ಲೋಕದರ್ಶನ ವರದಿ
ಕೊಪ್ಪಳ 11: ಭರತಖಂಡದ ಹೆಮ್ಮೆಯ ಪುತ್ರ ಟಿಪ್ಪು ಸುಲ್ತಾನ್. ಟಿಪ್ಪು ಸುಲ್ತಾನ್ ದ್ರಾವಿಡ ದೇಶದ ಹೊಳೆಯುವ ವಜ್ರ ಬ್ರಿಟಿಷರ ಕನಸಿನಲ್ಲಿಯೂ ಬೆಚ್ಚುಬಿಳುವಂತೆ ಕಾಡಿದ ಅಪ್ರತಿಮ ದೊರೆ ಟಿಪ್ಪು ಸುಲ್ತಾನ್ ಎಂದು ಅಭಿಪ್ರಾಯಪಟ್ಟರು.
ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುವಕರ ನೆನೆದರೆ ಸಾಕು ಅವರ ಮನಸ್ಸಿನಲಿ ಧೈರ್ಯವನ್ನು ತುಂಬುವ ದೊರೆ ಟಿಪ್ಪು. ಇತಂಹ ಮಹಾನ್ ವ್ಯಕ್ತಿಯನ್ನು ನೆನಸಿಕೊಳ್ಳದಿದ್ರೆ ಅದು ನಮ್ಮ ತಾಯಿ ನಾಡಿಗೆ ಮಾಡಿದ ಅಪಮಾನ ಎಂದು ಅಪರ ಪೊಲೀಸ್ ಆಯುಕ್ತ ಎಂ. ನಂಜುಡಸ್ವಾಮಿ ತಿಳಿಸಿದರು.
1750 ನ. 10ರಂದು ಹುಟ್ಟಿದ ಟಿಪ್ಪು ಸುಲ್ತಾನ್, ತನ್ನ ಆರಂಭಿಕ ಶಿಕ್ಷಣ ಪಡೆದ ಗುರುಗಳನ್ನು ನೋಡಿದರೆ ಸಾಕು ಅವನಲ್ಲಿ ಯಾವುದೇ ಧರ್ಮದ ಬಗ್ಗೆಯೂ ವಿರೋಧ ಇಲ್ಲ ಅಂತಾ ತಿಳಿಯುತ್ತದೆ, ಗಾಜಿಯಖಾನ, ಗೊವರ್ಧನ ಪಂಡಿತ ಎಂಬುವರಿಂದ ಎಲ್ಲಾ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ. ಸಾಮಾನ್ಯ ಜನರಲ್ಲಿ ಸಾಮಾನ್ಯವಾಗಿ ಬದುಕಿದ ಟಿಪ್ಪು ಜನಸಾಮಾನ್ಯರಲ್ಲಿ ಬೆರೆತು ಬದುಕಿದ್ದಾರೆ, ಅಪ್ಪಟ ಕನ್ನಡಿಗ ಹಾಗೂ ಅನೇಕ ಭಾಷೆಗಳಲ್ಲಿ ಪರಿಣಿತ ಹೊಂದಿದ್ಸನು. ನೆರೆಹೊರೆಯವರ ಜೊತೆ ಉತ್ತಮ ಸಂಬಂಧ ಹೊಂದಿದ್ದವರು ಟಿಪ್ಪು. ಮೆಕ್ಕಾ ಪಟ್ಟಣದಿಂದ ವಲಸೆ ಬಂದವರು. ಮೆಕ್ಕಾದಿಂದ ಪಂಜಾಬಗೆ ಬಂದರು. ಮಹ್ಮದ್ ಪೈಗಂಬರ್ ಕುಟುಂಬಕ್ಕೆ ಸೇರಿದ್ದ ಕುಟುಂಬದವರು. ಬ್ರಿಟಿಷರ ಕನಸಿನಲ್ಲಿ ಕಾಡಿದ ಕದನಕಲಿ. ಟಿಪ್ಪು ಗೋವುಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದನು. ಅವನು ಪಶು ಸಂಗೋಪನೆ ಇಲಾಖೆಗೆ ಅಮೃತ ಮಹಲ್ ಸ್ಥಾಪನೆ ಮಾಡಿದ್ದ. ಗೋ ಮಾತೆಯ ರಕ್ಷಕ ಟಿಪ್ಪು. ಹಾಸನ, ಮೈಸೂರ, ಕೊಡಗು, ಚಾಮರಾಜನಗರದಲ್ಲಿ ಹರಿಯುವ ನೀರಿಗೆ ಪ್ರಾಮುಖ್ಯತೆ ನೀಡಿದವ. ಇಸ್ಲಾಂ ಧಮರ್ಿಯರಿಗೆ ಹಾಗೂ ಸಾಮಾನ್ಯ ಜನರಿಗೆ ಕಂದಾಯವನ್ನು ಏರಿರಲಿಲ್ಲ. ಟಿಪ್ಪು