ನಾಳೆ ವನ ಮಹೋತ್ಸವ ಕಾರ್ಯಕ್ರಮ


ಲೋಕದರ್ಶನ ವರದಿ

ಶಿಗ್ಗಾವಿ 24:  ಕನ್ನಡ ಸಾಹಿತ್ಯ ಪರಿಷತ್ತು ಬಂಕಾಪುರ ಹೋಬಳಿ ಘಟಕದ ಆಶ್ರಯದಲ್ಲಿ 2018/19 ನೇ ಸಾಲಿನಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಅರಳಲೆಮಠದ ಸಭಾ ಭವನದಲ್ಲಿ ಕ.ಸಾ.ಪ.ಹೋಬಳಿ ಘಟಕದ ಅದ್ಯಕ್ಷರಾದ ಡಾ.ಆರ್.ಎಸ್.ಅರಳಲೆಮಠ ಅದ್ಯಕ್ಷತೆಯಲ್ಲಿ ನಡೆಸಲಾಯಿತು.

     ಸಭೆಯಲ್ಲಿ 2018/19 ನೇ ಸಾಲಿನ ಪ್ರಥಮ ಕಾರ್ಯಕ್ರಮವನ್ನಾಗಿ ಜುಲೈ 26ರಂದು ಕ.ಸಾ.ಪ, ಸರಕಾರಿ ಪ್ರಥಮ ದಜರ್ೆ ಕಾಲೇಜ್, ಪೊಲೀಸ್ ಇಲಾಖೆ, ದುಂಡಸಿ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದ ಆವರಣದಲ್ಲಿ ಆಚರಿಸಲು ತಿಮರ್ಾನಿಸಲಾಯಿತು.

     ಶ್ರಾವಣ ಮಾಸದಲ್ಲಿ ಜಾನಪದ ಸೊಗಡನ್ನು ಬಿತ್ತರಿಸುವ ಜಾನಪದ ಗೀತೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ನಾಡು ನುಡಿ ಬಾಷೆಯನ್ನು ಬಿತ್ತರಿಸುವ ಕುಟ್ಟುವಾಗಿನ ಬೀಸುವಾಗಿನ, ಜೋಗುಳ ಹಾಡುಗಳನ್ನು ಹೇಳುವ ಸ್ಪದರ್ೆ, ಗ್ರಾಮೀಣ ಕ್ರೀಡೆಗಳ ಸ್ಪದರ್ೆ, ಪ್ರಬಂದ ಸ್ಪದರ್ೆಗಳನ್ನು ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಆಯೋಜಿಸುವ  ಮೂಲಕ ಮಕ್ಕಳಲ್ಲಿ ಸಾಹಿತ್ಯ ಸಂಸ್ಕೃತಿ ಕಲೆ ಗ್ರಾಮೀಣ ಸೊಗಡನ್ನು ಪಸರಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ತಿಮರ್ಾನಿಸಲಾಯಿತು. 

ವರ್ಷವಿಡಿ ನಡೆಸುವ ಕಾರ್ಯಕ್ರಮಗಳಿಗೆ ಹಣಕಾಸು ನೇರವನ್ನು ಪಡೆಯಲು ಪುರಸಭೆ ಸ್ಥಾಯಿ ಸಮಿತಿಗೆ ಮನವಿಯನ್ನು ಅಪರ್ಿಸಲು ಸವರ್ಾನುಮತದಿಂದ ಸಭೆಯಲ್ಲಿ ತಿಮರ್ಾನಿಸಲಾಯಿತು.ಸಾಹಿತಿಗಳಾದ ಎ.ಕೆ.ಆದವಾನಿಮಠ, ಅಬ್ದುಲ್ರಜಾಕ ತಹಶೀಲ್ದಾರ, ಕಸಾಪ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ವಿ.ಸಿ.ಪಾಟೀಲ, ಡಾ.ರಾಜು ಇಳಗೇರ, ಬಸವರಾಜ ನಾರಾಯಣಪುರ, ರಾಮಕೃಷ್ಣ ಆಲದಕಟ್ಟಿ, ಮಂಜುನಾಥ ಕೂಲಿ, ಮಹೇಶ ಪುಕಾಳೆ, ರವಿ ಕುರಗೋಡಿ, ಹನಮಂತಪ್ಪ ವಿ, ಈರಣ್ಣ ಪಟ್ಟಣಶೇಟ್ಟರ ಸೇರಿದಂತೆ ಮತ್ತಿತರರು ಇದ್ದರು.