ಹಿರೇಮಣ್ಣೂರಿನಲ್ಲಿ ಇಂದು ನಾಳೆ ಚನ್ನಕೇಶವ ಜಯಂತಿ
ಮಣ್ಣೂರ 14: ಶ್ರೀಕ್ಷೇತ್ರ ಮಣ್ಣೂರಿನಲ್ಲಿ ಇದೇ 15 ಮತ್ತು 16ರಂದು ಚನ್ನಕೇಶವ ಜಯಂತಿ ಜರುಗಲಿದೆ
15ರಂದು ಮಾರ್ಗಶೀರ್ಷ ಪೌರ್ಣಮಿ ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರ ಸಹಸ್ರ ಶಂಖಾ ಭಿಷೇಕ, ಪಂಚಾಮೃತ ಅಭಿಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾ ನೈವೇದ್ಯ, ತೀರ್ಥ ಪ್ರಸಾದ ಸಂಜೆ 7 ಗಂಟೆಗೆ ದಾಸವಾಣಿ ಕಾರ್ಯಕ್ರಮ ಜರುಗುವುದು.
ಡಿ.16ರಂದು ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ, ರಘುನಾಥತೀರ್ಥ ಆದ್ಯ ವರದರಾಜಾಚಾ ರ್ಯರ ಕೃಷ್ಣ ದೈಪಾಯನಾಚಾರ್ಯ ಹಾಗೂ ರಾಮಕೇಶವಾ ಚಾರ್ಯರ ಪಾದುಕೆಗಳ ಶೋಭಾಯಾತ್ರೆ ಭೀಮಾನದಿಯಿಂದ ಚನ್ನಕೇಶವ ದೇವಸ್ಥಾನದವರೆಗೆ ಜರುಗುವುದು. ನಂತರ ರಥೋತ್ಸವ, ಮಹಾ ನೈವೇದ್ಯ, ಅಲಂಕಾರ, ತೀರ್ಥ ಪ್ರಸಾದ ಸಂಜೆ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ಚನ್ನಕೇಶವ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.