ಧಾರವಾಡ21: ಪ್ರತೀ ವರುಷದ ಪದ್ಧತಿಯಂತೆ ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ದೇವಾಲಯದ 5ನೆಯ ವಾಷರ್ಿಕೋತ್ಸವದ ಅಂಗವಾಗಿ ನ. 23 ರಂದು (ಶುಕ್ರವಾರ) ಗೌರಿ ಹುಣ್ಣಿಮೆಯ ದಿನ ಪ್ರಾತಃಕಾಲ 6 ಗಂಟೆಗೆ ಸಾಮೂಹಿಕ ಗುಗ್ಗಳ ಮಹೋತ್ಸವ ಜರುಗಲಿದೆ.
ಭಕ್ತಗಣದ ಸೇವೆಯಲ್ಲಿ ಜರುಗಲಿರುವ ಈ ಸಾಮೂಹಿಕ ಗುಗ್ಗಳ ಮಹೋತ್ಸವದಲ್ಲಿ ಮರೇವಾಡ, ಕರಡಿಗುಡ್ಡ, ಉಣಕಲ್ಲ, ಸುಳ್ಳ ಹಾಗೂ ಅಮ್ಮಿನಬಾವಿ ಗ್ರಾಮಗಳ ಹಿರಿಯ ಮತ್ತು ಕಿರಿಯ ಜನಪದ ಪುರವಂತ ಕಲಾವಿದರ ತಂಡವು ನಿರಂತರವಾಗಿ ಒಡಪುಗಳ ಸೇವೆಯನ್ನು ಸಲ್ಲಿಸಲಿದೆ.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಜಂಟಿಯಾಗಿ ಗುಗ್ಗಳ ಉತ್ಸವವನ್ನು ಪ್ರಜ್ವಲನಗೊಳಿಸಿ ಉದ್ಘಾಟಿಸಲಿದ್ದು, ನಂತರ ಗುಗ್ಗಳವು ನಂದಿಕೋಲು, ಪಲ್ಲಕ್ಕಿ, ಸಂಬಾಳ, ಕರಡಿಮಜಲು ಸೇರಿದಂತೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಇದಕ್ಕೂ ಮುನ್ನ ಶುಕ್ರವಾರ ಪೌಣರ್ಿಮೆಯ ಪ್ರಾತಃಕಾಲದ ಬ್ರಾಹ್ಮೀ ಮುಹೂರ್ತದಲ್ಲಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ವೈದಿಕ ಬಳಗದ ವತಿಯಿಂದ ಶ್ರೀವೀರಭದ್ರಸ್ವಾಮಿಗೆ ಕ್ಷೀರಾಭಿಷೇಕ, ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಹಾಗೂ ಅಲಂಕಾರ ಮಹಾಪೂಜೆ ನೆರವೇರಲಿದೆ.
ವಿವಾಹದ ಸಂದರ್ಭದಲ್ಲಿ ಶ್ರೀವೀರಭದ್ರಸ್ವಾಮಿ ಗುಗ್ಗಳ ಹರಕೆಯ ಸಂಕಲ್ಪ ಇರುವ ಕುಟುಂಬಗಳ ವಿವಾಹವಾಗಲಿರುವ ಗಂಡು ಮಕ್ಕಳು ಮತ್ತವರ ಪಾಲಕರು ಈ ಸಾಮೂಹಿಕ ಗುಗ್ಗಳ ಕಾರ್ಯದಲ್ಲಿ ಪಾಲ್ಗೊಂಡು ಸಂಕಲ್ಪ ಮಾಡಿ ಹರಕೆ ತೀರಿಸಬಹುದಾಗಿದ್ದು, ಈ ಕುರಿತು ಮೊಬೈಲ್ ಸಂಖ್ಯೆ 9611184200 ಇಲ್ಲವೇ 9945959431 ಮೂಲಕ ಸಂಪಕರ್ಿಸಬಹುದಾಗಿದೆ.
ದಾಸೋಹ ಸೇವೆ : ಶ್ರೀವೀರಭದ್ರಸ್ವಾಮಿಯ ಭಕ್ತಗಣದ ಸೇವೆಯಲ್ಲಿ ಈ ಗುಗ್ಗಳ ಉತ್ಸವದ ಅಂಗವಾಗಿ ನಡೆಯುವ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ತಿಳಿಸಿದೆ.