ಇಂದು ಗುರು ಸಿದ್ದರಾಮೇಶ್ವರರ ಜಯಂತ್ಯೋತ್ಸವ

ಶಿಗ್ಗಾವಿ16 ಃ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಶಿಗ್ಗಾವಿ ಮತ್ತು ಶಿಗ್ಗಾವಿ ತಾಲೂಕಾ  ಭೋವಿ ಸಮಾಜ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ ಜಯಂತ್ಯೋತ್ಸವವನ್ನು ಇದೇ ದಿ 17 ರಂದು ಗುರುವಾರ ರಂದು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳ್ಳಗ್ಗೆ 9.30 ಕ್ಕೆ ಪಟ್ಟಣದ ವಡ್ಡರ ಓಣಿಯ ಶ್ರೀ ದುಗರ್ಾದೇವಿ ದೇವಸ್ಥಾನದಿಂದ ಸಂತೆ ಮೈಧಾನದ ವರೆಗೆ ಶ್ರೀ ಗುರು ಸಿದ್ದರಾಮೇಶ್ವರರ ಭಾವಚಿತ್ರದ ಭವ್ಯ ಮೇರವಣಿಗೆ ನಂತರ ಸಂತೆ ಮೈಧಾನದ ಬಯಲು ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.

        ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಗೂ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸುವರು, ಮೆರವಣಿಗೆಗೆ ಚಾಲನೆ ಹಾಗೂ ಅಧ್ಯಕ್ಷತೆಯನ್ನು ಶಾಸಕ ಬಸವರಾಜ ಬೊಮ್ಮಾಯಿ ನಿರ್ವಹಿಸುವರು, ಜೊತೆಗೆ ತಾಲೂಕಿನ ಜಿಪಂ, ತಾಪಂ, ಪುರಸಭೆ ಸೇರಿದಂತೆ ಜನಪ್ರತಿನಿಧಿಗಳು, ವಿವಿದ ಸಮಾಜಗಳ ಮುಖಂಡರು ವಿವಿದ ಗಣ್ಯರು ಭೋವಿ ಸಮಾಜದ ಮುಖಂಡರು ಭಾಗವಹಿಸುವರು ಎಂದು ತಾಲೂಕಾ ಆಡಳಿತ ಪ್ರಕಟಣೆಗೆ ತಿಳಿಸಿದೆ.