ಲೋಕದರ್ಶನ ವರದಿ
ಗದಗ11: ದಕ್ಷ ಆಡಳಿತಗಾರ ಚಾಣಾಕ್ಷ ರಾಜನೀತಿ ತಜ್ಙ, ರಣಕೇಸರಿ, ಬಹುಬಾಷಾ ಪಂಡಿತ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತ ಮಹಾಪುರುಷ ಟಿಪ್ಪು ಸುಲ್ತಾನ ಎಂದು ಡಿ.ಎಸ್.ನಾಯಕ ನುಡಿದರು.
ಉಪನ್ಯಾಸಕರಾದ ಇವರು ಎಂದು ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವು ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಮೈಸೂರಿನ ಹುಲಿ ಎಂದೇ ಪ್ರಖ್ಯಾತರಾಗಿದ್ದ ಟಿಪ್ಪುಸುಲ್ತಾನ ಜಯಂತಿಯ ಕಾರ್ಯಕ್ರಮದಲ್ಲಿ ಸುಧೀರ್ಘವಾದ ಉಪನ್ಯಾಸ ನೀಡುತ್ತಾ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಇವರ ಜೀವನವೇ ಒಂದು ಕಾವ್ಯ. ಸ್ವಾತಂತ್ರ್ಯಕ್ಕಾಗಿ ತಂದೆ ಮಕ್ಕಳಿಬ್ಬರು ಪ್ರಾಣತ್ಯಾಗ ಮಾಡಿದ ಘಟನೆ ದೇಶದ ಇತಿಹಾಸದಲ್ಲಿ ಮತ್ತೆಲ್ಲೂ ಕಾಣುವುದಿಲ್ಲವೆಂದು ಮಕ್ಕಳಿಗೆ ಮನವರಿಕೆಯಾಗುವಂತೆ ಮಾತನಾಡಿದರು.
ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕುಮಾರಿ ತಾಹೇರಾ ದಂಡೀನ ಟಿಪ್ಪುಸುಲ್ತಾನರ ಕುರಿತು ಭಾಷಣ ಮಾಡಿದಳು. ಮುಖ್ಯಾಧ್ಯಾಪಕರಾದ ಕೆ.ಎಂ.ಮೂಲಿಮನಿ ಇವರು ಸಾಂದಭರ್ಿಕವಾಗಿ ಮಾತನಾಡಿದರು. ಪ್ರಭಾರ ಪ್ರಾಚಾರ್ಯರಾದ ಎ.ಎ.ಹದ್ಲಿ, ಸಮಸ್ತ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿವೃಂದ ಉಪಸ್ಥಿತರಿದ್ದರು.