ತಾಯಿ-ಶಿಶುವಿನ ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ

ಧಾರವಾಡ 22: ತಾಯಂದಿರು ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಅನುಸರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್ಗಳನ್ನು ವಿತರಿಸಲಾಯಿತು. 

ಜಿಲ್ಲಾಧಿಕಾರಿ ದೀಪಾ ಚೋಳನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಮ್ ದೊಡ್ಡಮನಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪುಷ್ಪಾ ಎಚ್.ಆರ್ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ ಅವರು  ಡಿಸೆಂಬರ 20 ರಂದು ಚಾಲನೆ ನೀಡಿದರು.       

ಕಂಪ್ಯೂಟರ್ ಟ್ಯಾಬ್ಗಳಿಗೆ ಇಂಟರ್ನೆಟ್ ಅವಶ್ಯಕತೆ ಇರುವುದರಿಂದ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅಂತಜರ್ಾಲ ಸೌಲಭ್ಯ ಒದಗಿಸುತ್ತಿರುವ ಸಂಸ್ಥೆಗಳ ಸಿಮ್ ಕಾರ್ಡಗಳನ್ನು ಖರೀದಿಸಲು ಅನುಮತಿ ನೀಡಿದೆ. ಇದಕ್ಕೆ ಬೇಕಿರುವ ಅನುದಾನವನ್ನು 2018-19 ಸಾಲಿನ ಆರ್.ಓ.ಪಿ ಲೆಕ್ಕಶಿಷರ್ಿಕೆಯಡಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮತ್ತು ಆರ್.ಸಿ.ಎಚ್ ಪೋರ್ಟಲ್ನಲ್ಲಿ ತಾಯಿ ಮತ್ತು ಶಿಶುವಿನ ದಾಖಲಾತಿ ಮತ್ತು ಸೇವಾ ವರದಿಯನ್ನು ಸರಿಯಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. 

ಟ್ಯಾಬ್ಗಳನ್ನು ಉಪಯೋಗಿಸುವ ವಿಧಾನ, ಅಡ್ಡಿ, ತೊಡಕುಗಳ ನಿವಾರಣೆ ತಿಳಿಸಲು ಒಂದು ದಿನದ ತರಬೇತಿಯನ್ನು ತಾಲೂಕಾವಾರು ಆಯೋಜಿಸಲಾಗುವುದು ಎಂದು ಹೇಳಿದರು.