ಟಿಪ್ಪು ಜಯಂತಿ ನಿಷೇಧಕ್ಕೆ ಬಿಜೆಪಿ ರಾಜ್ಯಪಾಲರಿಗೆ ಮನವಿ

ಲೋಕದರ್ಶನ ವರದಿ

ಕೊಪ್ಪಳ 09: ಟಿಪ್ಪು ಸುಲ್ತಾನ ಒಬ್ಬ ಮತಾಂಧ, ಹಿಂದುಗಳ ದಾಳಿಕೋರನಾಗಿದ್ದು, ಅಲ್ಪಸಂಖ್ಯಾತರ ಮತಗಳ ಓಲೈಕೆಗೆ ರಾಜ್ಯ ಸಕರ್ಾರ ಮುಂದಾಗಿ ನ. 10ರಂದು ಟಿಪ್ಪು ಸುಲ್ತಾನ ಜಯಂತಿ ಆಚರಿಸಲು ಸಿದ್ಧತೆ ನಡೆಸಿರುವುದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಡಳಿತ ಭವನದ ಮುಂದುಗಡೆ ಶುಕ್ರವಾರದಂದು ಭಾರತೀಯ ಜನತಾ ಪಕ್ಷ ಟಿಪ್ಪು ಸುಲ್ತಾನ ಜಯಂತಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.

ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶ ಭಕ್ತರು ಬಲಿದಾನಗೈದಿದ್ದಾರೆ. ಅಂತಹ ಮಹನೀಯರ ಸ್ಮರಣೆ, ಆದರ್ಶಗಳ ಪಾಲನೆಯಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಆದರೆ ಇಂತಹ ಮಹನೀಯರನ್ನು ಧರ್ಮ, ಹಾಗೂ ಜಾತಿಗೆ ಸೀಮಿತ ಮಾಡಿರುವುದು ಖೇಧಕರ. ಆದರೆ ಹಿತಿಹಾಸವನ್ನು ತಿರುಚಿ ಸುಳ್ಳು ಮಾಹಿತಿ ಹುಟ್ಟು ಹಾಕಿ ಅಲ್ಪಸಂಖ್ಯಾತ ಮತಗಳ ಓಲೈಕೆಗೆ ಟಿಪ್ಪು ಒಬ್ಬ ಸ್ವತಂತ್ರ್ಯ ಹೋರಾಟಗಾರನೆಂದು ಬಿಂಬಿಸಿ ಜಯಂತಿ ಆಚರಣೆಗೆ ಮುಂದಾಗಿರುವುದು ನೈಜ ಸ್ವತಂತ್ರ ಹೋರಾಟಗಾರರಿಗೆ ಮಾಡುವ ಅಪಮಾನವಾಗಿದೆ. ಪಕ್ಷದ ಹಿರಿಯ ಮುಖಂಡರಾದ ರಾಘವೇಂದ್ರ ಪಾನಘಂಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರದಲ್ಲಿ ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಸಿ.ಡಿ ಗೀತಾರವರ ಮುಖಾಂತರ ರಾಜ್ಯಪಾಲರಿಗೆ ಆಚರಣೆಯನ್ನು ನಿಷೇಧಿಸುವಂತೆ ರಾಜ್ಯ ಸಕರ್ಾರಕ್ಕೆ ಆದೇಶಿಸಬೇಂದು ಒತ್ತಾಯಿಸಿ ಮನವಿಪತ್ರ ಸಲ್ಲಿಸಲಾಯಿತು.

ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಪಕ್ಷದ ಮುಖಂಡರಾದ ರಾಜು ಬಾಕಳೆ, ತೋಟಪ್ಪ ಕಾಮನೂರ, ಸುನೀಲ ಹೆಸರೂರ, ಕೊಟ್ರಗೌಡ ಹುರಕಡ್ಲಿ, ಈಶಪ್ಪ ಹಿರೇಮನಿ, ವಿರೇಶ ಬಲಕುಂದಿ, ಸಣ್ಣಕನಕಪ್ಪ ಚಲುವಾದಿ, ಗವಿರಾಜ ಗೊರವರ, ಗಣೇಶ ಹೊರತಟ್ನಾಳ, ಪುಟ್ಟರಾಜ ಚಕ್ಕಿ, ಶೋಭಾ ನಗರಿ, ವೀಣಾ ಬನ್ನಿಗೋಳ, ಬಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.