ಬೆಳಗಾವಿ: ಇಂದು ವಿಶ್ವ ಸಂಚಾರ ದಿನಾಚರಣೆ

ಬೆಳಗಾವಿ 26 : ವಿಶ್ವ ಸಂಚಾರ ದಿನಾಚರಣೆ ಅಂಗವಾಗಿ ನಗರದ ಜೈನ್ ಗ್ರೂಪ್ ಆಫ್ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ ನ. 17ರಂದು ರೈಡ್ ಸೈಕಲ್ ಎಂಬ  ಸೈಕ್ಲೋಥಾನ್ ಏರ್ಪಡಿಸಿದೆ.

ಸೈಕ್ಲೋಥಾನ್ನಲ್ಲಿ ಸೈನಿಕರು, ಎನ್ಸಿಸಿ ಕೆಡೆಟ್ಗಳು, ಪೊಲೀಸ್ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾಥರ್ಿಗಳು, ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಇತರ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಂಚಾರ ದಿನಾಚರಣೆ ಅಂಗವಾಗಿ ಜೈನ್ ಹೆರಿಟೇಜ್ ಶಾಲೆ ವಿದ್ಯಾಥರ್ಿಗಳು ಆರ್ಪಿಡಿ, ಕ್ಯಾಂಪ್, ಬೇಲ ಬಜಾರ್ ಮೊದಲಾದೆಡೆ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಮುಖ್ಯ ಸೈಕ್ಲೋಥಾನ್ ಮೊದಲ ದಿನ ಅಂದರೆ, ನ. 16ರಂದು ಕ್ಯಾಂಪ್ ಮತ್ತು ಮಾರುಕಟ್ಟೆಯಲ್ಲಿ ಮಿನಿ ಸೈಕ್ಲೋಥಾನ್ ಸಹ ಆಯೋಜಿಸಲಾಗಿದೆ. 

ಹೆಸರು ನೋಂದಣಿ ಮಾಡಿಕೊಳ್ಳಿ : ಆಸಕ್ತರು ಆನ್ಲೈನ್ ಮತ್ತು ನೇರವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರವೇಶ ಉಚಿತವಾಗಿದೆ. 

ಬಹುಮಾನ : ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಉತ್ತಮ ಪ್ರದರ್ಶನ ನೀಡಿದವರಿಗೆ ಸೈಕಲ್ ಸೇರಿದಂತೆ ಇತರ ಆಕರ್ಷಕ ಬಹುಮಾನ ನೀಡಲಾಗುವುದು. 

ನ. 17ರಂದು ಜೈನ್ ಹೆರಿಟೇಜ್ ಶಾಲೆಯಿಂದ ಬೆಳಗ್ಗೆ 6.45ಕ್ಕೆ ಪ್ರಾರಂಭಗೊಂಡು ಬೆಳಗ್ಗೆ 9ಕ್ಕೆ ಮುಕ್ತಾಯಗೊಳ್ಳಿದೆ. ಸಂಚಾರ ನಿಮಯಮಗಳು ಮತ್ತು ನಿಯಂತ್ರಣಕ್ಕಾಗಿ ನಗರದಲ್ಲಿ ಬ್ಯಾನರ್ಗಳನ್ನು ಅಳವಡಿಸಲಾಗುವುದು. 

ಜೈನ್ ಹೆರಿಟೇಜ್ ಶಾಲೆಯಿಂದ ಹೊರಡುವ ಸೈಕ್ಲೋಥಾನ್ ಹೊಟೇಲ್ ನೇಟಿವ್, ಕಾಂಗ್ರೆಸ್ ರಸ್ತೆ, ಗ್ಲೋಬ್ ಥೇಟರ್, ರಾಣಿ ಚನ್ನಮ್ಮ ವೃತ್ತದ ಮೂಲಕ ಮರಳಿ ಅದೇ ಮಾರ್ಗವಾಗಿ ಹೆರಿಟೇಜ್ ಶಾಲೆಯಲ್ಲಿ ಮುಕ್ತಾಯವಾಗುವುದು ಎಂದು ಪ್ರಕಟಣೆ ತಿಳಿಸಿದೆ.