ಲೋಕದರ್ಶನ ವರದಿ
ಬೆಳಗಾವಿ 25: ಜಿಐಟಿಯಲ್ಲಿ ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯಸರ್್ (ಎಎಸ್ಎಮ್ಇ) ವಿದ್ಯಾಥರ್ಿ ಸಂಘದ ಉದ್ಘಾಟನೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಬೆಳೆದಂತೆ ಜಾಗತಿಕವಾಗಿ ರಾಷ್ಟ್ರ ರಾಷ್ಟ್ರಗಳ ನಡುವಿನ ಪರಿಮಿತಿಗಳು ಕಡಿಮೆಯಾಗುತಲಿದ್ದು ಎಲ್ಲಾ ಕ್ಷೇತ್ರಗಳಲ್ಲಿ ವೇಗವಾಗಿ ಬೆಳವಣಿಗೆಗಳು ಕಂಡು ಬರುತಿದ್ದು, ತಾಂತ್ರಿಕ ವಿದ್ಯಾಥರ್ಿಗಳು ಜಾಗತಿಕವಾಗಿ ದೃಷ್ಠಿಯನ್ನು ಬೀರುವ ಅವಶ್ಯಕತೆ ಇದೆ ಎಂದು ಅಮೆರಿಕನ್ ಸೊಸೈಟಿ ಫಾರ್ ಮೆಕ್ಯಾನಿಕಲ್ ಎಂಜಿನೀಸರ್್ (ಎಎಸ್ಎಂಇ) ಯ ಏಷ್ಯಾ ಪೆಸಿಫಿಕ್ ವಿಭಾಗದ ಪ್ರಾದೇಶಿಕ ಸಲಹೆಗಾರ ಡಾ. ಸಿದ್ದಾಥರ್್ ಸಿಂಗ್ ಜಡೆಜಾ ಅವರು ಹೇಳಿದರು. ಇವರು ಇತ್ತೀಚಿಗೆ ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯಸರ್್ (ಎಎಸ್ಎಮ್ ಇ) ವಿದ್ಯಾಥರ್ಿ ಸಂಘವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಇಂದಿನ ತಾಂತ್ರಿಕ ವಿದ್ಯಾಥರ್ಿಗಳು ತಮ್ಮ ಕ್ಷೇತ್ರದಲ್ಲಿ ಸಾಮಾಜಿಕವಾಗಿ ಮಹತ್ತರ ಬದಲಾವಣೆಯನ್ನು ತರಲು ಜಾಗತಿಕವಾಗಿ ಬೆಳೆಯುತ್ತಿರುವ, ಬದಲಾಗುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳ ಹೊಸ ಪರಿಕಲ್ಪನೆಗಳಿಗೆ ತೆರೆದುಕೊಳ್ಳುವುದು ಅತೀ ಮುಖ್ಯವಾಗಿದೆ. ಆದರೆ ಆಥರ್ಿಕ ಸ್ಥಿತಿಯ ಕಾರಣ ಭಾರತದಂತ ರಾಷ್ಟ್ರದಲ್ಲಿ ಎಲ್ಲ ವಿದ್ಯಾಥರ್ಿಗಳಿಗೆ ನೇರ ಪಾಲ್ಗೊಳ್ಳುವಿಕೆ ಅಥವಾ ಕಲಿಕೆ ಅಸಾಧ್ಯ ಆದರೆ ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯಸರ್್ (ಎಎಸ್ಎಮ್ ಇ) ಅಂತಹ ವೇದಿಕೆಗಳು ಇಲ್ಲಿಂದಲೇ ವಿದ್ಯಾಥರ್ಿಗಳಿಗೆ ಜಾಗತಿಕವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳನ್ನೂ ಅರಿಯಲಿ ಸಹಾಯ ಮಾಡಿ ಸಕಾರಾತ್ಮಕ ಬೆಳೆವಣಿಗೆಯಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ ಎಂದು ಅವ್ರು ತಿಳಿಸಿದರು.
ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯಸರ್್ (ಎಎಸ್ಎಮ್ ಇ) ಬಗ್ಗೆ ಮಾತನಾಡುತ್ತ ಸಣ್ಣ ಕೈಗಾರಿಕೋದ್ಯಮಿಗಳು 1800 ರಲ್ಲಿ ಇದನ್ನು ಸ್ಥಾಪಿಸಿದರು, ಇವತ್ತು ಇದು 151 ರಾಷ್ಟ್ರಗಳಲ್ಲಿ 1,30,000 ಸದಸ್ಯರನ್ನು ಒಳಗೊಂಡ ಲಾಭರಹಿತ ಸದಸ್ಯತ್ವ ಸಂಸ್ಥೆಯಾಗಿ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳಲ್ಲಿ ಸಹಭಾಗಿತ್ವ, ಜ್ಞಾನ ಹಂಚಿಕೆ, ವೃತ್ತಿಯ ಪುಷ್ಟೀಕರಣ ಮತ್ತು ಕೌಶಲ್ಯ ಅಭಿವೃದ್ಧಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಸಮುದಾಯ ಜೀವನದ ಪ್ರಯೋಜನಕ್ಕಾಗಿ ಅನೇಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತ ಬಂದಿದೆ ಎಂದು ಹೇಳಿದರು. ಅಲ್ಲದೆ ಈ ವೇದಿಕೆ ಅನೇಕ ಸವಲತ್ತುಗಳನ್ನು ವಿದ್ಯಾಥರ್ಿಗಳಿಗೆ ಒದಗಿಸಿದ್ದು ವಿದ್ಯಾಥರ್ಿಗಳು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು. ನಂತರ ಅವರು ಂಖಒಇ ನೀಡುವ ವಿವಿಧ ಅವಕಾಶಗಳ ಬಗ್ಗೆ ವಿದ್ಯಾಥರ್ಿಗಳ ಮತ್ತು ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿದರು.
ಜಿಐಟಿ ಪ್ರಾಂಶುಪಾಲರಾದ ಡಾ. ಆನಂದ. ಎಸ. ದೇಶಪಾಂಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಜಯಂತ್ ಕಿತ್ತೂರ್ ಸ್ವಾಗತಿಸಿದರು, ಸಂಯೋಜಕರಾದ ಪ್ರೊ. ಹಷರ್ಿತ್ ಕುಲಕಣರ್ಿ ವಿದ್ಯಾಥರ್ಿ ಸಂಘದ ಮುನ್ನೋಟವನ್ನು ಓದಿದರು, ವಿದ್ಯಾಥರ್ಿ ಪ್ರತಿನಿಧಿ ರೋಹಿತ್ ಗುರವ್ ಅತಿಥಿಗಳನ್ನು ಪರಿಚಯಿಸಿದರು, ಕುಮಾರ. ಸಮನ್ ಕಿಲ್ಲೇದಾರ್ ವಂದಿಸಿದರು. ಈ ಸಮಯದಲ್ಲಿ ಮೆಕ್ಯಾನಿಕಲ್ ವಿಭಾಗದ ಎಲ್ಲ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.