ವಿಜಯಪುರ 05: ಎಲ್ಲ ಮಹನೀಯರ ಜಯಂತಿಯ ಮೆರವಣಿಗೆಯ ಹಾಗೆ ಹಜರತ್ ಟಿಪ್ಪುಸುಲ್ತಾರ ಜಯಂತಿಯ ಮೆರವಣಿಗೆ ನಡೆಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಮೀದ ಮುಶ್ರೀಫ ಮಾತನಾಡಿ, ಇದೇ ನವ್ಹೆಂಬರ್ 10 ರಂದು ವಿಜಯಪುರ ನಗರದಲ್ಲಿ ಹಜರತ್ ಟಿಪ್ಪು ಸುಲ್ತಾನರ ಜಯಂತಿಯೂ ಸಕರ್ಾರದಿಂದ ಆಚರಣೆ ಮಾಡುತ್ತಿರುವುದು ನಾವೆಲ್ಲರೂ ಸ್ವಾಗತಿಸುತ್ತೇವೆ. ಎಲ್ಲ ಮಹನೀಯರ ಜಯಂತಿಯ ದಿನದಂದು ಮೆರವಣಿಗೆ ನಡೆಸುವ ಹಾಗೆಯೇ ಹಜರತ್ ಟಿಪ್ಪುಸುಲ್ತಾನರ ಜಯಂತಿಯ ದಿನದಂದು ಶಾಂತಿಯುತವಾಗಿ ಮೆರವಣಿಗೆಯನ್ನು ಜಿಲ್ಲಾಡಳಿತದಿಂದ ನಡೆಸಬೇಕೆಂದು ಎಂದು ಹೇಳಿದರು.
ಎಂ.ಸಿ.ಮುಲ್ಲಾ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದ ಶೂರ, ವೀರ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಟಿಪ್ಪು ಅವರು ಎಲ್ಲ ಧಮರ್ೀಯರಿಯೊಂದಿಗೆ ಸೌಹಾರ್ದಯುತವಾಗಿ ಬಾಳಿದವರು. ನೂರು ವರ್ಷ ಹೇಡಿಯಾಗಿ ಬಾಳುವುದಕ್ಕಿಂತ ಒಂದೇ ದಿನ ಶೂರರಾಗಿ ಬದುಕಬೇಕು ಎನ್ನುವ ಸಂದೇಶವನ್ನೇ ಸಾರಿದ್ದಾರೆ. ಅದರಂತೆ ಇಂದಿನ ಶ್ರೀರಂಗ ಪಟ್ಟಣಕ್ಕೆ ಟಿಪ್ಪು ಅವರು ನೀಡಿದ ಕೊಡುಗೆ ಅನನ್ಯವಾಗಿದೆ.
ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ರಜಾಕ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಕೆ.ಎಸ್.ಸಾಂಗ್ಲೀಕರ, ಪ್ರೊ.ಅಸ್ಲಂ ಮುಜಾವರ, ಫಯಾಜ ಕಲಾದಗಿ, ಇಫರ್ಾನ್ ಶೇಖ, ಅಲ್ಲಾಭಕ್ಷ ಉಕ್ಕಲಿ, ಅಕ್ರಂ ಮಾಶ್ಯಾಳಕರ, ಇಸಾಕ ಗುಲ್ಬಗರ್ಾ, ರಶೀದ .ಮಾಶ್ಯಾಳಕರ, ಪಿದಾ ಕಲಾದಗಿ, ಕಾಲಿದ ಹುಸೇನ, ಮತೀನಕುಮಾರ, ಅಬೂಬಕರ ಅಂಬರಕಾನೆ, ಎಂ.ಎಂ.ಬಡೇಗರ, ಅಲ್ಲಾಭಕ್ಷ ಮುಲ್ಲಾ, ಚೇತನ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.