ಧಾರವಾಡ: ಹಜರತ್ ಟಿಪ್ಪು ಸುಲ್ತಾನರು, ಜಾತಿ-ಧರ್ಮ ಮೀರಿ ಬೆಳಿದ ವ್ಯಕ್ತಿ. ಸರ್ವ ಜನಾಂಗದಿಂದಲೂ ಗೌರವಿಸಲ್ಪಡುವ ಟಿಪ್ಪು ಸುಲ್ತಾನರು ಕನ್ನಡ ನಾಡಿನ ಆಸ್ತಿಯಾಗಿದ್ದು, ಸೂರ್ಯಚಂದ್ರರು ಇರುವವರೆಗೂ ಅವರು ಅಜರಾಮರ ಎಂದು ಶಾಸಕ ಸಿ.ಎಸ್.ಶಿವಳ್ಳಿ ಹೇಳಿದರು.
ಅವರು ಇಂದು ನಗರದ ಪಾಟೀಲ ಪುಟ್ಟಪ್ಪ ಸಭಾಭವನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ, "ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ-2018"ನ್ನು ಸಸಿಗೆ ನೀರೆರೆವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಕನರ್ಾಟಕದಲ್ಲಿ ಮೊದಲಿನಿಂದಲೂ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ಸರಕಾರಿ ಕಾರ್ಯಕ್ರಮವಾಗಿ ಜಯಂತಿಯನ್ನು ಆಚರಿಸಲು ಆರಂಭಿಸಿದಾಗಿನಿಂದ ಕೆಲವರು ಅನವಶ್ಯಕವಾಗಿ ವಿರೋಧಿಸುತ್ತಿದ್ದಾರೆ. ಟಿಪ್ಪು ಮತಾಂದನೆಂದು, ಜಾತಿವಾದಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಟಿಪ್ಪು ತನ್ನ ಆಸ್ಥಾನದಲ್ಲಿ ದಿವಾನ್ ಪೂರ್ಣಯ್ಯರಿಗೆ ಉನ್ನತ ಹುದ್ದೆ ಕೊಟ್ಟಿದ್ದು, ಶೃಂಗೇರಿ ದೇವಸ್ಥಾನಗಳಿಗೆ ಉಂಬಳಿ ನೀಡಿ ಗೌರವ ಸಲ್ಲಿಸಿದ್ದು, ಶ್ರೀರಂಗನಾಥನಿಗೆ ನಿತ್ಯ ಭಕ್ತಿ ಪೂರ್ವಕ ನಮಿಸಿ, ಜೀಣರ್ೋದ್ದಾರಕ್ಕೆ ಶ್ರಮಿಸಿದ್ದು ಅವನ ಜಾತ್ಯಾತೀತ ನಿಲುವಿಗೆ ಮತ್ತು ಸರ್ವರಲ್ಲಿ ಸಮಾನತೆ ಕಂಡಿದ್ದಕ್ಕೆ ಸಾಕ್ಷಿಯಾಗಿದೆ.
ಟಿಪ್ಪು ಸುಲ್ತಾನ ಬ್ರೀಟಿಷ ವಿರೋಧಿಯಾಗಿದ್ದು, ಸ್ವಾತಂತ್ರ್ಯದ ಕನಸು ಕಂಡ ಪ್ರಥಮ ಸೇನಾನಿ, ಅಪ್ರತಿಮ ಧೀರನಾಗಿದ್ದನು. ಶೂರರ ಸಾಲಿನಲ್ಲಿ ಟಿಪ್ಪು ಸುಲ್ತಾನ ನಿಲ್ಲುತ್ತಾರೆ ಎಂದು ಶಾಸಕ ಶಿವಳ್ಳಿ ಹೇಳಿದರು.
