ಲೋಕದರ್ಶನ ವರದಿ
ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಪ್ರತಿಯೊಬ್ಬರಿಗೂ ತುಂಬಾ ಅಗತ್ಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಮೀರ್ ಮಿರ್ಜಾನಕರ್ ಕಂಪ್ಯೂಟರ್ ಎಜ್ಯುಕೇಶನ್ ಆರಂಭಿಸಲು ತೆಗೆದುಕೊಂಡ ನಿರ್ಧರ್ ಅತ್ಯುತ್ತಮ ಹೆಜ್ಜೆಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಮಿರ್ಜಾನದ ತಾರೀಬಾಗಿಲ್ ರಸ್ತೆಯ ನರೇಶ ಪ್ರಭು ಬಿಲ್ಡಿಂಗ್ನಲ್ಲಿ ನೂತನವಾಗಿ ಮಣಿಪಾಲ ಇನ್ಸ್ಟಿಟ್ಯೂಟ್ ಆಪ್ ಕಂಪ್ಯುಟರ್ ಎಜ್ಯುಕೇಶನ್ ಇದರ ಉದ್ಘಾಟಣೆ ನೆರವೇರಿಸಿದ ಬಳಿಕ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಮಾತನಾಡಿ, ನಿವೃತ್ತ ಸೈನಿಕರು ಹಿಂದೂ ಗಳೇ ಆಗಿದ್ದರು ಜಾತಿ ಬೇದ ತೊರೆದು ದೇಶ ರಕ್ಷಣೆ ಸಲ್ಲಿಸಿದವರೇಂಬ ಉದಾತ ದೇಶ ಪ್ರೇಮ ತುಂಬಾ ಮೆಚ್ಚುಗೆಯಾಯಿತೆಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಪಾಂಡುರಂಗ ಎಂ ನಾಯ್ಕ, ಈಶ್ವರ ನಾಯ್ಕ, ಗಣೇಶ ಎಸ್ ನಾಯ್ಕ, ಮಂಜುನಾಥ ಪಟಗಾರ, ವೆಂಕಟ್ರಮಣ ಪಟಗಾರ, ಅಜ್ಜಮತ್ ಜಮಾಲ ಖಾನ್ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪಾರೇಸ್ಟರ್ ಎ ವಾಯ್ ಮಿರ್ಜನಕರ ಸ್ವಾಗತಿಸಿದರು.ನ್ನು ಶಾಸಕರು ಸನ್ಮಾನಿಸಿದರು.
ಬಿಜೆಪಿ ಮುಖಂಡ ಬಾಳಾ ಡಿಸೋಜಾ, ಗ್ರಾಪಂ ಸದಸ್ಯ ಗಣೇಶ ಅಂಬಿಗ, ಜಮಾತುಲ್ ಮುಸ್ಲಿಂ ಕಮಿಟ ಅದ್ಯಕ್ಷ ಇಬ್ರಾಹಿಂ ಶೇಖ್, ಅಬ್ದುಲ್ ಸಕುರ ಮಿಜರ್ಾನಕರ್, ಕಾಂಗ್ರೇಸ್ ಮುಖಂಡ ಮಹ್ಮದ ಹಾಸಂ ಆಗಾ, ಪಾತಿಮಾ ಬಿ ಮಿರ್ಜಾನಕರ್, ಪರ್ಹಾನಾಜಾ ಶಮೀರ ಮಿರ್ಜಾನಕರ್, ಯುಸುಪ್ ಸಾಬ್ ಮಿಜರ್ಾನಕರ್, ವಕಾರ ಹಸನ ಸೈಯದ್ ಪಣಜಿ, ಇಕ್ಬಾಲ್ ಚೌಟಿ ಶಿರಸಿ. ಅಕ್ಬರ ಡಿ ಶೇಖ ಯಲ್ಲಾಪುರ ಹಾಗೂ ಮೊದಲಾದವರು ಉಪಸ್ಥಿತರಿದ್ದರು.