ಇಂದು ವರಸಿದ್ಧಿ ವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ

ಲೋಕದರ್ಶನ ವರದಿ

ಗದಗ 09: ಗದಗನ ಹೃದಯ ಭಾಗ, ಕಲೆ, ಸಾಂಸ್ಕೃತಿಯ ಧಾರ್ಮಿಕ ಕಾರ್ಯಗಳಿಗೆ ಹೆಸರಾದ ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ಟ್ರಸ್ಟನ ವತಿಯಿಂದ  ವರಸಿದ್ಧಿ ವಿನಾಯಕ ದೇವಸ್ಥಾನ 31 ನೇ ವಾರ್ಷಿಕೋತ್ಸವ ಪ್ರಯುಕ್ತ ಇದೇ ಶ್ರೀಶಕೆ 1945 ನೇ ಶುಭಕೃತ ನಾಮ ಸಂವತ್ಸರ ದಿ. 10ರ ರವಿವಾರ ಬೆಳಿಗ್ಗೆ 6:30 ರಿಂದ 10ರ ವರೆಗೆ ಮಹಾ ರುದ್ರಾಭಿಷೇಕ, ಅಲಂಕಾರ ಪೂಜೆ, ಗಣಹೋಮ, ಬೆಳ್ಳಿ ಗಣಪತಿ ಪಲ್ಲಕ್ಕಿ ಉತ್ಸವ ಜೊತೆಗೆ ಮಹಾ ಮಂಗಳಾರತಿ ಮಧ್ಯಾಹ್ನ 01:00 ಅಡ್ನೂರ-ರಾಜೂರ-ಗದಗ ಬೃಹನ್ಮಠದ ಷ. ಬ್ರ. ಅಭಿನವ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಮಹಾ ಅನ್ನಸಂತರ್ಪಣೆ ಚಾನನೆ ನೀಡುವರು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕಲ ಸದ್ವಕ್ತರು ಆಗಮಿಸಿ  ವರಸಿದ್ಧಿ ವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ವರಸಿದ್ಧಿ ವಿನಾಯಕ ಟ್ರಸ್ಟನ ಪದಾಧಿಕಾರಿಯಾದ ಶರಣಯ್ಯ ಹೀರೆಮಠ ತಿಳಿಸಿದ್ದಾರೆ