ಟಿಪ್ಪು ಸುಲ್ತಾನ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿನಾಯಕ ಮುಂತಾದ ಮಹಾನ ಚೇತನಗಳು ನಮ್ಮ ರಾಷ್ಟ್ರದ ಆಸ್ತಿ, ಹೆಮ್ಮೆ-ಸ್ವಾಭಿಮಾನಗಳ ಸಂಕೇತವಾಗಿದ್ದಾರೆ. ಟಿಪ್ಪು ಸುಲ್ತಾನರು ಎಂದೂ ಹಿಂದೂ ವಿರೋಧಿ ಆಗಿರಲಿಲ್ಲ. ಅಪಪ್ರಚಾರ ಮಾಡಲಾಗುತ್ತಿದೆ. ಇತಿಹಾಸ, ಸ್ಮಾರಕ, ದಾಖಲೆ ಕುರುಹುಗಳನ್ನು ಅವಲೋಕಿಸಿದಾಗ ಎಲ್ಲವನ್ನು ಮೀರಿದ ಮತ್ತು ಸರ್ವರು ಒಪ್ಪಿತ ವ್ಯಕ್ತಿತ್ವವನ್ನು ಟಿಪ್ಪು ಸುಲ್ತಾನರು ಹೊಂದಿರುವುದು ನಮಗೆ ಮನವರಿಕೆ ಆಗುತ್ತದೆ.
ಇಂದಿನ ಯುವಕರು ಟಿಪ್ಪು, ರಾಯಣ್ಣ, ಮದಕರಿನಾಯಕ ರಂತ ಶೂರರನ್ನು ಮಾದರಿಯಾಗಿ ಸ್ವೀಕರಿಸಿ, ಅವರ ತತ್ವ, ಸಿದ್ದಾಂತ, ಸಾಮಾಜಿಕ ಬದ್ಧತೆ ಮತ್ತು ಅವರ ಜೀವನ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳಬೇಕು. ಟಿಪ್ಪು ಸುಲ್ತಾನರು ಕೈಗೊಂಡ ಇಲಾಖೆ ರಚನೆ, ಆಡಳಿತ ಸುಧಾರಣೆ ಕ್ರಮಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಶಿವಳ್ಳಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ, ಶಾಸಕ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ಇಂದು ಇತಿಹಾಸ ತಿರುಚುವ ಕಾರ್ಯ ನಡೆಯುತ್ತಿದೆ; ಇದು ವಿಷಾದನೀಯ. ಟಿಪ್ಪು ಸುಲ್ತಾನ ಒರ್ವ ಶೂರ, ಧೀರ ನಾಯಕ. ಜಾತಿ, ಧರ್ಮದ ಹೆಸರಲ್ಲಿ ಟಿಪ್ಪು ಅಂತಹ ಪರಮ ದೇಶಭಕ್ತನನ್ನು ಗುರುತಿಸಿಬಾರದು. ಇದನ್ನು ಮೀರಿದ ವ್ಯಕ್ತಿತ್ವ ಅವರದಾಗಿತ್ತು. ನಾಡಿನಲ್ಲಿ ಕೋಮುಸೌಹರ್ಾಧತೆ, ಸಾಮರಸ್ಯ ಕಾಪಾಡಿ ಬೆಳಸಿ, ಇತರರಿಗೆ ಮಾದರಿಯಾಗಿದ್ದ ಟಿಪ್ಪು ಸುಲ್ತಾನರನ್ನು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ನೆನೆದು, ಗೌರವಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ ಅವರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿದೇಶಪಾಂಡೆ ಅವರು ಕಳುಹಿಸಿದ್ದ ಟಿಪ್ಪು ಸುಲ್ತಾನ ಜಯಂತಿ ಸಂದೇಶವನ್ನು ಸಭೆಯಲ್ಲಿ ವಾಚಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಇತಿಹಾಸ ತಜ್ಞ ಡಾ.ಎಮ್.ವಾಯ್.ಸಾವಂತ ಅವರು ಹಜರತ್ ಟಿಪ್ಪು ಸುಲ್ತಾನರವರ ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ವಿಶೆಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ನಗರ ಪೊಲೀಸ್ ಆಯುಕ್ತ ಎಮ್.