ಸುಲ್ತಾನ್ ರನ್ನು ಯಾಕೆ ವಿರೋಧ ಮಾಡುತ್ತಿದ್ದರೆಂದರೆ ಅವನು ಮಾಡಿದ ಯುದ್ದಗಳಿಂದಲ್ಲ. ಅಂದು ಅವನು ಜಾರಿಗೆ ತಂದ ಭೂ ಸುಧಾರಣೆ ಹಿನ್ನೆಲೆಯಲ್ಲಿ ಟಿಪ್ಪುವನ್ನು ಇಂದು ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಟಿಪ್ಪು ಕಾಲಹರಣವಾದ ನಂತರ ಮಹಿಳೆಯರ ಮಾನಭಂಗ ಸೇರಿದಂತೆ ಅನೇಕ ಅಪರಣಗಳನ್ನು ಲೂಟಿ ಮಾಡಿದ್ದರು. ಟಿಪ್ಪು ಸೋಲಿಗೆ ಕಾರಣವಾದ ದಿವಾನ ಪೂರ್ಣಯ್ಯ ಇದನ್ನು ತಡೆಯಲಿಲ್ಲ. ಒಂದು ವೇಳೆ ಟಿಪ್ಪು ಕಾಲಹತನಾಗದಿದ್ದರೆ ಬ್ರಿಟಿಷರನ್ನು ಅಂದೆ ದೇಶದಿಂದ ಓಡಿಸಬಹುದಾಗಿತ್ತು. ಮೀರ್ ಸಾಧಿಕ್ ಕೂಡಾ ವೈರಿಯಾಗಿದ್ಸನು. ಟಿಪ್ಪು ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ನೀಡಿದವ. ಶ್ರೀರಂಗನಾಥನ ದೇವಸ್ಥಾನ ಅವನ ಅಚ್ಚುಮೆಚ್ಚಿನ ದೇವಾಲಯ ಹಿಂದು ದೇವಾಲಯಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಸಾಹಿತಿಗಳಿಗೆ, ಜಾನಪದರಿಗೆ, ಕಾದಂಬರಿಕಾರರಿಗೆ ಮೂಲಕಥಾ ವಸ್ತು ಟಿಪ್ಪು. ಆತನ ವಿರುದ್ಧ 1769ರಲ್ಲಿ ಒಳ್ಳೆಯ ನಾಟಕ ಬಂತು. ಟಿಪ್ಪುವನ್ನು ನೆನಸಿಕೊಳ್ಳುವಂತ ಸಮಯವಾಗಿದೆ ಎಂದು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ ದೇಶದ ಒಬ್ಬ ಅಪ್ರತಿಮ ಹೋರಾಟಗಾರನ ಬಗ್ಗೆ ತಿಳಿದು ಕೊಳ್ಳದೇ ಸಮಾಜದಲ್ಲಿ ಕೆಲ ಕೋಮುವಾದಿಗಳು ಜಾತಿ ಎಂಬ ವಿಷಬೀಜವನ್ನು ಸಮಾಜದಲ್ಲಿ ಬೀತ್ತುತಿದ್ದಾರೆ. ಅದು ಅವರು ಕೋಮುಗಲಭೆ ಕಡೇಗೆ ಜನರ ಮನಸ್ಸನ್ನು ಸೆಳೆಯುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಟಿಪ್ಪು ಜಯಂತಿಯ ಆಚರಣೆಗೆ ನಿಧರ್ಾರ ಮಾಡಿದರು. ಈ ಕಾರ್ಯಕ್ರಮದ ರೂವಾರಿ ಅವರು ಎಂದು ಹೇಳದರು ತಪ್ಪೇನಿಲ್ಲ, ರಾಜ್ಯದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಅಭಿಮಾನ ಕಳಕಳಿ ಹೊಂದಿರುವ ಹಾಗೂ ಸಮುದಾಯವನ್ನು ಆಥರ್ಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಸಿದ್ದಾರಾಮಯ್ಯ ಹೆಚ್ಚಿನ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ, ನಗರದಲಿ 4 ಕೋಟಿ ವೆಚ್ಚದಲ್ಲಿ ಶಾದಿ ಮಹಲ್ ನಿಮರ್ಾಣ, ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಠಿಯಿಂದ ಅಲ್ಪಸಂಖ್ಯಾತರ ವಸತಿ ಶಾಲೆ, ಶಾದಿಭಾಗ್ಯ, ಮುಂತಾದ ಯೋಜನೆಗಳನ್ನು ನೀಡಿದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಸಮುದಾಯದ ಜನರ ಕಣ್ಣೀರು ಹೊರೆಸುವ ಕೆಲಸವನ್ನು ಮಾಡಿ, ಹಿಂದುಳಿದ ವರ್ಗದ ಜನರು ನೆಮ್ಮದಿಯಿಂದ ಬದುಕುವ ಹಾಗೇ ಮಾಡಿದ್ದಾರೆ ಎಂದು ಹೇಳೀದರು.
ಅಲ್ಲದೇ ಪ್ರಸ್ತುತ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಆಡಳಿತವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಸದಸ್ಯ ಅಮ್ಜದ್ ಪಟೇಲ್, ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವುದಕ್ಕೆ ಪ್ರಮುಖ ಕಾರಣ ಮಾಜಿ ಸಿಎಂ ಸಿದ್ದಾರಮಯ್ಯನವರ ಇದು ನಮ್ಮ ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಎಂದರು. ಹೈ-ಕ ಭಾಗದಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಉದರ್ು ಶಿಕ್ಷಣವನ್ನು ಜಾರಿಗೊಳಿಸಲು ಸರಕಾರ ಮುಂದಾಗಬೇಕು ಹಾಗೂ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಎಸ್ಪಿ ರೇಣುಕಾ ಕೆ. ಸುಕುಮಾರ್, ತಹಶಿಲ್ದಾರ ಗಂಗಪ್ಪ ಮಜ್ಗಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಗುರುರಾಜ ಹಲಗೇರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ, ಎಂ.ಪಾಷ ಕಾಟನ್, ಎಂ.ಲಾಯಖ್ ಅಲಿ, ಮಹ್ಮದ್ ಹುಸೇನ್ ಮಂಡಲಗೇರಿ, ಗೌಸು ಸಾಬ್, ಅಜೀಂ ಅಖ್ತರ್, ವಿರೂಪಾಕ್ಷಪ್ಪ ಮೋರನಾಳ, ಅಜರ್ುನ್ ಷಾ ಕಾಟ್ವಾ, ಅಕ್ಬರ್ ಪಾಷ ಪಲ್ಟನ್, ಮಹೆಬೂಬ್ ಸಾಬ್ ಮಚ್ಚಿ, ಡಾ. ಲಕ್ಷ್ಮಣ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.