ಟ್ರ್ಯಾಕ್ ರನ್ನಿಂಗ್ ರೇಸ್ ಸ್ಪರ್ಧೆ
ಹೊಸಪೇಟೆ 23: ಓರಿಸ್ಸಾ ರಾಜ್ಯದ ಭುವನೇಶ್ವರಿಯ ಕಿಸ್ ವಿಶ್ವ ವಿಧ್ಯಾಲಯದಲ್ಲಿ ನಡೆಯುವ 2024ರ ಸಾಲಿನಲ್ಲಿ ಅಖಿಲ ಭಾರತ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿಧ್ಯಾಲಯದಿಂದ 10 ಕಿ.ಮೀ ಟ್ರ್ಯಾಕ್ ರನ್ನಿಂಗ್ ರೇಸ್ ಸ್ಪರ್ಧೆಗೆ ಪ್ರತಿನಿಧಿಯಾಗಿ ಆಯ್ಕೆಯಾದ ನಗರದ ವಿಜಯನಗರ ಕಾಲೇಜಿನ ಬಿ.ಎ. ದ್ವೀತೀಯ ವರ್ಷದ ವಿಧ್ಯಾರ್ಥಿಯು ಕಂಚಗಾರ ಪೇಟೆಯ ನಿವಾಸಿಯಾದ ಎಮ್. ಶಾಷಾವಲಿ ಮೈಫೂಸ್ ರವರನ್ನು ಇಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಹುಡಾ ಕಛೇರಿಯಲ್ಲಿ ಶಾಲು ಹಾರ ಹಾಕಿ ಅಭಿನಂಧಿಸುವ ಮೂಲಕ ಸಹಾಯ ಧನ ನೀಡಿ ಶುಭ ಕೋರಿದರು.
ಓರಿಸ್ಸಾ ರಾಜ್ಯದ ಭುವನೇಶ್ವರಿಯ ಕಿಸ್ ವಿಶ್ವ ವಿಧ್ಯಾಲಯದಲ್ಲಿ ಇದೇ ತಿಂಗಳು ದಿ:26 ರಿಂದ 31 ರವರೆಗೆ ನಡೆಯುವ 2024ರ ಸಾಲಿನಲ್ಲಿ ಅಖಿಲ ಭಾರತ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ಭಾಗವಹಿಸುವ ಸ್ಪರ್ಧಿಗಳ ಪ್ರತಿನಿಧಿಗಳ ಆಯ್ಕೆಯ ಕ್ರೀಡೆಯು ದಿನಾಂಕ; 12-12.2024 ರಂದು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿಧ್ಯಾಲಯ ವತಿಯಿಂದ ಬಳ್ಳಾರಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವವಿಧ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜು ವಿಧ್ಯಾರ್ಥಿಗಳ ಕ್ರೀಡಾಕೂಟ ನಡೆದಿದು, ಸದರಿ ಕ್ರೀಡೆಯಲ್ಲಿ ನಗರದ ವಿಜಯನಗರ ಕಾಲೇಜಿನ ಬಿ.ಎ. ದ್ವೀತೀಯ ವರ್ಷದ ವಿಧ್ಯಾರ್ಥಿಯು ಕಂಚಗಾರ ಪೇಟೆಯ ನಿವಾಸಿಯಾದ ಎಮ್. ಶಾಷಾವಲಿ ಮೈಫೂಸ್ ರವರು 10 ಕಿ.ಮೀ ಟ್ರ್ಯಾಕ್ ರನ್ನಿಂಗ್ ರೇಸ್ ಸ್ಪರ್ಧೆಗೆ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ. ಇವರು ಕ್ರೀಡಾಕೂಟದಲ್ಲಿ ನಮ್ಮ ವಿಶ್ವವಿಧ್ಯಾಲಯದ ಹಾಗೂ ನಮ್ಮ ನಗರದ ಕಾಲೇಜು ವತಿಯಿಂದ ಪ್ರತಿನಿಧಿ ಸ್ಪರ್ಧಿಯಾಗಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಚಾರವಾಗಿದ್ದು ಇವರು ಕ್ರೀಡೆಯಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಗೆದ್ದು ನಮ್ಮ ಊರಿಗೆ ಹಾಗೂ ಕಾಲೇಜಿಗೆ ಕೀರ್ತೀ ತರಲೇಂದು ಶುಭ ಹಾರೈಸುತ್ತೇನೆ ಎಂದರು. ಇದೇ ವೇಳೆ ವಿಜಯ ಕುಮಾರ್, ಉಮಾರ್ ಉಪಸ್ಥಿತರಿದ್ದರು.