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.ಜಿ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲಾ ಪಂಚಾಯತ ಉಪಕಾರ್ಯದಶರ್ೀ ಎಸ್.ಜಿ.ಕೊರವರ, ಉಪವಿಭಾಗಾಧಿಕಾರಿ ಮಹ್ಮಮದ ಜುಬೇರ, ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ಮಾಜಿ ಮಹಾಪೌರ ಐ.ಎಂ.ಜವಳಿ, ಉದರ್ು ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೋ. ಸಗರ್ಿರೋ ಮತ್ತು ಎ.ಸಿ.ಪಿ. ಎಂ.ಎನ್.ರುದ್ರಪ್ಪ, ತಹಶೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾಥರ್ಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸಕೃತಿ ಇಲಾಖೆ ಸಹಾಯಕ ನಿದರ್ೇಶಕ ಎಸ್.ಕೆ.ರಂಗಣ್ಣವರ ಸ್ವಾಗತಿಸಿದರು. ಕುಮಾರಿ ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಚಿವ ಆರ್.ವಿ.ದೇಶಪಾಂಡೆ ಸಂದೇಶ
ಬ್ರಿಟಿಷರ ವಿರುದ್ಧ ಕೆಚ್ಚಿನಿಂದ ಹೊರಾಡಿದ ಟಿಪ್ಪುವು ದೇಶಕ್ಕೆ ಸ್ವಾತಂತ್ರ್ಯ ಗಳಿಸಿ ಕೊಡುವುದನ್ನು ದೊಡ್ಡ ಕನಸಾಗಿ ಕಟ್ಟಿಕೊಂಡಿದ್ದನು. ಇದ್ದಕ್ಕೆ ತಕ್ಕಂತೆ ಪ್ರೆಂಚರೊಂದಿಗೆ ಸ್ನೇಹವನ್ನು ಗಳಿಸಿ, ಅಗತ್ಯ ರಣತಂತ್ರವನ್ನು ರೂಪಿಸಿರುವುದು ಮಾತ್ರವಲ್ಲದೇ ರಾಕೆಟ್ ತಂತ್ರಜ್ಞಾನದಂತಹ ಅತ್ಯಾಧುನಿಕ ಯುದ್ಧ ಕೌಶಲ್ಯಗಳನ್ನು ಬಳಸುವುದರಲ್ಲಿ ನಿಷ್ಣಾತನಾಗಿದ್ದ ಧೈರ್ಯ-ಶೌರ್ಯಗಳಿಗೆ ಹೆಸರಾಗಿದ್ದ ಟಿಪ್ಪುವು ವೀರೋಚಿತ ಸೋಲನ್ನು ಕಂಡನೇ ವಿನಾ ಎಂದಿಗೂ ಅವನು ವೈರಿಗಳ ಮುಂದೆ ಮಂಡಿಯೂರಿ ಶರಣಾಗಲಿಲ್ಲ.
ಟಿಪ್ಪು ಅಪ್ರತಿಮ ವೀರಯೋಧ ಮಾತ್ರವಲ್ಲದೇ ಅತ್ಯುತ್ತಮ ಆಡಳಿತಗಾರನು ಹೌದು. ಮೂಲತಃ ಸುಧಾರಣಾವಾದಿಯಾದ ಅತ ಕಂದಾಯ ಇಲಾಖೆಯಲ್ಲಿ ಜಾರಿಗೆ ತಂದ ವಿನೂತನ ಕ್ರಮಗಳು ಇಂದಿಗೂ ಅನುಕರಣ ಯೋಗ್ಯವಾಗಿದೆ.
ಸಾಮಾಜಿಕ ನ್ಯಾಯ ಹಾಗೂ ಜ್ಯಾತ್ಯಾತೀತ ನಿಲುವು ಹೊಂದಿ, ದಿಟ್ಟತನ, ಧೈರ್ಯ ಮತ್ತು ಸ್ವಾಭಿಮಾನಕ್ಕೆ ಸದಾ ಹೆಸರಾಗಿದ್ದ ಟಿಟು ಮೈಸೂರಿನ ಹುಲಿಯೆಂದೇ ಖ್ಯಾತಿ ಪಡೆದಿದ್ದ. ಶೌರ್ಯ, ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಸಂಕೇತವಾಗಿದ್ದ ಇಂತಹ ಮಹಾನ ವ್ಯಕ್ತಿತ್ವವನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.