ಸನಾತನ ಧರ್ಮದ ಬಗ್ಗೆ ತಿಳಿಯಬೇಕೆಂದರೆ, ವೇದಗಳ ಅಧ್ಯಯನ ಮಾಡಬೇಕು

ಸನಾತನ ಧರ್ಮದ ಬಗ್ಗೆ ತಿಳಿಯಬೇಕೆಂದರೆ, ವೇದಗಳ ಅಧ್ಯಯನ ಮಾಡಬೇಕು  To understand Sanatan Dharma, one must study the Vedas.


ಬಳ್ಳಾರಿ 02: ಬಹುತ್ವವೇ ಸನಾತನ ಧರ್ಮದ ತಳಹದಿ, ಬಹುತ್ವದ ಆಧಾರದ ಮೇಲೆ ಸನಾತನ ಭಾರತೀಯ ಸಂಸ್ಕೃತಿ ನಿಂತಿದೆ. ಇದನ್ನು ಅರಿಯದೆ ಬಹಳಷ್ಟು ಜನ ಕೇವಲ ಆಚರಣೆಗಳನ್ನೇ ಧರ್ಮ ಎಂದುಕೊಂಡಿದ್ದಾರೆ. ನಿಜವಾದ ಸನಾತನ ಧರ್ಮದ ಬಗ್ಗೆ ತಿಳಿಯಬೇಕೆಂದರೆ, ವೇದಗಳ ಅಧ್ಯಯನ ಮಾಡಬೇಕು. ಸನಾತನ ಧರ್ಮ ದೇವರ ಕೇಂದ್ರೀತ ಧರ್ಮವಲ್ಲ, ಮಾನವ ಕೇಂದ್ರಿತ ಧರ್ಮ, ಇದನ್ನೇ ಮುಂದುವರೆದು ಬಸವಣ್ಣನವರು ಎನ್ನ ಕಾಲೇ ಕಂಭ, ದೇಹವೇ ದೇಗುಲು ಎಂದರು, ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ನುಡಿದರು. ಅವರು ನಿನ್ನೆ ನಗರದ ಡಾಽಽ ರಾಜಕುಮಾರ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ವಿವೇಕ ಮಂಟಪದ ಸಂಯೋಜಕ ಪ್ರಭುದೇವ ಕಪ್ಪಗಲ್ಲು ಅತಿಥಿಗಳನ್ನು ಸ್ವಾಗತಿಸಿದರು. ಲೆಕ್ಕ ಪರಿಶೋಧಕ ಸಿ.ಎರಿ​‍್ರಸ್ವಾಮಿ ವಂದಿಸಿದರು. ಆರಂಭದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಎನ್‌.ಬಸವರಾಜ ರವರು ರಾಮಕೃಷ್ಣ ಪರಮಹಂಸರ, ವಿವೇಕಾನಂದರ, ಮಹಾಯೋಗಿ ವೇಮನ, ದಾಸರ ಪದಗಳು ಹಾಗೂ ಶರಣರ ವಚನಗಳನು ಸುಶ್ರಾವ್ಯವಾಗಿ ಹಾಡಿ ನೆರದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಹಾರ್ಮೋನಿಯಂನಲ್ಲಿ ತಿಪ್ಪೇಸ್ವಾಮಿ ಮುದ್ದಟನೂರು, ಜಿ.ಸುಧಾಕರ ತಬಲಾ ಸಾತ್ ನೀಡಿದರು.