ಗದಗ 29: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯದ ಜೊತೆಗೆ ಹೆಚ್ಚು ಕ್ರಿಯಾಶೀಲರಾಗಿರುವದಕ್ಕೆ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಗದಗ ಜಿಲ್ಲಾ ಪೊಲೀಸ್ ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸತತ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತ್ತದೆ. ಇತ್ತೀಚಿನ ಒತ್ತಡದ ಈ ದಿನಮಾನಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವದು ಒಂದು ಸವಾಲಿನ ಸಂಗತಿಯಾಗಿದ್ದು ಈ ಒತ್ತಡದ ನಡುವೆ ಕ್ರೀಡೆ ಹಾಗೂ ದೈಹಿಕ ವ್ಯಾಯಾಮಗಳಿಗೆ ಪ್ರತಿಯೊಬ್ಬರು ಸಮಯವಾಕಾಶ ಕಲ್ಪಿಸಿಕೊಂಡು ಸಧೃಡ ಹಾಗೂ ನೆಮ್ಮದಿಯುತ ಆರೋಗ್ಯವನ್ನು ಪಡೆದುಕೊಳ್ಳಲು ಸಲಹೇ ನೀಡಿದರು. ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಸಕ್ರೀಯವಾಗಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಯಾಗಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೇ ನೀಡಿದರು.
ಇದಕ್ಕೂ ಮುನ್ನ ಡಿಎಆರ್ ಗದಗ, ಗದಗ ಶಹರ, ಬೆಟಗೇರಿ, ಗದಗ ಗ್ರಾಮೀಣ, ರೋಣ, ಶಿರಹಟ್ಟಿ, ನರಗುಂದ ಹಾಗೂ ಮುಂಡರಗಿ ಘಟಕದ ಏಳು ತಂಡಗಳಿಂದ ಶಿಸ್ತಿನ ಪಥ ಸಂಚಲನ ಜರುಗಿತು. ಆರ್ಎಸ್ಐ ಗದಗ ವಿಭಾಗದ ಡಿ.ಎ.ಕಂಕಣವಾಡಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಸ್ವಾಗತಿಸಿದರು. ಡಿ.ಸಿ.ಆರ್.ಬಿ ಡಿ.ಎಸ್.ಪಿ. ಈಗನಗೌಡರ ವಂದಿಸಿದರು. ಎಂ.ಟಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
ಗದಗ ಡಿ.ವಾಯ್ಎಸ್.ಪಿ ವಿಜಯಕುಮಾರ, ನರಗುಂದ ಡಿ.ವಾಯ್ಎಸ್.ಪಿ ಎಸ್.ಎ. ಪಾಟೀಲ, ಪೋಲಿಸ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.