ಲೋಕದರ್ಶನ ವರದಿ
ಯಲಬುಗರ್ಾ 14: ಸ್ವಚ್ಛತೆ ನೈರ್ಮಲ್ಯ ಹಾಗೂ ಶುದ್ಧ ಕುಡಿಯುವ ನೀರಿನ ಮಹತ್ವದ ಕುರಿತು ಗ್ರಾಮ ಪಂಚಾಯತ ಮಟ್ಟದಲ್ಲಿ ಉಪಸಮಿತಿಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸ ಬೇಕು ಎಲ್ಲಾ ಗ್ರಾಮಗಳು ಸಂಪೂರ್ಣ ಬಯಲು ಬಹಿದರ್ೆಶೆ ಮುಕ್ತವಾಗಬೇಕಾದರೆ ಶೌಚಾಲಯ ಕಟ್ಟಿಕೊಂಡವರು ಅದರ ಬಳಕೆ ಆಗಬೇಕು ಬಳಕೆ ಅಭಿಯಾನ ಮಾಡಬೇಕು ಶಾಲೆಗಳಲ್ಲಿ ಅಂಗನವಾಡಿಗಳಲ್ಲಿ ಸ್ವಚ್ಛತೆ ಕುರಿತು ಕಾರ್ಯಕ್ರಮವಾಗಬೇಕೆಂದು ತಾಪಂ ಇಓ ಡಾ. ಮೋಹನ್ ಹೇಳಿದರು.
ತಾಲೂಕು ಪಂಚಾಯತಿ ಸಭಾ ಭವನದಲ್ಲಿ. ಸ್ವಚ್ಚ ಭಾರತ ಮಿಷನ್(ಗ್ರಾ)ಯೋಜನೆ ಹಾಗೂ ಯೂನಿಸೆಫ್ ಸಹಯೋಗದೊಂದಿಗೆ 5 ಮಾದರಿ ಗ್ರಾಮ ಪಂಚಾಯತಗಳ ಕ್ಷೇತ್ರ (ತಳಮಟ್ಟದ)ಕಾರ್ಯಕರ್ತರಿಗೆ ಮತ್ತು ಸಮಿತಿಗಳ ಸಾಮಥ್ರ್ಯ ಅಭಿವೃದ್ಧಿ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಲಕ್ಮೀ ದ್ಯಾಮನಗೌಡ್ರ ತಾಲೂಕ ಪಂಚಾಯತ ಅಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟನೆ ಮಾಡಿ ಮಾತನಾಡಿ ಸ್ವಚ್ಛ ಭಾರತ ಮಿಷನ್ ಹಾಗೂ ಯೂನಿಸೆಫ್ ಯೋಜನೆಯಡಿ ಮಾಹಿತಿ ಪಡೆದುಕೊಂಡು ಮಾದರಿ ಗ್ರಾಮ ಪಂಚಾಯತಗಳಲ್ಲಿ ತರಬೇತಿ/ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಮಾಡುವ ಮೂಲಕ ತಾಲೂಕಿನ ಐದು ಗ್ರಾಮ ಪಂಚಾಯತದಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಬೇಕು ಗ್ರಾಮಗಳು ಸಂಪೂರ್ಣ ಬಯಲು ಬಹಿದರ್ೆಶೆ ಮುಕ್ತವಾಗಬೇಕಾದರೆ ಶೌಚಾಲಯ ಕಟ್ಟಿಕೊಂಡವರು ಬಳಸಬೇಕು ಆದರೆ ಗ್ರಾಮ ನೀರು ನೈರ್ಮಲ್ಯ ಸಮಿತಿಗಳು ಸರಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು.
ನೈರ್ಮಲ್ಯ ಮತ್ತು ಶೌಚಾಲಯಗಳ ಬಳಿಕೆ ಕುರಿತು ಹಿರಿಯ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಎಸ್.ಡಿ.ಬೆನ್ನೂರು ಮಾತನಾಡಿದರು. ವಾಷ್ ಮಾದರಿ ಗ್ರಾಮ ಪಂಚಾಯತಿಗಳ ಪರಿಕಲ್ಪನೆ ಕುರಿತು ಫಕೀರಪ್ಪ ಕಟ್ಟಿಮನಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುಧೋಳ ಇವರು ತಮ್ಮ ಉಪನ್ಯಾಸದಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೆನು ಎನ್ನುವ ವಿಷಯದ ಕುರಿತು ಮಾತನಾಡಿದರು.
ಗ್ರಾಮ ಪಂಚಾಯತಿ ಉಪಸಮಿತಿಗಳ ಜವಾಬ್ದಾರಿಗಳು ಕುರಿತು ಹನಂತಗೌಡ್ರ ಪಾಟೀಲ ಸಹಾಯಕ ನಿದರ್ೇಶಕರು ನರೇಗಾ ಯಲಬುಗರ್ಾ/ಅಭಿವೃದ್ಧಿ ಅಧಿಕಾರಿಗಳು ಗೆದಗೇರಿ ಇವರು ಉಪನ್ಯಾಸ ನೀಡಿದರು. ನಂತರ ಎರಡು ಗುಂಡಿ ಶೌಚಾಲಯದ ಮಾದರಿಗಳು ಮತ್ತು ತಾಂತ್ರಿಕತೆ. ಕುರಿತು ರಾಮಣ್ಣ ಬಂಡಿಹಾಳ ಜಿಲ್ಲಾ ಎಚ್.ಆರ್.ಡಿ ಸಮಾಲೋಚಕರು ಕೊಪ್ಪಳ ವಿಶ್ವನಾಥ ತಾಂತ್ರಿಕ ಸಹಾಯಕರು. ನರೇಗಾ ಯಲಬುಗರ್ಾ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶರಣಪ್ಪ ವಡಗೇರಿ ಜಾನಪದ ಕಲಾವಿದರು.ಮಾಡಿದರು ಭೀಮಪ್ಪ ಹವಳಿ. ಯೂನಿಸೆಫ್ ತಾಲೂಕ ಸಂಯೋಜಕರು ಸ್ವಾಗತಿಸಿದರು ಪ್ರಾಸ್ತಾವಿಕ ನುಡಿಯನ್ನು ಬಸವರಾಜ ಸೂಡಿ ಯೂನಿಸೆಫ್ ತಾಲ್ಲೂಕ ಸಂಯೋಜಕರು ಕೊಪ್ಪಳ ಇವರು ಮಾತನಾಡಿದರು, ವಿಷಯ ನಿವರ್ಾಹಕ ಹನಮಂತಪ್ಪ ಕುರಿ. ನಿಂಗಪ್ಪ ಮೂಲಿಮನಿ. ಶರಣಮ್ಮ ಕೆಳಗಿನಮನಿ. ಮಂಜುಳಾ. ಇನ್ನಿತರು ಹಾಜರಿದ್ದರು.