ಮಹಾತ್ಮರಾಗಿ ಕಾಣಲು ಅಹಂಕಾರ, ದುರಂಹಕಾರ ಕಡಿಮೆಯಾಗಬೇಕು: ನಿಜಗುಣ ಶ್ರೀಗಳು

To be seen as a great soul, one must reduce arrogance and arrogance: Nijaguna Sri

ಮಹಾತ್ಮರಾಗಿ ಕಾಣಲು ಅಹಂಕಾರ, ದುರಂಹಕಾರ ಕಡಿಮೆಯಾಗಬೇಕು: ನಿಜಗುಣ ಶ್ರೀಗಳು  

  ಶಿಗ್ಗಾವಿ  12: ಮಹಾತ್ಮರಾಗಿ ಕಾಣಲು ಅಹಂಕಾರ ಮತ್ತು ನಾನು ಎಂಬ ದುರಂಹಕಾರ ಕಡಿಮೆಯಾಗಬೇಕು ಅಂದಾಗ ಮಾತ್ರ ಮಹಾತ್ಮರಾಗಲು ಸಾಧ್ಯ ಎಂದು ಹತ್ತಿಮತ್ತೂರ ವಿರಕ್ತಮಠ ನಿಜಗುಣ ಮಹಾಸ್ವಾಮಿಗಳು ಹೇಳಿದರು.    ಪಟ್ಟಣದ ವಿರಕ್ತಮಠದಲ್ಲಿ 32 ನೇ ಶರಣ ಸಂಸ್ಕೃತಿ ಉತ್ಸವ-2025 ಧರ್ಮಸಭೆಯ ಸಮಾರೋಪ ಸಮಾರಂಭದದಿವ್ಯ ಸಾನಿಧ್ಯವಹಿಸಿ ಆರ್ಶಿವದಿಸಿದ ಅವರು ಕಾಯಾ, ವಾಚಾ, ಮನಸಾ ವಾಕ್ಯದ ನಡೆ ನುಡಿಯಲ್ಲಿ ಶುದ್ದತೆಯಿರಬೇಕು ಅಂದಾಗ ಮಾತ್ರ ಶರಣರು, ಸಂತರಿಗೆ ಪ್ರಾಮುಖ್ಯತೆ ದೊರೆಯುತ್ತದೆ ಅಲ್ಲದೇ ಮಠಗಳು ಮೊದಲಿಗೆ ಗುರುಕುಲಗಳಾಗಿದ್ದವು, ವ್ಯಕ್ತಿಯಲ್ಲಿರುವ ಒಳ್ಳೆಯ ನಡುವಳಿಕೆ ಅವನನ್ನು ದೊಡ್ಡವನಾಗಿ ಮಾಡುತ್ತದೆ. ವ್ಯಕ್ತಿಗೆ ಆದರ್ಶ ವ್ಯಕ್ತಿಯಾಗಿ ಗುರು ಅಥವಾ ತಂದೆ ತಾಯಿಯಾಗಿರಬೇಕು ಹೊರತು ಚಲನಚಿತ್ರ ನಟರಲ್ಲ ಎಂದರು.   ಪಾವನ ಸಾನಿಧ್ಯವಹಿಸಿ ಹೊಳೆಇಟಗಿ ವಿರಕ್ತಮಠ ಮಡಿವಾಳ ಮಹಾಸ್ವಾಮಿಗಳು ಆರ್ಶಿವದಿಸಿ ನಮ್ಮ ದೇಶದ ಸಂಸ್ಕೃತಿಯಲ್ಲಿ ಪೂಜ್ಯತೆ ಮತ್ತು ಗೌರವದಭಾವವಿದೆ ಅದಕ್ಕೆ ಇಂತಹ ಶರಣ ಸಂಸ್ಕೃತಿ ಉತ್ಸವ ಕಾರಣವಾಗಿದೆ ಎಂದು ಹೊಳೆಇಟಗಿ ವಿರಕ್ತಮಠ ಮಡಿವಾಳ ಮಹಾಸ್ವಾಮಿಗಳು ಹೇಳಿದರು. ಹಾವೇರಿ ಹೊಸಮಠ ಬಸವಶಾಂತಲಿಂಗ ಮಹಾಸ್ವಾಮಿಗಳು ಆರ್ಶಿವದಿಸಿದವರು ಮಠಗಳು ಜನಪರ ಮತ್ತು ಜೀವಪರವಾಗಿ ಕಾರ್ಯನಿರ್ವಹಿಸುತ್ತವೆ. ಶ್ರೇಷ್ಠ ಸಾಹಿತ್ಯ ವಚನ ಸಾಹಿತ್ಯ, ಸ್ಮರಣೆ ಪ್ರತಿಯೊಬ್ಬರಿಗೆ ಪ್ರೇರಣೆಯಾಗಲಿ ಲಿಂಗಾಂಗ ಸಾಮರಸ್ಯ ಪಡೆದವರು ಐಕ್ಯತೆ ಸ್ಥಿತಿಯಲ್ಲಿ ಕಾಣುತ್ತಾರೆ. ಶಾಂತ ಸಮಾಧಾನ ಸಿಗುವ ಲಿಂಗ ಇಷ್ಟಲಿಂಗ ಎಂದರು.್ಷ  

ಭಾಕ್ಸ ಸುದ್ದಿ : 32 ವರ್ಷದಿಂದ ಈ ಶರಣ ಸಂಸ್ಕೃತಿ ಉತ್ಸವ ಯಶಸ್ವಿಯಾಗಲು ಕ್ಷೇತ್ರದ ಸಧ್ಬಕ್ತರೇ ಕಾರಣ.ಸಂಗನಬಸವ ಶ್ರೀಗಳು ವಿರಕ್ತಮಠ.್ಷ್ಷ ಸವ ದೇವರು, ಕಲ್ಲೂರ ಮಹಾಂತೇಶ ಶಾಸ್ತ್ರೀಗಳು ಪ್ರವಚನ ಮಾಡಿದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಬಸವರಾಜ ಹೂಗಾರ, ಶಿದ್ದಲಿಂಗಪ್ಪ ನರೇಗಲ್, ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಿದರು.    ಕೋಟ್ರೇಶ ಮಾಸ್ತರ ಬೆಳಗಲಿ, ಪಕ್ಕಿರೇಶ ಕೊಂಡಾಯಿ, ಬಸವರಾಜ ಶಿಗ್ಗಾವಿ, ಮಂಜುನಾಥ ಮಣ್ಣಣ್ಣವರ, ನಾಗಪ್ಪ ಬೆಂತೂರ, ರಮೇಶ ಹರಿಜನ, ಶರೀಫ ಮಾಕಪ್ಪನವರ, ಬಸಲಿಂಗಪ್ಪ ನರಗುಂದ, ಶಂಭು ಕೇರಿ, ಸೇರಿದಂತೆ ವಿರಕ್ತಮಠ ಸಮಿತಿ ಸದಸ್ಯರು ಇದ್ದರು. ಪ್ರೋ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.