜ.ೆಸಿ.ಬಿ ಯಂತ್ರವನ್ನು ಕಳಸಿದ್ದಾರೆ . ರಾತ್ರಿ ವೇಳೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜೆ ಸಿ.ಬಿಯಂತ್ರದಿಂದ ಕೆರೆ ಹೂಳೆತ್ತುತ್ತಿದ್ದರೇ ಎಂಬ ಅನುಮಾನ ಮೂಡುತ್ತಿದೆ. ಆದರೆ ಇದರ ಅವಶ್ಯಕತೆ ಏನಿತ್ತು  ಈ ಬರಗಾಲದ ವೇಳೆೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವ ಬದಲು ಜ.ೆಸಿ.ಬಿ ಯಂತ್ರದಿಂದ ಕೆಲಸ ಮಾಡಿಸಿ ಹಣ ಲೂಟಿ ಮಾಡಲು ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮತ್ತು ಇದೆಲ್ಲಾ ಅಧಿಕಾರಿಗಳ ಗಮನಕ್ಕೆ ಬಂದರೂ ಕೈ ಕಟ್ಟಿ ಕುಳಿತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ. ಈ ಪ್ರಕರಣವು ತನಿಖೆಯಿಂದಲೇ ಮಾತ್ರ ಸತ್ಯಾಂಶ ಹೊರ ಬರಬೇಕಾಗಿದೆ.