ಇಂದು ಲೋಕಸಭಾ ಚುನಾವಣೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

ಲೋಕದರ್ಶನವರದಿ

ರಾಣೇಬೆನ್ನೂರ೨೨: ನಾಳೆ ನಡೆಯಲಿರುವ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೋಮವಾರದಂದು ಸ್ಥಳೀಯ ಚುನಾವಣಾಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುವ ಮೂಲಕ ಚುನಾವಣೆಯ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ಸಾಮಗ್ರಿಗಳನ್ನು ವಿತರಿಸಲಾಯಿತು. ನಗರದ ಹೊರವಲಯದ ಸೇಂಟ್ ಲಾರೆನ್ಸ್ ಶಾಲೆಯ ಅವರಣದಲ್ಲಿ ಮತಗಟ್ಟೆಗಳಿಗೆ ತೆರಳಲು ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ಚುನಾವಣಾ ಸಿಬ್ಬಂದಿಗಳು ಕೊಂಡೊಯ್ದರು.

   ಕ್ಷೇತ್ರದಲ್ಲಿ ಒಟ್ಟು 266 ಮತಗಟ್ಟೆಗಳ ಪೈಕಿ 45 ಸೂಕ್ಷ್ಮ, 5 ಅತೀ ಸೂಕ್ಷ್ಮ ಹಾಗೂ 216 ಸಾಮಾನ್ಯ ಮತಗಟ್ಟೆಗಳಿವೆ. ಸ್ಥಳೀಯ ಲೋಕೋಪಯೋಗಿ ಇಲಾಖೆ ಮತ್ತು ತಾಲೂಕಿನ ಕಮದೋಡದಲ್ಲಿನ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಹಾಗೂ ನಗರಸಭೆಯ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 2,33,024 ಮತದಾರರಿದ್ದು, ಅವರಲ್ಲಿ ಪುರುಷರು 1,18.644 ಮತ್ತು ಮಹಿಳೆಯರು 1,14,366 ಹಾಗೂ ಇತರರು 14 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿನ ಅಂಚೆ ಮತಪೆಟ್ಟಿಗೆಗಳಲ್ಲಿ ಸರಕಾರಿ ನೌಕರರು ತಮ್ಮ ಹಕ್ಕನ್ನು  ಮತಗಟ್ಟೆಗಳಲ್ಲಿ ಚಲಾವಣೆಗೊಳಿಸುವರು. 

   ಮತದಾನ ಪ್ರಕ್ರಿಯೆಗೆ 300 ಪಿಆರ್ಓ, ಕೆಪಿಆರ್ಓ 300 ಜೊತೆಗೆ ಚುನಾವಣಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

    ಮೀಸಲು 52 ಸಿಬ್ಬಂದಿಯನ್ನು ಹಾಗೂ 24 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತದಾನವು ಸುಗಮವಾಗಿ ನಡೆಯಲು ಒಂದು ಡಿವೈಎಸ್ಪಿ, 3 ಸಿಪಿಐ, 5 ಪಿಎಸ್ಐ, 16 ಎಎಸ್ಐ, 57 ಮುಖ್ಯ ಪೇದೆ, ಪಿಸಿ 110, ಹೊಂಗಾಡ್ಸರ್್ 216, 3 ಐಎಸ್ಎಫ್ ತುಕಡಿಗಳಲ್ಲಿ ಪ್ರತಿ 88 ಸಿಬ್ಬಂದಿಗಳು ಹಾಗೂ ಒಂದು ಕೆಎಸ್ಆರ್ಫಿ, ತುಕಡಿಯನ್ನು ಬಂದೋಬಸ್ತ್ಗಾಗಿ  ನಿಯೋಜಿಸಲಾಗಿದೆ. ಮತಪೆಟ್ಟಿಗೆ ಹಾಗೂ ಸಿಬ್ಬಂದಿಗಳನ್ನು ಸಾಗಿಸಲು 35 ಬಸ್, 7 ಟೆಂಪೋ, 14ಕ್ರೂಜರ್ ಸೇರಿದಂತೆ ಇತರ ಸಕರ್ಾರಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

    ಕ್ರಮವಾಗಿ ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಸಾಮಗ್ರಿಗಳ ಜೊತೆಗೆ ಸಿಬ್ಬಂದಿಗಳನ್ನು ನೇಮಿಸಿ ಮತಗಟ್ಟೆಗಳಿಗೆ ಕಳುಹಿಸಲಾಯಿತು. ಮೀಸಲು ಉಳಿದ ಸಿಬ್ಬಂದಿಗಳನ್ನು ಅಲ್ಲಿಯೇ ಇರಿಸಲಾಯಿತು. ಮುಂಜಾನೆ 9ಘಂಟೆಯಿಂದಲೇ ಚುನಾವಣೆ ಸಿಬ್ಬಂದಿಗಳು ಸೇಂಟ್ ಲಾರೆನ್ಸ್ ಸ್ಕೂಲ್ ಆವರಣದಲ್ಲಿ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಆಗಮಿಸಿದ್ದರೂ ಸಹ ಮದ್ಯಾಹ್ನ 1-30ರ ನಂತರ ಅವರುಗಳಿಗೆ ಮತದಾನ ಯಂತ್ರ, ಮತ್ತಿತರ ಚುನಾವಣಾ ಸಾಮಗ್ರಿಗಳನ್ನು ನೀಡಲಾಯಿತು. ಸಿಬ್ಬಂದಿಗಳು ವಾಹನದ ಮೂಲಕ ಮತಯಂತ್ರ, ಸಾಮಗ್ರಿಗಳನ್ನು ಕೊಂಡೊಯ್ದರು.