ಇಂದು ಸರಕಾರಿ ಸೌಲಭ್ಯಗಳು ಜನಹಿತಕ್ಕೆ ಹೆಚ್ಚು ಅನುಕೂಲ: ಜೆ.ಟಿ.ಪಾಟೀಲ್

Today, government facilities are more beneficial to the people: JT Patil

ಇಂದು ಸರಕಾರಿ ಸೌಲಭ್ಯಗಳು ಜನಹಿತಕ್ಕೆ ಹೆಚ್ಚು ಅನುಕೂಲ: ಜೆ.ಟಿ.ಪಾಟೀಲ್ 

ಬೀಳಗಿ 09: ಇಂದು ಸರಕಾರಿ ಸೌಲಭ್ಯಗಳು ಜನಹಿತಕ್ಕೆ ಹೆಚ್ಚು ಅನುಕೂಲವಾಗಿದ್ದು ಅದಕ್ಕಾಗಿ ಅವರ ಮಕ್ಕಳುಗಳನ್ನು ವಸತಿ ನಿಲಯಗಳಲ್ಲಿ ಇರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ. ಶಿಕ್ಷಣ ಸಲುವಾಗಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಇದರ ಸದುಪಯೋಗವಾಗಬೇಕು ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು. 

  ಪಟ್ಟಣದ ಕೊರ್ತಿ ಆರ್‌.ಸಿ ಹತ್ತಿರ ಬಿಸಿಎಂ ಮ್ಯಾಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಮಕ್ಕಳಿಗಾಗಿ ವಸತಿ ನಿಲಯಗಳ ಗುಣಮಟ್ಟದ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ‌್ಯಗಳು ಒದಗಿಸಿದ್ದಾರೆಟ್ಟೀ ಹಿಂದೆ ವಸತಿ ನಿಲಯಗಳಲ್ಲಿ ಕಡುಬಡುವರು ಮಾತ್ರ ಇರುತ್ತಿದ್ದರು. ಇಂದು ಉಳ್ಳವರಿಗೂ ಸಹ ಪೈಪೋಟಿ ಮಾಡಿ ವಸತಿ ನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳನ್ನು ಮೆರೀಟ್ ಮೇಲೆ ಆಯ್ಕೆ ಮಾಡಲು ಸೂಚಿಸಿದ್ದೇನೆ ಅದೇ ರೀತಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ವಸತಿ ನಿಲಯದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೋಳ್ಳಬೇಕು  ಎಂದರು.  

ಕುಂದರಗಿ ಚರಂತಿಮಠದ ವಿಶ್ವಾನಾಥ ಶಿವಾಚಾರ್ಯ ಶ್ರೀಗಳು, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ್ ಸೂಳಿಕೇರಿ, ಪಪಂ ಸದಸ್ಯ ರಾಜು ಬೋರ್ಜಿ, ಅಣವೀರಯ್ಯ ಪ್ಯಾಠಿಮಠ, ಉದಯ ರಜಪೂತ್, ಬಿ.ಪಿ.ಪಾಟೀಲ್, ಸಿದ್ದು ಸಾರಾವರಿ, ಕಾಸಿಂ ಅಲಿ ಗೋಠೆ, ಬಸವರಾಜ್ ಹಳ್ಳದಮನಿ, ತಾಲೂಕಾ ಬಿಸಿಎಂ ಅಧಿಕಾರಿ ಮೀನಾಕ್ಷಿ ಕೋಟಿ, ಗುರುನಾಥ ತಳವಾರ್, ಚಂದ್ರು ಮಾದರ್, ಕಸ್ತೂರಿ ಅರಳಿಕಟ್ಟಿ, ಗೋಪಾಲ್ ಅಡಲಗೇರಿ, ಯಂಕವ್ವ ಅಂಬಿಗೇರ, ಶಿಲ್ಪಾ ಯಡಹಳ್ಳಿ ಇತರರು ಇದ್ದರು.